Pak vs Ned : ಜಿಂಬಾಬ್ವೆ ಇಲ್ಲ ಅಂದರೆ....! ಬಾಬರ್ ಅಜಮ್‌ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು
ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕೇವಲ 5 ರನ್‌ಗಳಿಗೆ ಔಟಾಗಿದ್ದಾರೆ. ಪಾಕಿಸ್ತಾನ 49 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಜಮ್ ಮೇಲೆ ಹೆಚ್ಚಿನ ಭರವಸೆ ಇಟ್ಟಿಕೊಂಡಿದ್ದಾರೆ ಅಭಿಮಾನಿಗಳು. ಕ್ಯಾಪ್ಟನ್ಸ್ ಡೇ ಸಂದರ್ಭದಲ್ಲಿ ಬಾಬರ್ ಅಜಂ ಭಾರತದ ಕ್ರೀಡಾಂಗಣಗಳ ಬಗ್ಗೆ ಮಾತನಾಡುತ್ತಾ ಇಲ್ಲಿನ ಬೌಂಡರಿಗಳು ಚಿಕ್ಕದಾಗಿವೆ ಎಂದಿದ್ದರು.

ಅಭ್ಯಾಸ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ಬಾಬರ್ ಅಜಂ ಮೊದಲ ಪಂದ್ಯದಲ್ಲಿ ಭಾರಿ ಮೊತ್ತ ಗಳಿಸುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದೆ. 18 ಎಸೆತಗಳನ್ನು ಎದುರಿಸಿದ ಬಾಬರ್ ಅಜಂ ಕೇವಲ 5 ರನ್ ಗಳಿಸಿ ಔಟಾದರು. ಬಾಬರ್ ಅಜಂ ಅವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರೆ, ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ಅವರನ್ನು ಕೆಣಕಿದ್ದಾರೆ.
ಅಭಿಮಾನಿಗಳ ಅಸಮಾಧಾನ
ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ನಲ್ಲಿ ನೆಟ್ಟಿಗರು ಬಾಬರ್ ಅಜಮ್ ಬಗ್ಗೆ ಹಲವು ಟ್ರೋಲ್ ಮಾಡುವ ಮೂಲಕ ಗಮನ ಸೆಳೆದರು. "ಜಿಂಬಾಬ್ವೆ, ನೇಪಾಳ ತಂಡ ಇಲ್ಲ ಎಂದರೆ ಬಾಬರ್ ಅಜಂ ಅವರಿಗೆ ಪಾರ್ಟಿ ಇಲ್ಲ" ಎಂದು ಹೇಳುವ ಮೂಲಕ ಬಾಬರ್ ಅವರು ಜಿಂಬಾಬ್ವೆ ಮತ್ತು ನೇಪಾಳ ಅಂತಹ ತಂಡಗಳ ವಿರುದ್ಧ ಮಾತ್ರ ಹೆಚ್ಚು ರನ್ ಗಳಿಸುತ್ತಾರೆ ಎಂದು ಕಾಲೆಳದಿದ್ದಾರೆ.
"ನೆದರ್ಲ್ಯಾಂಡ್ಸ್ ನಂತಹ ದುರ್ಬಲ ತಂಡದ ವಿರುದ್ಧ ರನ್ ಗಳಿಸುವುದರಿಂದ ಏನು ಪ್ರಯೋಜನ? ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬರು ಟ್ವೀಟ್ ಮಾಡಿ, ಬಾಬರ್ ಅಜಂ 95 ರನ್‌ಗಳಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡರು ಎಂದು ಟೀಕಿಸಿದ್ದಾರೆ. ಬಾಬರ್ ಅಜಂ ಅವರ ವಿಶ್ವದ ಶ್ರೇಷ್ಠ ಇನ್ನಿಂಗ್ಸ್ ಮುಕ್ತಾಯವಾಗಿದೆ ಅವರು 18 ಎಸೆತಗಳಲ್ಲಿ 5 ರನ್ ಗಳಿಸಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಸವಾಲಿನ ಮೊತ್ತ ಕಲೆ ಹಾಕಿದ ಪಾಕಿಸ್ತಾನ
ಬಾಬರ್ ಅಜಮ್, ಫಖಾರ್ ಜಮಾನ್, ಇಮಾಮ್ ಉಲ್ ಹಕ್ ವಿಫಲವಾದ ನಂತರವೂ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ತಲಾ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications