
ಪಾಕಿಸ್ತಾನ್ ಸೂಪರ್ ಲೀಗ್ ಟಿ20 ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಆಸೀಸ್ ಆಟಗಾರ ಜೇಮ್ಸ್ ಫಾಲ್ಕನರ್ ಗಂಭೀರ ಆರೋಪ ಮಾಡಿರುವುದರ ಜೊತೆಗೆ, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ತನಗೆ ನೀಡಬೇಕಾದ ಹಣವನ್ನ ನೀಡಲಾಗಿಲ್ಲ ಎಂಬ ಆರೋಪವನ್ನ ಅನೇಕ ಪಾಕ್ ಕ್ರಿಕೆಟಿಗರು ತಳ್ಳಿ ಹಾಕಿದ್ದಾರೆ.
ಪಾಕ್‌ನ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಕೂಡ ಫಾಲ್ಕನರ್ ಆರೋಪ ಆಧಾರರಹಿತವಾಗಿದೆ ಎಂದು ಕಿಡಿಕಾರಿದ್ದಾರೆ. ಪಿಸಿಬಿ ಆಡಳಿತವನ್ನು ಸಮರ್ಥಿಸಲು ಮುಂದಾಗಿರುವ ಅಫ್ರಿದಿ ಮಂಡಳಿಯ ವಿರುದ್ಧ 'ಆಧಾರರಹಿತ' ಆರೋಪಗಳನ್ನು ಮಾಡಿದ್ದಕ್ಕಾಗಿ ತಮ್ಮ ಟ್ವಿಟ್ಟರ್‌ನಲ್ಲಿ ಫಾಕ್ನರ್ ಅವರನ್ನು ಟೀಕಿಸಿದರು ಮತ್ತು ಸ್ಪರ್ಧೆಯಲ್ಲಿ ಆಟಗಾರರ ಪಾವತಿಗಳು ಎಂದಿಗೂ ವಿಳಂಬವಾಗಿಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಫಾಲ್ಕನರ್ ಫೆಬ್ರವರಿ 19 ರಂದು ನಡೆಯುತ್ತಿರುವ 2022ರ ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ತೊರೆದರು ಮತ್ತು ಪಿಸಿಬಿ ಯಿಂದ ಪಾವತಿಸದ ಕಾರಣಕ್ಕೆ ಮನೆಗೆ ಮರಳಿದ್ದೇನೆ ಎಂದರು. ಫ್ರಾಂಚೈಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುವ ಈತ ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಅವರ ಒಪ್ಪಂದದ ಅನ್ವಯ ನಡೆದುಕೊಳ್ಳಲಾಗಿದೆ ಎಂದು ಅಫ್ರಿದಿ ಪಿಸಿಬಿಯನ್ನ ಬೆಂಬಲಿಸಿದ್ದಾರೆ.
''ಆಧಾರರಹಿತ ಆರೋಪಗಳನ್ನು ಹೊರಿಸುವ ಮೂಲಕ ಪಾಕಿಸ್ತಾನದ ಆತಿಥ್ಯ ಮತ್ತು ವ್ಯವಸ್ಥೆಗಳನ್ನ ಪ್ರಶ್ನಿಸಿರುವ @JamesFaulkner44 ಕಾಮೆಂಟ್‌ಗಳಿಂದ ನಿರಾಶೆಗೊಂಡಿದೆ. ನಮ್ಮೆಲ್ಲರನ್ನು ಗೌರವದಿಂದ ನಡೆಸಿಕೊಳ್ಳಲಾಗಿದೆ ಮತ್ತು ನಮ್ಮ ಪಾವತಿಗಳು ಎಂದಿಗೂ ವಿಳಂಬವಾಗಿಲ್ಲ. ಕ್ರಿಕೆಟ್ ಮತ್ತು #HBLPSL ಬ್ರ್ಯಾಂಡ್ ಅನ್ನು ಕಳಂಕಗೊಳಿಸಲು ಯಾರಿಗೂ ಅವಕಾಶ ನೀಡಬಾರದು'' ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಇನ್ನು ಫಾಲ್ಕನರ್ ಹೇಳಿಕೆಗೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಸ್ಪಷ್ಟನೆ ನೀಡಿದ್ದು, ಪ್ರಕಟಣೆ ಹೊರಡಿಸಿದೆ.
"2021 ರಲ್ಲಿ HBL ಪಾಕಿಸ್ತಾನ್ ಸೂಪರ್ ಲೀಗ್‌ನ ಅಬುಧಾಬಿ ಆತಿಥ್ಯದ ಭಾಗವಾಗಿದ್ದ ಜೇಮ್ಸ್ ಫಾಕ್ನರ್ ಅವರ ಖಂಡನೀಯ ನಡವಳಿಕೆಯಿಂದ ಪಿಸಿಬಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್‌ಗಳು ನಿರಾಶೆಗೊಂಡಿದ್ದಾರೆ. ಲೀಗ್‌ನಲ್ಲಿ ಭಾಗವಹಿಸುವ ಎಲ್ಲಾ ಆಟಗಾರರನ್ನ ಸಮಾನವಾಗಿ ಮತ್ತು ಅತ್ಯಂತ ಗೌರವುಯತವಾಗಿ ನೋಡಿಕೊಳ್ಳಲಾಗುವುದು'' ಎಂದು ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.