ಶೇಕ್ ಹ್ಯಾಂಡ್ ಕೊಟ್ಟ ನವೀನ್‌ಗೆ ಕೊಹ್ಲಿ ಹೇಳಿದ್ದೇನು? ಬಹಿರಂಗವಾಯ್ತು ಇಬ್ಬರ ನಡುವಿನ ಆ ಸಂಭಾಷಣೆ!
ಭಾರತ ಹಾಗೂ ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಹಲವು ದಾಖಲೆಗಳನ್ನು ಭಗ್ನಗೊಳಿಸಿದೆ. ಈ ಗೆಲುವಿನ ಮೂಲಕ ಭಾರತ ಈ ವಿಶ್ವಕಪ್‌ನಲ್ಲಿ ಎರಡನೇ ಗೆಲುವು ಸಾಧಿಸಿ ಮುನ್ನುಗ್ಗಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅಮೋಘ ಇನ್ನಿಂಗ್ಸ್‌ನಷ್ಟೇ ಮತ್ತೊಂದು ಘಟನೆ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅದುವೇ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅಫ್ಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ನಡುವಿನ ಶೇಕ್ ಹ್ಯಾಂಡ್.
ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರ ನಡುವಿನ ಮಾತಿನ ಚಕಮಕಿಯ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳು ಅಫ್ಘನ್ ವೇಗಿ ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದರು. ಈ ಪಂದ್ಯದಲ್ಲಿಯೂ ಇದು ಮುಂದುವರಿದಿತ್ತು. ಆದರೆ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ವಿರಾಟ್ ಕೊಹ್ಲಿ ಸನಿಹಕ್ಕೆ ಬಂದ ನವೀನ್ ಉಲ್ ಹಕ್ ಕೈಕುಲುಕುವ ಮೂಲಕ ಇಬ್ಬರು ಆಟಗಾರರು ಸ್ನೇಹಹಸ್ತ ಚಾಚಿದ್ದಾರೆ. ಈ ಅಚ್ಚರಿಯ ಘಟನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ನಗುಮುಖದ ಹ್ಯಾಂಡ್‌ಶೇಕ್
ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಬಳಿಗೆ ನವೀನ್ ಉಲ್ ಹಕ್ ಬಂದು ಕೈಕುಲುಕಿದಾಗ ಸಣ್ಣ ಸಂಭಾಷಣೆಯ ಜೊತೆಗೆ ನಗುಮುಖದಿಂದ ಇಬ್ಬರು ಆಟಗಾರರು ಸ್ಪಂದಿಸಿದ್ದಾರೆ. ಹಾಗಾದರೆ ಆ ಕ್ಷಣದಲ್ಲಿ ಇಬ್ಬರು ಆಟಗಾರರ ಮಧ್ಯೆ ನಡೆದ ಸಂಭಾಷಣೆ ಏನು ಎನ್ನುವುದು ಕೂಡ ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ವಿಚಾರವಾಗಿ ಸ್ವತಃ ನವೀನ್ ಉಲ್ ಹಕ್ ಅವರೇ ಮಾತನಾಡಿದ್ದು ಕೊಹ್ಲಿ ಹಾಗೂ ತಮ್ಮ ನಡುವೆ ಆ ಕ್ಷಣದಲ್ಲಿ ನಡೆದ ಸಂಭಾಷಣೆ ಏನು ಎನ್ನುವುದನ್ನು ಅವರು ಬಹಿರಂಗಪಡಿಸಿದ್ದಾರೆ.
ಮಾತುಕತೆ ವಿವರಿಸಿದ ನವೀನ್
ಈ ಘಟನೆಯ ಬಗ್ಗೆ ನವೀನ್ ಉಲ್ ಹಕ್ ಹೇಳಿಕೆ ನೀಡಿದ್ದಾರೆ. "ಮೈದಾನದಲ್ಲಿ ಏನು ಆಗಿದೆಯೋ ಅದು ಮೈದಾನದ ಒಳಗೆ ಆಗಿ ಹೋಗಿದೆ. ಹೊರಗಡೆ ಏನೂ ಆಗಿಲ್ಲ. ನಾವಿನಬ್ಬರೂ ಶೇಕ್ ಹ್ಯಾಂಡ್ ಮಾಡಿದ ಬಳಿಕ ಕೊಹ್ಲಿ ಇಲ್ಲಿಗೆ ಮುಗಿಸೋಣ ಎಂದರು. ನಾನು ಕೂಡ ಇಲ್ಲಿಗೆ ಮುಗಿಸೋಣ ಎಂದೆ" ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಜೊತೆಗಿನ ಸಂಘರ್ಷಕ್ಕೆ ನವೀನ್ ಉಲ್ ಹಕ್ ಅಂತ್ಯಹಾಡಿದ್ದಾರೆ.
ನವೀನ್ ಉಲ್ ಹಕ್‌ಗೆ ಸತತವಾಗಿ ಕಾಡಿದ ಕೊಹ್ಲಿ ಅಭಿಮಾನಿಗಳು
ಇನ್ನು ಐಪಿಎಲ್‌ನಲ್ಲಿ ವಿರಾಟ್ ಜೊಹ್ಲಿಯನ್ನು ನವೀನ್ ಉಲ್ ಹಕ್ ಕೆಣಕಿದ ಬಳಿಕ ಕೊಹ್ಲಿ ಅಭಿಮಾನಿಗಳು ನವೀನ್‌ಗೆ ಸಾಕಷ್ಟು ಕಾಡಿದ್ದಾರೆ. ನವೀನ್ ಉಲ್ ಹಕ್ ಹೋದಲ್ಲಿ ಬಂದಲ್ಲಿ ಕೊಹ್ಲಿ ಕೊಹ್ಲಿ ಎಂದು ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ತಿರುಗೇಟು ನೀಡಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿಯೂ ಇದು ನಡೆದಿತ್ತು. ಇದೀಗ ಕೊಹ್ಲಿ ಹಾಗೂ ನವೀನ್ ಉಕ್ ಹಕ್ ನಡುವಿನ ಈ ಶೇಕ್‌ಹ್ಯಾಂಡ್ ಪ್ರಸಂಗದ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳು ಅಫ್ಘನ್ ವೇಗಿಗೆ ಕಾಡುವುದನ್ನು ನಿಲ್ಲಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications