Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವರ ಅಭಯ

National camps will go on despite covid-19: kiran Rijiju

ಕೊರೊನಾ ವೈರಸ್ ಕ್ರೀಡಾಲೋಕಕ್ಕೂ ದೊಡ್ಡ ಆಘಾತವನ್ನು ನೀಡಿದೆ. ಈ ಭಯಾನಕ ವೈರಸ್‌ನ ಕಾರಣದಿಂದಾಗಿ ಇತರ ಕ್ಷೇತ್ರಗಳಂತೆಯೇ ಕ್ರೀಡಾಪಟುಗಳು ಕೂಡ ಮನೆಯಲ್ಲಿಯೇ ಇದ್ದು ಕಾಲಕಳೆಯಬೇಕಾದ ಪರಿಸ್ಥಿತಿಯಿದೆ. ಆದರೆ ಇದು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳ ಅಭ್ಯಾಸಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ.

ಭಾರತದ ಕ್ರೀಡಾಪಟುಗಳು ಈ ಮಹತ್ವದ ಟೂರ್ನಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊರೊನಾ ವೈರಸ್‌ನ ಕಾರಣದಿಂದ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರುವುದರಿಂದಾಗಿ ಪೂರ್ಣ ಪ್ರಮಾಣದಲ್ಲಿ ತರಬೇತಿಗೆ ತೊಡಗಿಕೊಳ್ಳಲು ಆಥ್ಲೀಟ್‌ಗಳಿಗೆ ಅಸಾಧ್ಯವಾಗಿದೆ. ಆದರೆ ಈ ಬಗ್ಗೆ ಈಗ ಕೇಂದ್ರ ಕ್ರೀಡಾ ಸಚಿವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಕ್ರಿಡಾಪಟುಗಳ ತರಬೇತಿಗೆ ಸಂಬಂಧಪಟ್ಟಂತೆ ಮಾತನಾಡಿದ್ದು ಕ್ರೀಡಾಪಟುಗಳ ಸುರಕ್ಷತೆ ನಮಗೆ ಬಹಳ ಮುಖ್ಯ. ಸುರಕ್ಷತೆಯ ಜೊತೆಗೆ ತರಬೇತಿಗೆ ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತರಬೇತಿಯನ್ನು ತಡಮಾಡುವುದರಿಂದ ಆಟಗಾರರಿಗೆ ಹಿನ್ನೆಡೆಯುಂಟು ಮಾಡಲು ಬಯಸುವುದಿಲ್ಲ. ಹಾಗಾಗಿ ಪರಿಸ್ಥಿಯ ಅವಲೋಕನವನ್ನು ಮಾಡಿಕೊಂಡು ಶಿಬರಗಳನ್ನು ಆರಂಭಿಸಬೇಕಾಗುತ್ತದೆ. ಪ್ರತಿ ಪ್ರಕರಣಗಲನ್ನು ಅವಲೋಕಿಸಿಕೊಂಡು ನಿರ್ಧರಿಸಬೇಕಾಗುತ್ತದೆ. ಬೆಂಗಳೂರು ಸಹಿತ ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಅಂತಾ ಪ್ರದೇಶಳಲ್ಲಿ ನಮ್ಮ ಕ್ರೀಡಾಪಟುಗಳು ಶಿಬಿರಕ್ಕೆ ಸೇರಿಕೊಳ್ಳು ಸಾಧ್ಯವಾಗುವುದಿಲ್ಲ. ಹೀಗಾಗಿ ಇವೆಲ್ಲವನ್ನು ಗಮನಿಸಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಐಪಿಎಲ್ 2020: ತಾತ್ಕಾಲಿಕ ವೇಳಾಪಟ್ಟಿಗೆ 'ಸ್ಟಾರ್ ಇಂಡಿಯಾ' ಅಸಮಾದಾನ
ಇದೇ ಸಂದರ್ಭದಲ್ಲಿ ಕಿರಣ್ ರಿಜಿಜು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನವನ್ನು ಅನುಸರಿಸಿಕೊಂಡು ರಾಷ್ಟ್ರೀಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದಿದ್ದಾರೆ. ಆಯಾಯ ರಾಜ್ಯಗಳಲ್ಲಿ ಇರುವ ಪರಿಸ್ಥಿತಿಯನ್ನು ಗಮನಿಸಿಕೊಂಡು ಆರಂಭಿಸಲಾಗುತ್ತದೆ. ಪಾಟಿಯಾಲದಲ್ಲಿ ಬಾಕ್ಸರ್‌ಗಳು ಈಗಾಗಲೇ ಸೇರಿಕೊಂಡುದ್ದು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹೀಗೆ ಒಂದೊಂದಾಗಿ ಸಿದ್ದತೆಗಳೊಂದಿಗೆ ಶಿಬಿರವನ್ನು ಆಯೋಜಿಸುವ ಬಗ್ಗೆ ಕ್ರೀಡಾ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

Story first published: Monday, July 20, 2020, 16:27 [IST]
Other articles published on Jul 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+