Diamond League: ಡೈಮಂಡ್ ಲೀಗ್ ಫೈನಲ್‌ನಲ್ಲಿ ನೀರಜ್ ಕಣಕ್ಕೆ: ಇಲ್ಲಿದೆ ಸಂಪೂರ್ಣ ವರದಿ
ಭಾರತದ ಸ್ಟಾರ್ ಜಾವೆಲಿನ್ ಕ್ರೀಡಾ ಪಟು ನೀರಜ್ ಚೋಪ್ರಾ ಮತ್ತೊಮ್ಮೆ ಅಂಗಳ ಪ್ರವೇಶಿಸಲಿದ್ದಾರೆ. ಆಗಸ್ಟ್ 28 (ಗುರುವಾರ) ನೀರಜ್ ಚೋಪ್ರಾ ಜ್ಯೂರಿಚ್‌ನಲ್ಲಿಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ. ನೀರಜ್ ಚೋಪ್ರಾ ಡೈಮಂಡ್ ಲೀಗ್‌ನ 2 ಲೆಗ್‌ಗಳಲ್ಲಿ ಭಾಗವಹಿಸಲಿದ್ದಾರೆ. ಇವರು ಒಟ್ಟು 15 ಅಂಕಗಳನ್ನು ಗಳಿಸುವ ಮೂಲಕ ಫೈನಲ್‌ಗೆ ತಮ್ಮ ಭದ್ರ ಪಡಿಸಿಕೊಂಡಿದ್ದರು. ನೀರಜ್ ಈ ಬಾರಿ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ.
ಇತ್ತೀಚಿಗೆ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ 90.23 ಮೀಟರ್ ದೂರ ಜಾವೆಲಿನ್ ಎಸೆದು ಅಬ್ಬರಿಸಿದ್ದರು. ನೀರಜ್ ಈ ಹಿಂದೆ 2022 ರಲ್ಲಿ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದಿದ್ದರು. ನೀರಜ್ ಅವರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದು ಸುಲಭವಲ್ಲ. ಫೈನಲ್ ಸ್ಪರ್ಧೆಯಲ್ಲಿ ನೀರಜ್ ಗ್ರೆನಡಾದ ಆಂಡರ್ಸನ್ ಪೀಟರ್ಸ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ಕೀನ್ಯಾದ ಮಾಜಿ ವಿಶ್ವ ಚಾಂಪಿಯನ್ ಜೂಲಿಯಸ್ ಯೆಗೊ ಅವರಂತಹ ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.
\

ನೀರಜ್ ಅವರಿಗೆ ಈ ಸ್ಪರ್ಧೆಯಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಸಹ ತೀವ್ರ ಪೈಪೋಟಿ ನೀಡಬಹುದು. ಈ ಇಬ್ಬರೂ ಸ್ಟಾರ್‌ಗಳ ನಡುವಣ ಫೈನಲ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಪ್ಯಾರಿಸ್ ಲೆಗ್‌ನಲ್ಲಿ ನೀರಜ್ 88.16 ಮೀಟರ್ ಎಸೆತದೊಂದಿಗೆ ಪ್ರಶಸ್ತಿ ಗೆದ್ದಿದ್ದರು. ಇದೇ ಪ್ರದರ್ಶನವನ್ನು ಡೈಮಂಡ್ ಲೀಗ್‌ನಲ್ಲೂ ಪ್ರದರ್ಶಿಸುವ ವಿಶ್ವಾಸವನ್ನು ನೀರಜ್ ಹೊಂದಿದ್ದಾರೆ. ಇವರು ಡೈಮಂಡ್ ಲೀಗ್‌ನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದ್ದಾರೆ.
ಪಂದ್ಯ ನಡೆಯುವುದು ಯಾವಾಗ?
ಭಾರತೀಯ ಸಮಯ ರಾತ್ರಿ 11:15 ಕ್ಕೆ ಫೈನಲ್ ಆರಂಭವಾಗತ್ತದೆ.
ಈ ಲೀಗ್ ಭಾರತದಲ್ಲಿ ಎಲ್ಲಿ ನೇರ ಪ್ರಸಾರವಾಗುತ್ತದೆ?
ಡೈಮಂಡ್ ಲೀಗ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.
ಡೈಮಂಡ್ ಲೀಗ್‌ನಲ್ಲಿ ಎಷ್ಟು ಆಟಗಾರರು ಭಾಗವಹಿಸುತ್ತಾರೆ?
ಸೈಮನ್ ವೀಲ್ಯಾಂಡ್, ಆಡ್ರಿಯನ್ ಮಾರ್ಡೇರ್, ಜೂಲಿಯಸ್ ಯೆಗೊ, ಕೆಶಾರ್ನ್ ವಾಲ್ಕಾಟ್, ಆಂಡರ್ಸನ್ ಪೀಟರ್ಸ್, ಜೂಲಿಯನ್ ವೆಬರ್ ಹಾಗೂ ನೀರಜ್ ಚೋಪ್ರಾ ಫೈನಲ್‌ನಲ್ಲಿ ಭಾಗವಹಿಸಲಿದ್ದಾರೆ.
ಭಾರತದ ಸ್ಟಾರ್ ಕ್ರೀಡಾ ಪಟು ನೀರಜ್ ಚೋಪ್ರಾ ಹಲವು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ನೀರಜ್, ಮತ್ತೊಂದು ಮಹತ್ವದ ಪ್ರಶಸ್ತಿ ಎದುರು ನೋಡ್ತಾ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications