Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

90.23 ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ

ನೀರಜ್ ಚೋಪ್ರಾ ತಮ್ಮ ದೊಡ್ಡ ಕನಸನ್ನು ಈಡೇರಿಸಿಕೊಂಡಿದ್ದಾರೆ. ಇವರು ದೋಹಾ ಡೈಮಂಡ್‌ ಲೀಗ್‌ನಲ್ಲಿ ಅಮೋಘ ಲಯಕ್ಕೆ ಮರಳಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ 90 ಮೀಟರ್ ಮಾರ್ಕ್‌ ದಾಟಿರುವ ನೀರಜ್‌ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ನೀರಜ್‌ ತಮ್ಮ ದೊಡ್ಡ ಕನಸನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ. ನೀರಜ್‌ ಚೋಪ್ರಾ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಜಾವೇಲಿನ್‌ನ್ನು 90 ಮೀಟರ್‌ಗೂ ದೂರ ಎಸೆದಿದ್ದಾರೆ.

ನೀರಜ್‌ ಚೋಪ್ರಾ ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದಾಗಲು 90 ಮೀಟರ್‌ ಮಾರ್ಕ್‌ ದಾಟಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಾಧನೆಯನ್ನು ನೀರಜ್‌ ಶುಕ್ರವಾರ ಈಡೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ನೀರಜ್‌ ಅವರ ಬೆಸ್ಟ್ ಪ್ರದರ್ಶನ ಸ್ಟಾಕ್‌ ಹೋಮ್ ಡೈಮಂಡ್‌ ಲೀಗ್‌ನಲ್ಲಿ ಮೂಡಿ ಬಂದಿತ್ತು. ಈ ಟೂರ್ನಿಯಲ್ಲಿ ನೀರಜ್‌ 89.94 ದೂರ ಎಸೆದಿದ್ದೇ ದೊಡ್ಡ ಸಾಧನೆ ಆಗಿದೆ.

Neeraj Chopra Breaks 90-Meter Barrier in Javelin Throw at Doha Diamond League

ನೀರಜ್ ಬಹಳ ಸಮಯದಿಂದ 90 ಮೀಟರ್ ಎಸೆಯಲು ಪ್ರಯತ್ನಿಸುತ್ತಿದ್ದರು. ಆದರೆ ಯಶ ಕಂಡಿರಲಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಈ ಅಡಚಣೆಯನ್ ದಾಟಿದರು. ಇದು ನೀರಜ್ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆ. ನೀರಜ್‌ ಶುಕ್ರವಾರ 90.23 ಮೀ. ದೂರ ಜಾವೇಲಿನ್ ಎಸೆದಿದ್ದಾರೆ. ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಪ್ರಥಮ ಸ್ಥಾನ ಪಡೆದರು. ಐದನೇ ಪ್ರಯತ್ನದಲ್ಲಿ ಅವರು 91.06 ಮೀ ಎಸೆತವನ್ನು ಎಸೆದರು. ನೀರಜ್‌ ಈ ಟೂರ್ನಿಯಲ್ಲಿ ಅಮೋಘ ಆರಂಭವನ್ನು ಪಡೆದರು. ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲೇ 88.44 ಮೀಟರ್ ದೂರ ಎಸೆದು ಮಿಂಚಿದರು.

ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಅವರು ಜಾವೆಲಿನ್‌ ಎಸೆತದಲ್ಲಿ 90 ಮೀಟರ್‌ಗೂ ದೂರ ಎಸೆಯುವ ಆಸೆಯನ್ನು ಹೊಂದಿದ್ದರು. ಆದರೆ ಇದರು ಸಾಕಾರವಾಗಿರಲಿಲ್ಲ. ಶುಕ್ರವಾರ ಈ ಆಸೆ ಕೈ ಗೂಡುತ್ತಿದ್ದಂತೆ ಈ ಸಾಧನೆ ಮಾಡಿದ ಏಷ್ಯಾದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮೊದಲು ಪಾಕಿಸ್ತಾನದ ಅರ್ಷದ್ ನದೀಮ್ (92.97) ಮತ್ತು ಚೈನೀಸ್‌ ತೈಪೆಯ ಚಾವೊ ಸನ್ ಚೆಂಗ್ (91.36) ಈ ಸಾಧೆನ ಮಾಡಿದ್ದರು. ಈಗ ಈ ಸಾಲಿಗೆ ನೀರಜ್‌ ಚೋಪ್ರಾ ಸೇರಿಕೊಂಡಿದ್ದಾರೆ. ಇನ್ನು ನೀರಜ್‌ ಚೋಪ್ರಾ 90 ಮೀಟರ್‌ ಮಾರ್ಕ್ ದಾಟಿದ ವಿಶ್ವದ 25ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಬೆಳ್ಳಿ ಸಾಧನೆ

ನೀರಜ್‌ ಚೋಪ್ರಾ ಈ ಲೀಗ್‌ನಲ್ಲಿ 90 ಮೀಟರ್ ಮಾರ್ಕ್ ದಾಟುವಲ್ಲಿ ಸಫಲರಾದರೂ ಸಹ ಬಂಗಾರದ ಸಾಧನೆಯನ್ನು ಮಿಸ್ ಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜರ್ಮನಿಯ ಜೂಲಿಯನ್‌ ವೆಬರ್‌ 91.06 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಅಮೋಘ ಸಾಧನೆ ಮಾಡಿದರು. ಈ ಮೂಲಕ ಇವರು ಬಂಗಾರ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಜಾವೆಲಿನ್ ಥ್ರೋ ಸ್ಪರ್ಧಿ ಕಿಶೋರ್ 78.60 ಮೀಟರ್ ದೂರ ಜಾವೆಲಿನ್ ಎಸೆದರು.

Story first published: Saturday, May 17, 2025, 7:30 [IST]
Other articles published on May 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+