For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ವಿಶ್ವಕಪ್ ಸರಣಿಶ್ರೇಷ್ಠ ಆಟಗಾರನಾಗಬೇಕು; ಯುವರಾಜ್ ಸಿಂಗ್ ಆಯ್ಕೆ ಯಾರು?

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ ಕಾರಣ, ಅಜೇಯವಾಗಿ ಫೈನಲ್‌ಗೆ ತಲುಪಿದೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡುತ್ತಿದೆ.

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚಿರುವ ಭಾರತೀಯ ಆಟಗಾರರು ಮತ್ತೊಮ್ಮೆ ಇತಿಹಾಸ ಬರೆಯಲು, ಭಾನುವಾರ, ನವೆಂಬರ್ 19ರಂದು ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಶಕ್ತಿ ಮೀರಿ ಪ್ರಯತ್ನ ನಡೆಸಬೇಕಿದೆ.

Neither Kohli Nor Rohit; Yuvraj Singh Picks Player Of the Tournament in the World Cup 2023

ಇದೇ ವೇಳೆ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರಭಾವಿ ಬೌಲರ್ ಆಗಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ಪ್ರಸ್ತುತ 5.01ರ ಎಕಾನಮಿ ದರದಲ್ಲಿ 23 ವಿಕೆಟ್‌ಗಳೊಂದಿಗೆ ಅವರು ಅಗ್ರ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ.

1
1-2023

ಮೊಹಮ್ಮದ್ ಶಮಿ ತಮ್ಮ ವೀರಾವೇಶದ ಬೌಲಿಂಗ್ ಪ್ರದರ್ಶನದಲ್ಲಿ ಮೂರು ಬಾರಿ ಐದು-ವಿಕೆಟ್‌ ಸಾಧನೆ ಮತ್ತು ಒಂದು ಬಾರಿ ನಾಲ್ಕು-ವಿಕೆಟ್‌ ಸಾಧನೆ ಸೇರಿವೆ. ಮಂಗಳವಾರ ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಏಳು ವಿಕೆಟ್ ಕಬಳಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ವೇಳೆಯೂ ವೇಗಿ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಪ್ರಮುಖ ಬೌಲರ್ ಆಗಿದ್ದಾರೆ. ಈ ವೇಗಿ ಎದುರಾಳಿ ತಂಡದ ವಿಕೆಟ್ ಪಡೆಯಲು ಮತ್ತೆ ಯಶಸ್ವಿಯಾದರೆ, ಭಾರತಕ್ಕೆ ಗೆಲುವು ಖಚಿತವಾಗಿರುತ್ತದೆ.

Neither Kohli Nor Rohit; Yuvraj Singh Picks Player Of the Tournament in the World Cup 2023

ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಮೊದಲ ನಾಲ್ಕು ಪಂದ್ಯಗಳಲ್ಲಿ ಅನುಭವಿ ವೇಗಿಯನ್ನು ಆಡುವ 11ರ ಬಳಗದಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ದುರದೃಷ್ಟವಶಾತ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ, ತಂಡಕ್ಕೆ ಬಂದ ಮೊಹಮ್ಮದ್ ಶಮಿ ಹಿಂತಿರುಗಿ ನೋಡಲೇ ಇಲ್ಲ.

"ಭಾರತ ತಂಡವು ಯಾವಾಗಲೂ ಬೆಂಚ್‌ನಲ್ಲಿ ಮ್ಯಾಚ್ ವಿನ್ನರ್‌ಗಳನ್ನು ಹೊಂದಿದೆ. ಹಾರ್ದಿಕ್ ಪಾಂಡ್ಯ ಅವರ ಗಾಯವು ತಂಡದ ಮೇಲೆ ಪರಿಣಾಮ ಬೀರಿದೆ ಎಂದು ನಾನು ಹೇಳುವುದಿಲ್ಲ. ಆದರೆ ಮೊಹಮ್ಮದ್ ಶಮಿ ಹೇಗೆ ಪ್ರದರ್ಶನ ನೀಡುತ್ತಾನೆ ಎಂದು ಎಲ್ಲರೂ ಕಾಯುತ್ತಿದ್ದರು ಮತ್ತು ಅವರು ಪಂದ್ಯಾವಳಿಗೆ ಬೆಂಕಿ ಹಚ್ಚಿದ ರೀತಿ ಅತ್ಯುತ್ತಮವಾಗಿದೆ," ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದರು.

"ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಗೆ ಯಾರಾದರೂ ಅರ್ಹರಾಗಿದ್ದರೆ ಅದು ಮೊಹಮ್ಮದ್ ಶಮಿ ಎಂದು ನಾನು ಭಾವಿಸುತ್ತೇನೆ," ಎಂದು ಯುವರಾಜ್ ಸಿಂಗ್ ಅವರು ಸ್ಪೋರ್ಟ್ಸ್ ಟಾಕ್‌ಗೆ ತಿಳಿಸಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 2003ರಲ್ಲಿ ಆಟಗಾರನಾಗಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಹತ್ತಿರ ಬಂದರು. ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಗೆಲುವು ದಾಖಲಿಸಿತು.

ಇದೇ ವೇಳೆ ಈ ಹಿಂದೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರುವ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ.

2011ರ ವಿಶ್ವಕಪ್ ಗೆದ್ದ ತಂಡದಲ್ಲಿ ರೋಹಿತ್ ಶರ್ಮಾ ಆಯ್ಕೆಯಾಗದಿದ್ದರೂ, ನಂತರದ ಮುಂದಿನ ಎರಡು ಆವೃತ್ತಿಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದರು. ಆದರೆ ಭಾರತ ತಂಡವು ಎರಡೂ ಸಂದರ್ಭಗಳಲ್ಲಿ ಸೆಮಿಫೈನಲ್‌ನಲ್ಲಿ ಎಡವಿತು.

"ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಮೊದಲ ಏಕದಿನ ವಿಶ್ವಕಪ್ ಪದಕವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಅವರು ಅದಕ್ಕೆ ಅರ್ಹರು. ಏಷ್ಯಾಕಪ್‌ಗೆ ಮುನ್ನ ಭಾರತ ಏಕದಿನ ತಂಡ ಎಲ್ಲಿದೆ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಏಕೆಂದರೆ ನಮಗೆ ಉತ್ತಮ ಸಂಯೋಜನೆ ತಿಳಿದಿರಲಿಲ್ಲ".

"ಆದಾಗ್ಯೂ, ಶ್ರೇಯಾಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಪುನರಾಗಮನ ಖಂಡಿತವಾಗಿಯೂ ವ್ಯತ್ಯಾಸವನ್ನುಂಟುಮಾಡಿದೆ," ಎಂದು 2011ರ ವಿಶ್ವಕಪ್ ವಿಜೇತ ಹಾಗೂ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟರು.

Story first published: Sunday, November 19, 2023, 15:30 [IST]
Other articles published on Nov 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+