ಐಪಿಎಲ್‌ನಲ್ಲಿ 96, ಟೆಸ್ಟ್‌ನಲ್ಲಿ 91, ಏಕದಿನದಲ್ಲಿ 98 ಅಧಿಕ ರನ್: ಯಾವುದರಲ್ಲೂ ಶತಕ ಬಾರಿಸಿಲ್ಲ ಈತ!

ಕ್ರಿಕೆಟ್‍ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕೂಡ ಶತಕದ ಮೈಲಿಗಲ್ಲನ್ನು ಹಲವು ಬಾರಿ ಮುಟ್ಟಬೇಕೆಂಬ ಇಂಗಿತವನ್ನು ಹೊಂದಿರುತ್ತಾರೆ. ಆಟಗಾರನೋರ್ವ ಶತಕ ಬಾರಿಸಿದರೆ ಅದು ಆತನ ಅತ್ಯುತ್ತಮ ಪ್ರದರ್ಶನ ಎಂಬ ಅಭಿಪ್ರಾಯಗಳನ್ನು ಹಲವಾರು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸುತ್ತಾರೆ. ಹೀಗಾಗಿಯೇ ಅತಿಹೆಚ್ಚು ಶತಕ ಹಾಗೂ ಅತಿ ಹೆಚ್ಚು ರನ್ ಬಾರಿಸಿರುವ ಸಚಿನ್ ತೆಂಡೂಲ್ಕರ್ ಇಂದು ಕ್ರಿಕೆಟ್ ದೇವರಾಗಿ ನಿಂತಿದ್ದಾರೆ. ಹಾಗೂ ಹಲವಾರು ಶತಕಗಳನ್ನು ಸಾಲುಸಾಲಾಗಿ ಬಾರಿಸಿದ ವಿರಾಟ್ ಕೊಹ್ಲಿ ಕಿಂಗ್ ಆಫ್ ಕ್ರಿಕೆಟ್ ಎನಿಸಿಕೊಂಡಿದ್ದಾರೆ. ಇಂದಿಗೂ ವಿರಾಟ್ ಕೊಹ್ಲಿ ಎಷ್ಟೇ ಉತ್ತಮ ಇನ್ನಿಂಗ್ಸ್ ಆಡಿದರೂ ಸಹ ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗ ಉತ್ತಮ ಆಟವನ್ನಾಡಿದರು ಎಂದು ನೆಮ್ಮದಿಪಡುವುದು ಕೊಹ್ಲಿ ಶತಕ ಬಾರಿಸಿದಾಗ ಮಾತ್ರ ಹಾಗೂ ಇತರೆ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡರು ಎನ್ನುವುದು ಶತಕ ಬಾರಿಸಿದಾಗಲೇ.
ಹೀಗೆ ಕ್ರಿಕೆಟ್ ಆಟದಲ್ಲಿ ಶತಕ ಎಂಬುವುದು ಬ್ಯಾಟ್ಸ್‌ಮನ್ ಓರ್ವನ ಫಾರ್ಮ್‌ನ್ನು ಕೆಲವೊಂದು ಬಾರಿ ನಿರ್ಧರಿಸಿಬಿಡುತ್ತದೆ. ಆದರೆ ಕೆಲವೊಂದಿಷ್ಟು ಆಟಗಾರರಿಗೆ ಮಾತ್ರ ತಮ್ಮ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಒಮ್ಮೆಯೂ ಶತಕ ಬಾರಿಸಲಾಗದ ಅನುಭವವಿದೆ. ಇನ್ನು ಕೆಲ ಬೌಲರ್‌ಗಳು ಅಬ್ಬರದ ಶತಕ ಸಿಡಿಸಿರುವ ಉದಾಹರಣೆಗಳು ಸಹ ಇವೆ. ಇನ್ನು ಇತ್ತೀಚಿನ ದಿನಗಳಲ್ಲಿ ಹಲವು ಯುವ ಕ್ರಿಕೆಟಿಗರು ಸ್ಪೋಟಕ ಶತಕಗಳನ್ನು ಸಿಡಿಸಿದ್ದು, ಟೀಮ್ ಇಂಡಿಯಾದ ಓರ್ವ ಯುವ ಆಟಗಾರನಿಗೆ ಮಾತ್ರ ಶತಕ ಬಾರಿಸಲು ಪ್ರಯತ್ನಿಸಿದಾಗಲೆಲ್ಲಾ ಆತ ನರ್ವಸ್ ನೈಂಟಿಗೆ ಔಟ್ ಆಗಿರುವ ಹಾಗೂ ಇನ್ನಿಂಗ್ಸ್ ಮುಕ್ತಾಯವಾಗಿರುವ ಕೆಟ್ಟ ಅನುಭವವಾಗಿದೆ.
ಹೌದು, ಟೀಮ್ ಇಂಡಿಯಾದ ಆಟಗಾರನೋರ್ವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ, ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಹಾಗೂ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಹೀಗೆ ಯಾವುದೇ ಕ್ರಿಕೆಟ್ ಸ್ವರೂಪದಲ್ಲಿಯೂ ಶತಕ ಬಾರಿಸಲು ಆಗದೇ ನಿರಾಸೆಗೆ ಒಳಗಾಗಿದ್ದಾರೆ. ಈ ಕುರಿತಾದ ವಿವರ ಕೆಳಕಂಡಂತಿದೆ.

ನತದೃಷ್ಟ ಗಿಲ್
ಈ ರೀತಿ ಐಪಿಎಲ್, ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಅಂತರರಾಷ್ಟ್ರೀಯ ಏಕದಿನ ಈ ಯಾವುದೇ ಕ್ರಿಕೆಟ್ ಸ್ವರೂಪದಲ್ಲಿಯೂ ಶತಕ ಬಾರಿಸಲಾಗದೇ ನರ್ವಸ್ ನೈಂಟಿ ರನ್‌ಗಳಿಗೆ ಔಟ್ ಆಗಿರುವುದು ಟೀಮ್ ಇಂಡಿಯಾದ ಯುವ ಆಟಗಾರ ಶುಮ್ ಮನ್ ಗಿಲ್. ಶುಬ್ ಮನ್ ಗಿಲ್ 90+ ರನ್ ಕಲೆಹಾಕಿ ಶತಕ ಕೈತಪ್ಪಿಸಿಕೊಂಡ ಇನ್ನಿಂಗ್ಸ್ ಪಟ್ಟಿ ಈ ಕೆಳಕಂಡಂತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ದ ಶುಬ್ ಮನ್ ಗಿಲ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 59 ಎಸೆತಗಳಿಗೆ 96 ರನ್ ಕಲೆಹಾಕಿ ಔಟ್ ಆಗಿ ಶತಕ ವಂಚಿತರಾಗಿದ್ದರು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಜರಾತ್ ಟೈಟನ್ಸ್ ಪರ ಒಟ್ಟು 16 ಪಂದ್ಯಗಳನ್ನಾಡಿದ್ದ ಶುಬ್ ಮನ್ ಗಿಲ್ 483 ರನ್ ಕಲೆ ಹಾಕುವುದರ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್
2021ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 146 ಎಸೆತಗಳಿಗೆ 91 ರನ್ ಕಲೆಹಾಕಿದ್ದ ಶುಬ್ ಮನ್ ಗಿಲ್ ಶತಕ ಬಾರಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದರು.

ಏಕದಿನ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ತೃತೀಯ ಪಂದ್ಯದಲ್ಲಿ ಗಿಲ್ 98 ಎಸೆತಗಳಿಗೆ ಅಜೇಯ 98 ರನ್ ಕಲೆ ಹಾಕಿದರು. ಪಂದ್ಯಕ್ಕೆ ಮಳೆ ಅಡ್ಡಿ ಉಂಟಾದ ಕಾರಣ ಶುಬ್ಮನ್ ಗಿಲ್ ತಮ್ಮ ಆಟವನ್ನು ಮುಂದುವರೆಸಲಾಗದೇ ಶತಕ ವಂಚಿತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications