ಭಾರತ vs ದ.ಆಫ್ರಿಕಾ: ಗಾಯದ ನೆಪ ಹೇಳಿ ಬೇಕಂತಲೇ ಟೆಸ್ಟ್ ಸರಣಿಯಿಂದ ಹೊರಬಿದ್ರಾ ರೋಹಿತ್?

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ವಿರುದ್ಧ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳಲ್ಲಿ ಸೆಣಸಾಟ ನಡೆಸಿ ಸೋಲುಣಿಸಿದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲು ಸಜ್ಜಾಗಿದ್ದು, ದಕ್ಷಿಣ ಆಫ್ರಿಕಾದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಇತ್ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ನಡೆಯಲಿದ್ದು ಡಿಸೆಂಬರ್ 26ರಂದು ಚೊಚ್ಚಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಹೀಗೆ ಇತ್ತಂಡಗಳ ನಡುವೆ ಮೊದಲು ನಡೆಯಲಿರುವ ಟೆಸ್ಟ್ ಸರಣಿಗೆ ಬಿಸಿಸಿಐ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು 18 ಆಟಗಾರರನ್ನು ಹೆಸರಿಸಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಅಜಿಂಕ್ಯ ರಹಾನೆ ಬದಲಾಗಿ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನಕ್ಕೇರಿದ್ದಾರೆ.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟಿವಾಗಿದ್ದ ಭಾರತ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಉಪ ನಾಯಕನಾಗಿ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಪಡೆದ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಪಡೆದುಕೊಂಡಿದ್ದರು. ಹೀಗೆ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಲ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನವನ್ನು ಕೂಡ ಪಡೆದುಕೊಳ್ಳುವ ಮುೂಲಕ 1 ತಿಂಗಳ ಅವಧಿಯಲ್ಲಿಯೇ ಎಲ್ಲಾ ಕ್ರಿಕೆಟ್ ಆವೃತ್ತಿಗಳ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡರು. ಇನ್ನು ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ 15ರಂದು ಟೀಮ್ ಇಂಡಿಯಾ ಆಟಗಾರರು ಹಾರಲಿದ್ದು,ಇದಕ್ಕೂ ಮುನ್ನ ಮುಂಬೈನಲ್ಲಿ 3 ದಿನಗಳ ಕ್ವಾರಂಟೈನ್ ನಿಯಮವನ್ನು ಪಾಲಿಸಲಿದ್ದಾರೆ.
ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದ ಸಲುವಾಗಿ ಮುಂಬೈನ ಶರದ್ ಪವಾರ್ ಅಕಾಡೆಮಿಯಲ್ಲಿ ತಂಡದ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಕೆ ಎಲ್ ರಾಹುಲ್ ಜತೆ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರತ ತಂಡದ ಥ್ರೋಡೌನ್ ತಜ್ಞ ರಾಘವೇಂದ್ರ ಅವರು ಎಸೆದ ಎಸೆತ ರೋಹಿತ್ ಶರ್ಮಾ ಅವರ ಕೈಗೆ ಬಲವಾಗಿ ಬಡಿದಿದೆ. ಪರಿಣಾಮ ಗಾಯಕ್ಕೊಳಗಾದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಈ ಮೂಲಕ ಮತ್ತೊಮ್ಮೆ ಗಾಯದ ಸಮಸ್ಯೆಯಿಂದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಕುರಿತಾಗಿ ಟ್ವಿಟ್ಟರ್ ತುಂಬಾ ನೆಟ್ಟಿಗರು ಟೀಕೆಗಳನ್ನು ಟ್ವೀಟ್ ಮಾಡುತ್ತಾ ಈ ಕೆಳಕಂಡಂತೆ ಕಾಲೆಳೆದಿದ್ದಾರೆ..

ರೋಹಿತ್ ಮತ್ತು ವಿರಾಟ್ ಮಧ್ಯೆ ಮನಸ್ತಾಪವಿದೆ ಎಂದ ನೆಟ್ಟಿಗ!
ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದೆ. ಇದಕ್ಕೆ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ರೋಹಿತ್ ಶರ್ಮಾ ನಿಜವಾಗಲೂ ಗಾಯದ ಸಮಸ್ಯೆಗೆ ಒಳಗಾಗಿದ್ದಾರಾ ಅಥವಾ ಸುಮ್ಮನೆ ಗಾಯದ ನೆಪ ಹೇಳಿ ಟೆಸ್ಟ್ ಸರಣಿಯಿಂದ ಹೊರಗುಳಿಯುತ್ತಿದ್ದಾರಾ ಎಂಬ ಅನುಮಾನವನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿದ್ದು ರೋಹಿತ್ ಮತ್ತು ವಿರಾಟ್ ನಡುವೆ ಮನಸ್ತಾಪವಿದೆ ಎಂದೂ ಕೂಡ ಈ ನೆಟ್ಟಿಗ ಉಲ್ಲೇಖಿಸಿದ್ದಾನೆ. ಈಗ ರೋಹಿತ್ ಶರ್ಮಾ ಗಾಯದ ನೆಪ ಹೇಳಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಮುಂದೆ ವಿರಾಟ್ ಕೊಹ್ಲಿ ಇದೇ ರೀತಿ ಗಾಯದ ನೆಪ ಹೇಳಿ ಏಕದಿನ ಸರಣಿಯಿಂದ ಹೊರ ಬೀಳಲಿದ್ದಾರೆ ಎನಿಸುತ್ತದೆ ಎಂದು ಬರೆದುಕೊಂಡಿದ್ದಾನೆ.

ಇದೊಂದು ಮೋಸದ ತಂತ್ರ ಎಂದ ನೆಟ್ಟಿಗ!
ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಕುರಿತಾಗಿ ಬಿಸಿಸಿಐ ಮಾಡಿರುವ ಟ್ವೀಟ್‌ಗೆ ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದು ಇದೊಂದು ಮೋಸದ ತಂತ್ರ ಎಂದಿದ್ದಾನೆ. ಭಾರತ ತಂಡದ ಸೀಮಿತ ಓವರ್‌ಗಳ ನಾಯಕನನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಂತಹ ಕಠಿಣ ಟೆಸ್ಟ್ ಸರಣಿಯಿಂದ ಗಾಯದ ನೆಪ ಹೇಳಿ ಹೊರ ಹಾಕುವುದರ ಮೂಲಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿಯಿಂದ ಕಸಿದುಕೊಳ್ಳಲು ನಡೆಸುತ್ತಿರುವ ಮೋಸದ ತಂತ್ರ ಇದಾಗಿದೆ ಎಂದು ಬರೆದುಕೊಂಡಿದ್ದಾನೆ. ಹಾಗೂ ಎಂದಿನಂತೆ ವಿರಾಟ್ ಕೊಹ್ಲಿ ಈ ಬಾರಿಯೂ ಕೂಡ ತನ್ನ ಬ್ಯಾಟಿಂಗ್ ಮೂಲಕ ಪ್ರತ್ಯುತ್ತರವನ್ನು ನೀಡಲಿದ್ದಾರೆ ಎಂದು ಕೂಡ ಉಲ್ಲೇಖಿಸಿದ್ದಾನೆ.

ರೋಹಿತ್ ಬದಲು ಇತರೆ ಆಟಗಾರರಿಗೆ ಟೆಸ್ಟ್ ತಂಡದ ಉಪನಾಯಕ ಸ್ಥಾನ ನೀಡಿ ಎಂದ ನೆಟ್ಟಿಗ
ರೋಹಿತ್ ಶರ್ಮಾ ವಯಸ್ಸು ಮತ್ತು ಫಿಟ್‌ನೆಸ್ ಗಮನಿಸಿದರೆ ಆತ ಟೆಸ್ಟ್ ಕ್ರಿಕೆಟ್ ಉಪನಾಯಕ ಸ್ಥಾನಕ್ಕೆ ಸರಿಯಾದ ಆಯ್ಕೆಯಲ್ಲ ಎನಿಸುತ್ತದೆ. ಹೀಗಾಗಿ ರೋಹಿತ್ ಶರ್ಮಾ ಬದಲು ಟೆಸ್ಟ್ ತಂಡದ ಉಪನಾಯಕ ಸ್ಥಾನಕ್ಕೆ ಅರ್ಹನಾದ ಆಟಗಾರನನ್ನು ಆಯ್ಕೆ ಮಾಡಲು ಇದು ಸರಿಯಾದ ಸಮಯ ಎಂದಿರುವ ನೆಟ್ಟಿಗ, ಹೇಗಿದ್ದರೂ ವಿರಾಟ್ ಕೊಹ್ಲಿ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ನಾಯಕನಾಗಿರಲಿದ್ದು, ಯಾರಾದರೂ ಯುವ ಕ್ರಿಕೆಟಿಗನನ್ನು ಉಪನಾಯಕನನ್ನಾಗಿ ಆರಿಸಿ ಎಂದಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications