2025ರ ಸಾಲಿನ ಮಹಿಳಾ ಏಕದಿನ ವಿಶ್ವಕಪ್ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಭಾರತ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಭಾರತ 4 ರನ್ ಸೋಲು ಕಂಡು ನಿರಾಸೆಯನ್ನು ಅನುಭವಿಸಿತ್ತು. ಮಹತ್ವದ ಪಂದ್ಯದಲ್ಲಿ ಭಾರತದ ಪರ ಸ್ಮೃತಿ ಮಂಧಾನ, ಹರ್ಮನ್ ಪ್ರಿತ್ ಕೌರ್, ದೀಪ್ತಿ ಶರ್ಮಾ ಅಮೋಘ ಆಟದ ಪ್ರದರ್ಶನ ನೀಡಿ ಸೋಲಿನಲ್ಲಿ ಮಿಂಚಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡರೂ ಸಹ ಸ್ಮೃತಿ ಮಂಧನಾ ಬಿಗ್ ರೆಕಾರ್ಡ್ ನಿರ್ಮಿಸಿದ್ದಾರೆ. ಈ ಮೂಲಕ ಇವರು ಮಾಜಿ ಆಟಗಾರ್ತಿ ಮಿಥಾಲಿ ರಾಜ್ ದಾಖಲೆಯನ್ನು ಮೀರಿ ನಿಂತಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಅರ್ಧಶತಕ ಬಾರಿಸುತ್ತಲೇ ಸ್ಮೃತಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದ 34ನೇ ಅರ್ಧಶತಕವನ್ನು ಬಾರಿಸಿದರು. ಅಲ್ಲದೆ ತವರಿನಲ್ಲಿ 23ನೇ ಅರ್ಧಶತಕವನ್ನು ಸಿಡಿಸಿ ಬೀಗಿದರು. ಈ ಅರ್ಧಶತಕದ ಮೂಲಕ ಸ್ಮೃತಿ ತವರಿನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ದಾಖಲೆಯನ್ನು ಮಿಥಾಲಿ ರಾಜ್ ಹೊಂದಿದ್ದರು. ಈಗ ಈ ದಾಖಲೆ ಸ್ಮೃತಿ ಪಾಲಾಗಿದೆ.

ತವರಿನಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ ದಾಖಲೆ ನ್ಯೂಜಿಲೆಂಡ್ ತಂಡದ ಸ್ಟಾರ್ ಪ್ಲೇಯರ್ ಸೂಜಿ ಬೆಟ್ಸ್ ಅವರಿಗೆ ಸಲ್ಲುತ್ತದೆ. ಇವರು 28 ಬಾರಿ ತವರಿನಲ್ಲಿ ಅರ್ಧಶತ ಬಾರಿಸಿದ್ದಾರೆ. ಇದಾದ ಬಳಿಕ ಎರಡನೇ ಸ್ಥಾನದಲ್ಲಿ ಭಾರತದ ಸ್ಮೃತಿ ಮಂಧಾನ ಇದ್ದಾರೆ. ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಷಾರ್ಲೆಟ್ ಎಡ್ವರ್ಡ್ಸ್ ಇದ್ದು, ಇವರು 22 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಮಿಥಾಲಿ ರಾಜ್ ಸಹ ಇಷ್ಟೇ ಸಂಖ್ಯೆಯ ಅರ್ಧಶತಕಗಳನ್ನು ತವರಿನಲ್ಲಿ ಬಾರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 88 ರನ್‌ಗಳ ಇನಿಂಗ್ಸ್ ಕಟ್ಟುವ ಮೂಲಕ ಸ್ಮೃತಿ ಪ್ರಸಕ್ತ ವರ್ಷದಲ್ಲಿ ಒಂಬತ್ತನೇ ಬಾರಿಗೆ 50 ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮಹಿಳಾ ಏಕದಿನ ವಿಶ್ವಕಪ್ ಲೀಗ್ ಹಂತದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 80 ರನ್ ಬಾರಿಸಿದ್ದರು. ಈ ವರ್ಷ ನಡೆದ ಕೇವಲ ಒಂದೇ ಒಂದು ಪಂದ್ಯದಲ್ಲಿ ಸ್ಮೃತಿ ಎರಡಂಕಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ.
ಮುಂದಿನ ಪಂದ್ಯಗಳಲ್ಲಿ ಸ್ಮೃತಿ ಮಂಧನಾ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧವೂ 50 ಅಥವಾ ಅದಕ್ಕಿಂತ ಹೆಚ್ಚಿನ್ ರನ್ ಬಾರಿಸಿದರೆ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮಹಿಳಾ ಬ್ಯಾಟರ್ ಆಗಲಿದ್ದಾರೆ. ಇಂಗ್ಲೆಂವಿರುದ್ಧದ ಪಂದ್ಯದಲ್ಲಿ, ಸ್ಮೃತಿ ಮಂಧಾನ 94 ಎಸೆತಗಳಲ್ಲಿ 88 ರನ್ ಗಳಿಸಿದ್ದಾರೆ. ಅವರು 8 ಬೌಂಡರಿಗಳನ್ನು ಬಾರಿಸಿದರು ಮತ್ತು 93.62 ಸ್ಟ್ರೈಕ್ ರೇಟ್ ಹೊಂದಿದ್ದರು.