2024ರ ಐಪಿಎಲ್ ಆವೃತ್ತಿಗಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆಗೊಳಿಸಿದ ಪಟ್ಟಿಯನ್ನು ಬಹಿರಂಗಪಡಿಸಿವೆ.
ಇದೀಗ ತಮ್ಮ ತಂಡವನ್ನು ಬಲಿಷ್ಠಗೊಳಿಸಲು ಮತ್ತು ಉತ್ತಮ ಸಂಯೋಜನೆಗಳನ್ನು ಕಂಡುಕೊಳ್ಳಲು ಮಿನಿ ಹರಾಜಿನಲ್ಲಿ ಪ್ರಯತ್ನಿಸಲಿವೆ. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಶಿಷ್ಟ ಸಲಹೆಯೊಂದನ್ನು ನೀಡಿದ್ದಾರೆ.

ಹಾಲಿ ನಾಯಕ ರೋಹಿತ್ ಶರ್ಮಾ ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಅಥವಾ ಹಾರ್ದಿಕ್ ಪಾಂಡ್ಯ ಕೂಡ ಆಗಿರಬಹುದು. ಆದರೆ, ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎಂಐ (MI) ತಂಡವನ್ನು ಮುನ್ನಡೆಸಬೇಕೆಂದು ಅಜಯ್ ಜಡೇಜಾ ಬಯಸಿದ್ದಾರೆ.
"ಐಪಿಎಲ್ 2024ರ ಋತುವಿನಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರೆ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ನಾಯಕರಾಗಬಹುದು," ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು 2024ರ ಟಿ20 ವಿಶ್ವಕಪ್ ಆಡಲಿರುವ ಆಟಗಾರರು ಐಪಿಎಲ್‌ನ ಸಂಪೂರ್ಣ ಆವೃತ್ತಿಯನ್ನು ಆಡಬಾರದು. ಇಲ್ಲದಿದ್ದರೆ ಅವರು ಬೆಂದು ಹೋಗುತ್ತಾರೆ ಎಂದು ಅಜಯ್ ಜಡೇಜಾ ಭಾವಿಸಿದರು.

ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವಾಗ ಪಾದದ ಗಾಯಗೊಂಡಿದ್ದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
2024ರ ಮೇ-ಜೂನ್‌ಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ 17ನೇ ಋತುವಿನಲ್ಲಿ ಮೂರು ವರ್ಷಗಳ ಬಳಿಕ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಆಡಲಿದ್ದಾರೆ.
2024ರ ಐಪಿಎಲ್ ಉಳಿಸಿಕೊಂಡ ಆಡಗಾರರ ಪಟ್ಟಿ ಗಡುವು ಮುಗಿದ ಒಂದು ದಿನದ ಬಳಿಕ, ಗುಜರಾತ್ ಟೈಟನ್ಸ್‌ನ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಗದು ವ್ಯವಹಾರದಲ್ಲಿ ತನ್ನ ಮೊದಲ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತೆಗೆದುಕೊಂಡಿತು.

ಬಿಸಿಸಿಐ ಮತ್ತು ಎನ್‌ಸಿಎ ಹಾರ್ದಿಕ್ ಪಾಂಡ್ಯಗಾಗಿ 18 ವಾರಗಳ ಕಾರ್ಯಕ್ರಮವನ್ನು ಆಯೋಜಿಸಿವೆ. ಅಲ್ಲಿ ಮಾರ್ಚ್‌ವರೆಗೆ ಪ್ರತಿ ದಿನವೂ ಒಂದು ಉದ್ದೇಶಕ್ಕೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. 2024-26ರ ಚಕ್ರದಲ್ಲಿ ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿ ಇರಬೇಕೆಂದು ಬಿಸಿಸಿಐ ಬಯಸುತ್ತದೆ.