'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!

ಹೈದರಾಬಾದ್, ಡಿಸೆಂಬರ್ 6: ವಿಶ್ವ ಟಿ20 ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ, ಕೆಲ ಯುವ ಕ್ರಿಕೆಟಿಗರನ್ನು ವಿಶ್ವಕ್ಕೆ ಪರಿಚಯಿಸುವ ಕಾತರದಲ್ಲಿದೆ. ಇದು ವಿಂಡೀಸ್ ನೂತನ ನಾಯಕ ಕೀರನ್ ಪೊಲಾರ್ಡ್ ಅವರ ಮಾತಲ್ಲೇ ವ್ಯಕ್ತವಾಗಿದೆ. ಅಲ್ಲದೆ, ರಣಹದ್ದುಗಳಿಂದ ಯುವ ತಾರೆಗಳನ್ನು ರಕ್ಷಿಸಬೇಕಿದೆ ಎಂದು ಪೊಲಾರ್ಡ್ ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
3 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿರುವ ವೆಸ್ಟ್ ಇಂಡೀಸ್‌ನ ಟಿ20 ತಂಡದಲ್ಲಿ ಕ್ರಿಸ್‌ಗೇಲ್, ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ಮತ್ತು ಡ್ವೇನ್ ಬ್ರಾವೋ ಅವರಂತ ಅನುಭವಿ ಆಟಗಾರರಿಲ್ಲ, ಬದಲಿಗೆ ಬ್ರ್ಯಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಹೇಡನ್ ವಾಲ್ಶ್ ಜೂನಿಯರ್ ನಂತ ಯವ ಆಟಗಾರರು ಕಾಣಿಸಿಕೊಂಡಿದ್ದಾರೆ.
ಭಾರತ ವಿರುದ್ಧ ಪ್ರವಾಸಿ ವಿಂಡೀಸ್, ಡಿಸೆಂಬರ್ 6ರಿಂದ ಟಿ20 ಸರಣಿಯಲ್ಲಿ ಆಡುತ್ತಿದ್ದು, ಪ್ರತಿಭಾಪ್ರದರ್ಶನಕ್ಕೆ ಎದುರು ನೋಡುತ್ತಿರುವ ಯುವ ಆಟಗಾರರ ಬಗ್ಗೆ ಪೊಲಾರ್ಡ್ ಹೇಳಿರುವ ಮಾತುಗಳು ನಿಜಕ್ಕೂ ಮೌಲ್ಯಯುತವಾಗಿದೆ.

ವಿಂಡೀಸ್ ಪ್ರತಿನಿಧಿಸಲು ಕಾತರರಾಗಿದ್ದಾರೆ
'ಅವರು (ಬ್ರ್ಯಾಂಡನ್ ಮತ್ತು ಕೆಸೆರಿಕ್ ವಿಲಿಯಮ್ಸ್) ಉತ್ತಮ ಆಟಗಾರರು. ನಮ್ಮಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಕೆಪಿಎಲ್)ನಿಂದ ಬಂದ ಯುವ, ಅತ್ಯುತ್ತಮ ಆಟಗಾರರು ಇದ್ದಾರೆ. ಇಲ್ಲಿ ನಿಕೋಲಸ್ ಪೂರನ್ ನಂತರವರಿದ್ದಾರೆ. ಅಲ್ಝಾರಿ ಜೋಸೆಪ್‌ನಂತ ಪ್ರತಿಭಾನ್ವಿತರು ಏಕದಿನ ತಂಡದಲ್ಲಿದ್ದಾರೆ. ಇವರೆಲ್ಲ ವೆಸ್ಟ್ ಇಂಡೀಸ್ ತಂಡ ಪ್ರತಿನಿಧಿಸಲು ಕಾತರರಾಗಿದ್ದಾರೆ,' ಎಂದು ಪೊಲಾರ್ಡ್ ಹೇಳಿದ್ದಾರೆ (ಚಿತ್ರದಲ್ಲಿ ಹೇಡನ್ ವಾಲ್ಶ್ ಜೂನಿಯರ್)

ತಂಡ ನಿರ್ವಹಣಾ ಸಮಿತಿಗೆ ತಾಳ್ಮೆ ಬೇಕು
'ಆದರೆ ಸಮಸ್ಯೆಯೇನೆಂದರೆ, ವೈಯಕ್ತಿಯವಾಗಿ ನಾವು ಅವರನ್ನು ಬಹಳ ಬೇಗನೆ ನಿರ್ಧರಿಸಿಬಿಡುತ್ತೇವೆ. ಅಂತಾರಾಷ್ಟ್ರೀಯ ಕ್ರಿಕೆಟ್ ತುಂಬಾ ತುಂಬಾ ಸವಾಲಿನದ್ದು. ತುಂಬಾ ಮುಖ್ಯ ಸಂಗತಿಯೆಂದರೆ ತಂಡ ನಿರ್ವಹಣಾ ಸಮಿತಿ ಯುವ ಆಟಗಾರರ ವಿಚಾರದಲ್ಲಿ ತುಂಬಾ ತಾಳ್ಮೆ ಹೊಂದಿರಬೇಕು,' ಎಂದು ಕೀರನ್ ವಿವರಿಸಿದರು.

ರಣಹದ್ದುಗಳಿಂದ ರಕ್ಷಿಸಬೇಕಿದೆ
ಮಾತು ಮುಂದುವರೆಸಿದ ಪೊಲಾರ್ಡ್, 'ಈ ಯುವ ಪ್ರತಿಭೆಗಳ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ತೋರಿಸಲು ಅವಕಾಶ ಮಾಡಿಕೊಡೋಣ. ಯುವ ಆಟಗಾರರ ವೃತ್ತಿಬದುಕನ್ನು ಬಲು ಬೇಗನೆ ಕೆಳಗಿಳಿಸಲು ಯತ್ನಿಸುವ ರಣಹದ್ದುಗಳಿಂದ ಕೆಲವುಸಾರಿ ನೀವು ರಕ್ಷಿಸಬೇಕಾಗುತ್ತದೆ,' ಎಂದರು.

ಭಾರತದೆದುರು ಸ್ಪರ್ಧಿಸಲು ಖುಷಿ
ವಿಶ್ವದ ಅತ್ಯುತ್ತಮ ತಂಡ ಭಾರತದೆದುರು ಸ್ಪರ್ಧಿಸುತ್ತಿರುವುದು ಒಂದು ಉತ್ತಮ ಅವಕಾಶವೆಂದೂ ಪೊಲಾರ್ಡ್ ಅಭಿಪ್ರಾಯಿಸಿದ್ದಾರೆ. 'ಭಾರತ ಕ್ರಿಕೆಟ್ ತಂಡ ತುಂಬಾ ಉತ್ತಮ ಸ್ಥಿತಿಯಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ತಂಡ ಭಾರತದ ವಿರುದ್ಧ ಆಡುತ್ತಿರುವುದು ನಮಗೆ ಒಳ್ಳೆಯ ಅವಕಾಶ ಒದಗಿಸಿದಂತಾಗಿದೆ,' ಎಂದು ಆಲ್ ರೌಂಡರ್ ಪೊಲಾರ್ಡ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications