For Quick Alerts
ALLOW NOTIFICATIONS  
For Daily Alerts
 

ಲಿಂಗ ಸಮಾನತೆಯ ಹೊಸ ಯುಗ: ಪುರುಷರಂತೆ ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ ಘೋಷಿಸಿದ ಬಿಸಿಸಿಐ

New Era of Gender Equality: BCCI Announces Equal Pay For Women Cricketers As Men

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ದೊಡ್ಡ ಘೋಷಣೆ ಮಾಡಿದ್ದು, ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ (ಗುತ್ತಿಗೆ) ಪಂದ್ಯದ ವೇತನ ಸಮಾನವಾಗಿರುತ್ತದೆ ಎಂದು ಹೇಳಿದೆ.

ಮಹಿಳಾ ಕ್ರಿಕೆಟಿಗರನ್ನು ಪಂದ್ಯದ ವೇತನ ವಿಷಯದಲ್ಲಿ ಪುರುಷರಿಗೆ ಸರಿಸಮನಾಗಿ ತರುವ ನಿರ್ಧಾರವು ಹಲವು ರೀತಿಯಲ್ಲಿ ಮಹತ್ವದ ನಿರ್ಧಾರವಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು, ಪುರುಷ ಆಟಗಾರರಂತೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ನೀಡುವ ಪಂದ್ಯದ ಶುಲ್ಕ ಒಂದೇ

"ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬಿಸಿಸಿಐಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಮ್ಮ (ಬಿಸಿಸಿಐ) ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ನಾವು ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋದಂತೆ, ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ನೀಡುವ ಪಂದ್ಯದ ಶುಲ್ಕ ಒಂದೇ ಆಗಿರುತ್ತದೆ".

"ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕೌಂಟರ್ಪಾರ್ಟ್ಸ್‌ನಂತೆಯೇ ಒಂದೇ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ (15 ಲಕ್ಷ ರೂ.), ಏಕದಿನ (6 ಲಕ್ಷ ರೂ.), ಟಿ20 (3 ಲಕ್ಷ ರೂ.). ಈಕ್ವಿಟಿ ನಮ್ಮ ಮಹಿಳಾ ಕ್ರಿಕೆಟಿಗರಿಗೆ ನೀಡುವುದು ನನ್ನ ಬದ್ಧತೆಯಾಗಿದೆ ಮತ್ತು ಅವರ ಬೆಂಬಲಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್‌ಗೆ ಧನ್ಯವಾದ ಹೇಳುತ್ತೇನೆ. ಜೈ ಹಿಂದ್," ಎಂದು ಜಯ್ ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ

ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ

ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿರುವ ರೋಜರ್ ಬಿನ್ನಿ ಅಧಿಕೃತ ಹೇಳಿಕೆಯಲ್ಲಿ ಹೀಗೆ ಹೇಳಿದ್ದು, "ಇಂದು ನಮ್ಮ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಾವು ನಮ್ಮ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ಕುರಿತು ಮಹತ್ವದ ನಿರ್ಧಾರವನ್ನು ಮಾಡಿದ್ದೇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷರಿಗೆ ನೀಡುವ ಪಂದ್ಯದ ಶುಲ್ಕವನ್ನು ನಮ್ಮ ಮಹಿಳಾ ಆಟಗಾರರಿಗೆ ನೀಡಲಾಗುತ್ತದೆ. ಈ ನಿರ್ಧಾರವು ಕ್ರಿಕೆಟ್ ಅನ್ನು ಬೆಳೆಸಲು ಮತ್ತು ಅಭಿವೃದ್ಧಿಪಡಿಸಲು ವೇದಿಕೆಯನ್ನು ಹೊಂದಿಸುತ್ತದೆ. ಮಹಿಳಾ ಕ್ರಿಕೆಟ್ ಮತ್ತು ಒಟ್ಟಾರೆ ಆಟಕ್ಕೆ ಇದು ಮಹತ್ವದ ಹೆಜ್ಜೆ ಎಂದು ನಾನು ನಂಬುತ್ತೇನೆ,'' ಎಂದಿದ್ದಾರೆ.

ಮಹಿಳಾ ಐಪಿಎಲ್‌ನ ಮೊದಲ ಋತುವನ್ನು 2023ರಲ್ಲಿ ಆಡಿಸಲಾಗುವುದು ಎಂದು ಬಿಸಿಸಿಐ ಎಜಿಎಂನಲ್ಲಿ ನಿರ್ಧರಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಬಂದಿದೆ.

ಸಂತೋಷ ವ್ಯಕ್ತಪಡಿಸಿದ ಹರ್ಮನ್‌ಪ್ರೀತ್ ಕೌರ್

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, "ಬಿಸಿಸಿಐ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿರುವುದನ್ನು ತಿಳಿದು ನನಗೆ ತುಂಬಾ ಸಂತೋಷವಾಗಿದೆ," ಎಂದು ಹೇಳಿದರು.

ಭಾರತೀಯ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಕೂಡ ಇದು ಭಾರತೀಯ ಕ್ರಿಕೆಟ್‌ನ ಅದ್ಭುತ ನಡೆ ಎಂದು ಹೇಳಿದ್ದಾರೆ. ಇದು ಬಿಸಿಸಿಐನಿಂದ ಅದ್ಭುತವಾದ ಘೋಷಣೆಯಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಾಚೆಲ್ ಹೇನ್ಸ್ ಹೇಳಿದ್ದಾರೆ. 'ಸಮಾನತೆಯೆಡೆಗೆ ಪ್ರತಿ ಹೆಜ್ಜೆಯೂ ಮುಖ್ಯವಾಗಿದೆ' ಎಂದು ಅವರು ಹೇಳಿದರು.

ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚುತ್ತಿದೆ

ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚುತ್ತಿದೆ

2017ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ತಂಡವು ರನ್ನರ್ ಅಪ್ ಸ್ಥಾನ ಗಳಿಸಿದಾಗಿನಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅಂದಿನಿಂದ ತಂಡವು 2020ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ಗೆ ತಲುಪಿದೆ ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ.

ಈ ವರ್ಷದ ಆರಂಭದಲ್ಲಿ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತು. ಮಹಿಳಾ ರಾಷ್ಟ್ರೀಯ ತಂಡ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಘೋಷಿಸಿದೆ.

Story first published: Friday, October 28, 2022, 9:56 [IST]
Other articles published on Oct 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+