For Quick Alerts
ALLOW NOTIFICATIONS  
For Daily Alerts
 

ನೆದರ್ಲೆಂಡ್ಸ್ vs ಪಾಕಿಸ್ತಾನ, ಏಕದಿನ ಸರಣಿ, ಮೊದಲ ಪಂದ್ಯ: Live ಸ್ಕೋರ್ ಹಾಗೂ ಆಡುವ ಬಳಗ

Netherlands vs Pakistan, ODI series 1st match, Live score and Playing XI details

ಪಾಕಿಸ್ತಾನ ಕ್ರಿಕೆಟ್ ತಂಡ ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಂಡಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ನೆದರ್ಲೆಂಡ್ಸ್ ತಂಡ ಗುರಿ ಬೆನ್ನಟ್ಟುವ ಸವಾಲು ಸ್ವೀಕರಿಸಿದೆ. ರಾಟರ್ಡಾಮ್‌ನಲ್ಲಿ ಈ ಸರಣಿಯ ಮೂರು ಪಂದ್ಯಗಳ ಕೂಡ ಆಯೋಜನೆಯಾಗಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ ವಿರುದ್ಧದ ಸರಣಿಯಲ್ಲಿ ನೆದರ್ಲೆಂಡ್ಸ್ ತಂಡ ಭಾರೀ ಸೋಲು ಅನುಭವಿಸಿತ್ತು. ಇದೀಗ ಮತ್ತೊಂದು ಗುಣಮಟ್ಟದ ತಂಡವನ್ನು ನೆದರ್ಲೆಂಡ್ಸ್ ಎದುರಿಸುತ್ತಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಪಾಕಿಸ್ತಾನ ಇತ್ತೀಚಿನ ಕೆಲ ವರ್ಷಗಳಿಂದ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಿದೆ. ಅದರಲ್ಲೂ ಕಳೆದ ಟಿ20 ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಗಮನಾರ್ಹವಾಗಿತ್ತು.

Live ಸ್ಕೋರ್‌ಕಾರ್ಡ್ ಹೀಗಿದೆ

1
53913

ಇದೀಗ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ನೆದರ್ಲೆಂಡ್ಸ್‌ಗೆ ಪ್ರವಾಸ ಕೈಗೊಂಡಿದ್ದು ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಇನ್ನು ಈ ಸರಣಿ ಮುಕ್ತಾಯದ ಬಳಿಕ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗಿಯಾಗಲಿದೆ.

ನೆದರ್ಲೆಂಡ್ಸ್ ಪ್ಲೇಯಿಂಗ್ XI: ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಟಾಮ್ ಕೂಪರ್, ಬಾಸ್ ಡಿ ಲೀಡ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ಟಿಮ್ ಪ್ರಿಂಗಲ್, ಆರ್ಯನ್ ದತ್, ವೆಸ್ಲಿ ಬ್ಯಾರೆಸಿ, ವಿವಿಯನ್ ಕಿಂಗ್ಮಾ
ಬೆಂಚ್: ಮೂಸಾ ಅಹ್ಮದ್, ರಿಯಾನ್ ಕ್ಲೈನ್, ಶರೀಜ್ ಅಹ್ಮದ್, ಅರ್ನವ್ ಜೈನ್

ಪ್ಲೇಯಿಂಗ್ XI: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಖುಶ್ದಿಲ್ ಶಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್, ನಸೀಮ್ ಶಾ
ಬೆಂಚ್: ಶಹೀನ್ ಅಫ್ರಿದಿ, ಮೊಹಮ್ಮದ್ ಹ್ಯಾರಿಸ್, ಜಾಹಿದ್ ಮಹಮೂದ್, ಶಾನವಾಜ್ ದಹಾನಿ, ಅಬ್ದುಲ್ಲಾ ಶಫೀಕ್

Story first published: Tuesday, August 16, 2022, 16:10 [IST]
Other articles published on Aug 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+