Neeraj Chopra: ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಬಂಗಾರ ಗೆದ್ದ ನೀರಜ್ ಚೋಪ್ರಾ
ಭಾರತದ ಭರವಸೆಯ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಪ್ಯಾರಿಸ್ ಡೈಮಂಡ್ ಲೀಗ್ ಫೈನಲ್ ಪಂದ್ಯದಲ್ಲಿ ಭಾರತದ ನೀರಜ್ ಅಮೋಘ ಸಾಧನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಜಾವೆಲಿನ್ ಎಸೆದ ನೀರಜ್ ಪೋಡಿಯಂಗೆ ಹತ್ತಿರವಾಗಿದ್ದರು. ಆದರೆ ಕೊನೆಯ ಪ್ರಯತ್ನದವರೆಗೂ ಈ ಮಾರ್ಕ್ ಯಾರು ಮೀರಲಿಲ್ಲ. ಪರಿಣಾಮ ನೀರಜ್ ಚೋಪ್ರಾ ಪ್ಯಾರಿಸ್ ಡ್ಯಾಮಂಡ್ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.
ಕಳೆದ ಬಾರಿಯ ಲೀಗ್‌ನಲ್ಲಿ ನೀರಜ್‌ಗೆ ಭಾರೀ ಪೈಪೋಟಿ ನೀಡಿದ್ದ ವೆಬರ್‌ಗೆ, ನೀರಜ್ ಬಂಗಾರ ಗೆಲ್ಲುವ ಯಾವುದೇ ಅವಕಾಶವನ್ನು ನೀಡಲೇ ಇಲ್ಲ. ಈ ಹಿಂದೆ ಜರ್ಮನಿಯ ಜೂಲಿಯನ್ ವೆಬರ್ ವಿರುದ್ಧ ಕಂಡಿದ್ದ ನಿರಾಸೆಯನ್ನು ಈ ಬಾರಿ ಮೆಟ್ಟಿ ನಿಂತು ಬಂಗಾರದ ಸಾಧನೆಯನ್ನು ಮಾಡಿದರು.

ಪ್ಯಾರಿ ಡೈಮಂಡ್ ಲೀಗ್‌ನ ಮೊದಲ ಪ್ರಯತ್ನದಲ್ಲೇ ನೀರಜ್ 88.16 ಮೀಟರ್ ದೂರ ಜಾವೆಲಿನ್ ಎಸೆದರು. ನೀರಜ್ ಎಸೆದ ಮೊದಲ ಥ್ರೋ ಪ್ಯಾರಿಸ್ ಡೈಮಂಡ್ ಲೀಗ್‌ನ ಅತ್ಯುತ್ತಮ ಥ್ರೋ ಎಂದು ಸಾಬೀತಾಯಿತು. ಇವರು ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ಎಸೆದರು. ಇನ್ನು ನೀರಜ್ ತಮ್ಮ ಕೊನೆಯ ಪ್ರಯತ್ನದಲ್ಲಿ 82.89 ಮೀಟರ್ ದೂರ ಜಾವೆಲಿನ್ ಎಸೆದು ಬೀಗಿದರು. ಆದರೆ ಜರ್ಮನಿಯ ವೆಬರ್ ಜಾವೆಲಿನ್ ಇಷ್ಟು ದೂರ ಜಾವೆಲಿನ್ ಎಸೆಯಲು ಸಾಧ್ಯವೇ ಆಗಲಿಲ್ಲ. ಇವರ ಬೆಸ್ಟ್ ಥ್ರೋ ಈ ಲೀಗ್‌ನಲ್ಲಿ 85.10 ಆಗಿತ್ತು. ಹೀಗಾಗಿಯೇ ವೆಬರ್ ಎರಡನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು. ಈ ಲೀಗ್‌ನ ಮೂರನೇ ಸ್ಥಾನವನ್ನು ಬ್ರೆಜಿಲ್‌ನ ಲೂಯಿಜ್ ಮೌರಿಸಿಯೊ ಡ ಸಿಲ್ವಾ (86.62 ಮೀಟರ್) ಪಡೆದರು.

ಇದಕ್ಕೂ ಮೊದಲು ಡೈಮಂಡ್ ಲೀಗ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ವೆಬರ್ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದರು. ಮೇ 16 ರಂದು ನಡೆದ ಸ್ಪರ್ಧೆಯಲ್ಲಿ ವೆಬರ್ 91.06 ಮೀಟರ್ ಎಸೆದು ಮಿಂಚಿದರು. ಇದೇ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 90.23 ಮೀಟರ್ ದೂರ ಎಸೆದು ಬೆಳ್ಳಿ ಪದಕ ಪಡೆದರು. ಇನ್ನು ಈ ಸ್ಪರ್ಧೆಯಲ್ಲಿ ನೀರಜ್ 90 ಮೀಟರ್ ಮಾರ್ಕ್ ಸಹ ಮೀರಿದ್ದರು. ಮೇ 23 ರಂದು ಪೋಲೆಂಡ್‌ನಲ್ಲಿ ನಡೆದ ಜನುಸ್ಜ್ ಕುಸೊಸಿಂಕಿ ಸ್ಮಾರಕ ಸ್ಪರ್ಧೆಯಲ್ಲಿ 31 ವರ್ಷದ ವೆಬರ್ ಚೋಪ್ರಾ ಅವರನ್ನು ಸೋಲಿಸಿದರು.
ಮುಂದಿನ ಸವಾಲು
ನೀರಜ್ ಚೋಪ್ರಾ ತಮ್ಮ ಅಮೋಘ ಪ್ರದರ್ಶನವನ್ನು ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಮುಂದುವರೆಸುವ ಇರಾದೆಯನ್ನು ಹೊಂದಿದ್ದಾರೆ. ಈ ಟೂರ್ನಿ ಜೂನ್ 24 ರಂದು ಜೆಕ್ ಗಣರಾಜ್ಯದಲ್ಲಿ ನಡೆಯಲಿದೆ. ಈ ಬಳಿಕ ನೀರಜ್ ಚೋಪ್ರಾ ಜುಲೈ 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications