ಭಾರತದಲ್ಲಿ ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸದ್ಯ ದೇಶದಲ್ಲಿ ಐಪಿಎಲ್ ಹವಾ ನಡೆಯುತ್ತಿದೆ. ಐ ಐಪಿಎಲ್ ಮೇ 25 ರಂದು ಮುಗಿಯಲಿದೆ. ಈ ಮೆಗಾ ಲೀಗ್ ಮುಗಿಯುವ ಒಂದು ದಿನ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಕ್ರೀಡೆಯ ಉತ್ಸವ ನಡೆಯಲಿದೆ. ಈ ಮೇಗಾ ಟೂರ್ನಿಗೆ ಭರದ ಸಿದ್ಧತೆಗಳು ನಡೆದಿದ್ದು, ಈ ಲೀಗ್‌ಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ.
ಮೇ 24 ರಂದು ಬೆಂಗಳೂರಿನಲ್ಲಿ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಥ್ರೋ ಟೂರ್ನಾಮೆಂಟ್ ನಡೆಯಲಿದೆ. ದೇಶದ ಸ್ಟಾರ್ ಜಾವೆಲಿನ್ ಕ್ರೀಡಾ ಪಟು ನೀರಜ್ ಚೋಪ್ರಾ ಈ ಟೂರ್ನಿಯಲ್ಲಿ ಜಾವೆಲಿನ್ ಎಸೆಯುವುದನ್ನು ಕಾಣಬಹುದಾಗಿದೆ. ವಿಶೇಷ ಎಂದರೆ ಈ ಟೂರ್ನಿಗೆ ನೀರಜ್ ತನ್ನ ಎದುದಾಳಿ, ಪಾಕಿಸ್ತಾನದ ಜಾವೆಲಿನ್ ಪಟು ಅರ್ಷದ್ ನದೀಮ್ ಅವರಿಗೆ ಆಹ್ವಾನ್ ನೀಡಿದ್ದಾರೆ. ಈ ಇಬ್ಬರೂ ಸ್ಟಾರ್ ಆಟಗಾರರು ಬಿಗ್ ಈವೆಂಟ್‌ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.

ನೀರಜ್ ಚೋಪ್ರಾ ನೀಡಿರುವ ಆಹ್ವಾನವನ್ನು, ಪಾಕ್ ಆಟಗಾರ ಅರ್ಷದ್ ನದೀಮ್ ನಿರಾಕರಿಸಿದ್ದಾರೆ. ಭಾರತಕ್ಕೆ ಬರಲು ಅರ್ಷದ್ ಹಿಂದೇಟು ಹಾಕಿದ್ದಾರೆ. ಆ ವೇಳೆ ನಾನು ಬೇರೆ ಟೂರ್ನಿಗಳಲ್ಲಿ ಬ್ಯೂಸಿ ಇರುವುದಾಗಿ ತಿಳಿಸಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿ, ಬಂಗಾರದ ಸಾಧನೆಯನ್ನು ಮಾಡಿದ್ದ ಪಾಕ್‌ನ ಅರ್ಷದ್ ನದೀಮ್, ನೀರಜ್ ಚೋಪ್ರಾ ಅವರ ಆಮಂತ್ರಣವನ್ನು ನಿರಾಕರಿಸಿದ್ದಾರೆ. ಭಾರತದಲ್ಲಿ ಮೇ 24 ರಂದು ಎಸ್‌ಸಿ ಕ್ಲಾಸಿಕ್ ಟೂರ್ನಿ ನಡೆಯಲಿದೆ. ಇದೇ ವೇಳೆ ಅಂದರೆ, ಮೇ 22 ರಂದು ಕೋರಿಯಾದಲ್ಲಿ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ಸ್ ಶಿಪ್ ನಡೆಯಲಿದೆ. ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಹಿನ್ನೆಲೆ ತಾನು ಎನ್‌ಸಿ ಕ್ಲಾಸಿಕ್ ಟೂರ್ನಿಗೆ ಬರಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ನೀರಜ್ ಚೋಪ್ರಾ ಈ ಟೂರ್ನಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಪ್ರತಿಕಾಗೋಷ್ಠಿಯಲ್ಲಿ ಈ ಸಂಬಂಧ ಹೇಳಿಕೆಯನ್ನು ನೀಡಿದ್ದಾರೆ. ಎನ್‌ಸಿ ಕ್ಲಾಸಿಕ್ ಟೂರ್ನಿಗೆ ನಾನು ಅರ್ಷದ್‌ಗೆ ಆಹ್ವಾನ ನೀಡಿದ್ದೇನೆ. ಆದರೆ ಅವರು ತರಬೇತುದಾರರನ್ನು ಭೇಟಿ ಆಗಿ ತಿಳಿಸುವುದಾಗಿ ತಿಳಿಸಿದ್ದಾರೆ. ಇವರು ಇನ್ನು ಯಾವುದನ್ನು ಸಹ ಧೃಡಪಡಿಸಿಲ್ಲ. ಅರ್ಷದ್ ಹಾಗೂ ನೀರಜ್ ಚೋಪ್ರಾ ಇಬ್ಬರು ವಿಶ್ವದಲ್ಲಿ ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಈ ಇಬ್ಬರೂ ಮೈದಾನಕ್ಕೆ ಇಳಿದಾಗಲೆಲ್ಲಾ ಎಲ್ಲರ ಚಿತ್ತ ಕದ್ದಿರುತ್ತಾರೆ.

ಕಳೆದ ವರ್ಷ ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪಾಕ್‌ನ ಸ್ಟಾರ್ ಆಟಗಾರ ಅರ್ಷದ್ ನದೀಮ್ ಚಿನ್ನದ ಸಾಧನೆ ಮಾಡಿದ್ದರು. ಇವರು ಈ ಕ್ರೀಡಾ ಕೂಟದಲ್ಲಿ ನೀರಜ್ ಚೋಪ್ರಾ ಅವರಿಗಿಂತ 2.97 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಅಲ್ಲದೆ ಬಂಗಾರದ ನಗೆ ಬೀರಿದ್ದರು. ಈ ಟೂರ್ನಿಯಲ್ಲಿ ನೀರಜ್ 89.45 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರು.