For Quick Alerts
ALLOW NOTIFICATIONS  
For Daily Alerts
 

ಪಾವೋ ನುರ್ಮಿ ಗೇಮ್ಸ್: ನೂತನ ದಾಖಲೆ ಬರೆದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra won silver in Paavo Nurmi Games and sets new national record with 89.30 javelin throw

ಕಳೆದ ವರ್ಷ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಮತ್ತೆ ಕಣಕ್ಕಿಳಿದು ನೂತನ ದಾಖಲೆ ಬರೆದಿದ್ದಾರೆ. ಫಿನ್‌ಲೆಂಡ್ ದೇಶದಲ್ಲಿ ನಡೆದ ಪಾವೋ ನುರ್ಮಿ ಕ್ರೀಡಾಕೂಟದಲ್ಲಿ ಭಾಗವಹಿಸಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ಈ ಮೂಲಕ ಈ ಹಿಂದೆ 2021ರ ಮಾರ್ಚ್ ತಿಂಗಳಿನಲ್ಲಿ ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ನೀರಜ್ ಚೋಪ್ರಾ ಮುರಿದು ಹಾಕಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನೀರಜ್ ಚೋಪ್ರಾ 88.07 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ಅತಿ ದೂರಕ್ಕೆ ಜಾವೆಲಿನ್ ಎಸೆದ ಭಾರತೀಯ ಜಾವೆಲಿನ್ ಪಟು ಎಂಬ ದಾಖಲೆ ಬರೆದಿದ್ದರು.

ಇನ್ನು 2021ರ ಆಗಸ್ಟ್ 7ರಂದು ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದ ಫೈನಲ್ ಸುತ್ತಿನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದರು. ಸದ್ಯ ಇದೀಗ ಪಾವೋ ನುರ್ಮಿ ಕ್ರೀಡಾಕೂಟದಲ್ಲಿ ಚಿನ್ನದ ಹುಡುಗ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಬರೆದರೂ ಸಹ ಎರಡನೇ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಸೆಣಸಾಟದಲ್ಲಿ ಫಿನ್‌ಲೆಂಡ್ ದೇಶದ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

ಇನ್ನು ಈ ಕ್ರೀಡಾಕೂಟದಲ್ಲಿ 90 ಮೀಟರ್ ಜಾವೆಲಿನ್ ಥ್ರೋ ಮಾಡುವ ಕ್ರೀಡಾಪಟುವಿಗೆ ಒಂದು ಫೋರ್ಡ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಸಂಘಟಕರು ಘೋಷಣೆ ಮಾಡಿದ್ದರಾದರೂ ಯಾವುದೇ ಕ್ರೀಡಾಪಟು ಕೂಡ ಈ ಕಠಿಣ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಕ್ರೀಡಾಕೂಟ ಆರಂಭಕ್ಕೂ ಮುನ್ನ ನೀರಜ್ ಚೋಪ್ರಾ ಕೂಡ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಗುರಿಯನ್ನು ಹೊಂದಿದ್ದರಾದರೂ ಅದರಲ್ಲಿ ಸಫಲರಾಗಲಿಲ್ಲ.

ಸದ್ಯ ಭಾರತದ ಪರ ನೂತನ ದಾಖಲೆ ಬರೆದಿರುವ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಟೋಕಿಯೋ ಒಲಿಂಪಿಕ್ಸ್ ಬಳಿ ಕಣಕ್ಕಿಳಿದು ಬೆಳ್ಳಿ ಪದಕ ಗೆದ್ದ ಚೋಪ್ರಾ ದೊಡ್ಡ ಮಟ್ಟದಲ್ಲಿಯೇ ಕಮ್‌ಬ್ಯಾಕ್ ಮಾಡಿದ್ದಾರೆ.

Story first published: Thursday, June 16, 2022, 10:37 [IST]
Other articles published on Jun 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+