Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ಸ್ಟಾರ್ ಆಟಗಾರರಿಲ್ಲದ ತಂಡ ಹೇಗಿದೆ?

ನ್ಯೂಜಿಲೆಂಡ್ ತಂಡ ಮುಂಬರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಇಂದು ಪ್ರಕಟಿಸಿದೆ. ಈ ಸರಣಿಗೆ ನ್ಯೂಜಿಲೆಂಡ್ ತಂಡ ಬಹುತೇಕ ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ. ಕಿವಿಸ್‌ನ ಬಹುತೇಕ ಸ್ಟಾರ್ ಆಟಗಾರರು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಈ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ಟಾಮ್ ಲಾಥಮ್ ನಾಯಕತ್ವದಲ್ಲಿ ಕಿವೀಸ್ ಪಾಕ್ ಪ್ರವಾಸವನ್ನು ಕೈಗೊಳ್ಳಲಿದೆ.

ನ್ಯೂಜಿಲೆಂಡ್ ತಂಡ ಈ ಸರಣಿಗೆ ಖಾಯಂ ನಾಯಕ ಕೇನ್ ವಿಲಿಯಮ್ಸನ್(ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ), ಟಿಮ್ ಸೌಥೀ, ಲೂಕಿ ಫರ್ಗ್ಯೂಸನ್, ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ ಮತ್ತು ಫಿನ್ ಅಲೆನ್ ಅವರಂಥಾ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಿರುವ ಕಾರಣ ಈ ಸರಣಿಯಲ್ಲಿ ಭಾಗುಯಾಗುತ್ತಿಲ್ಲ.

New Zealand announced squad for ODI series against Pakistan, Tom Latham will lead

ಈ ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ಟಾಮ್ ಲ್ಯಾಥಮ್‌ಗೆ ನಾಯಕತ್ವದ ಹೊಣೆಗಾರಿಕೆ ದೊರೆತಿದ್ದು ಕೆಲ ಪ್ರಮುಖ ಆಟಗಾರು ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಡ್ಯಾರಲ್ ಮಿಚೆಲ್, ಮ್ಯಾಟ್ ಹೆನ್ರಿ, ಜೇಮ್ಸ್ ನೀಶಮ್, ಹೆನ್ರಿ ನಿಕೋಲ್ಸ್ ಮತ್ತು ಇಶ್ ಸೋಧಿ ಈ ಪ್ರಕಾಸಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೆನ್ ಲಿಸ್ಟರ್ ಹಾಗೂ ಕೋಲ್ ಮೆಕ್‌ಕೊನ್‌ಕೈ ಮೊಟ್ಟ ಮೊದಲ ಬಾರಿಗೆ ಕಿವೀಸ್ ಪರ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಈ ಸರಣಿಯ ಹಿನ್ನೆಲೆಯಲ್ಲಿ ಮಾಡತನಾಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್, "ಕಳೆದ ಋತುವಿನಲ್ಲಿ ಪಾಕಿಸ್ತಾನದ ವಿರುದ್ಧ ಹೋಮ್ ಹಾಗೂ ಅವೇ ಸರಣಿಯಲ್ಲಿ ವೈಟ್‌ಬಾಲ್ ಮಾದರಿಯಲ್ಲಿ ಅದ್ಭುತ ಅನುಭವ ಹೊಂದಿದ್ದೇವೆ. ನೀವು ಎಲ್ಲಿ ಎದುರಿಸುತ್ತೀರಿ ಎಂಬುದು ಮುಖ್ಯವಲ್ಲ, ಅವರು ಎಲ್ಲಾ ಭಾಗದಲ್ಲಿಯೂ ಕಠಿಣವಾದ ಎದುರಾಳಿಯಾಗಿರುತ್ತಾರೆ" ಎಂದಿದ್ದಾರೆ.

ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಏಪ್ರಿಲ್ 26ರಂದು ರಾವಲ್ಪಿಂಡಿಯಲ್ಲಿ ಮೊದಲ ಪಂದ್ಯವನ್ನಾಡುವ ಮೂಲಕ ಸರಣಿ ಆರಂಭವಾಗಲಿದ್ದು ಮೇ 7ರಂದು ಈ ಸರಣಿಯ ಕೊನೆಯ ಪಂದ್ಯವನ್ನಾಡಲಿದೆ. ಇನ್ನು ಇದಕ್ಕೂ ಮುನ್ನ ಈ ಎರಡು ತಂಡಗಳ ನಡುವೆ ಟಿ20 ಸರಣಿ ಕೂಡ ಆಯೋಜನೆಯಾಗಲಿದ್ದು ಏಪ್ರಲ್ 14ರಿಂದ ಏಪ್ರಿಲ್ 24ರವರೆಗೆ ಏಕದಿನ ಸರಣಿ ಆಯೋಜನೆಯಾಗಲಿದೆ.

ನ್ಯೂಜಿಲೆಂಡ್ ಏಕದಿನ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್, ಚಾಡ್ ಬೋವ್ಸ್, ಮ್ಯಾಟ್ ಹೆನ್ರಿ, ಬೆನ್ ಲಿಸ್ಟರ್, ಕೋಲ್ ಮೆಕಾಂಚಿ, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್

Story first published: Tuesday, April 4, 2023, 16:05 [IST]
Other articles published on Apr 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+