ನ್ಯೂಜಿಲೆಂಡ್ ತಂಡ ಎರಡು ಪ್ರಮುಖ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ ಸೆಣೆಸಾಟ ನಡೆಸಲಿದ್ದು ಈ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಟಾಮ್ ಲ್ಯಾಥಮ್ ಈ ಎರಡು ಸರಣಿಗಳಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.
ಕಿವಿಸ್ ಬಳಗ ಪ್ರಸ್ತುತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಏಪ್ರಿಲ್ 2 ಭಾನುವಾರದಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು ಈ ಸರಣಿಗೆ ಇದೀಗ ತಂಡವನ್ನು ಘೋಷಿಸಲಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ಕ್ರಿಕೆಟ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ 0 ವರ್ಷದ ಲ್ಯಾಥಮ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿತ್ತು.

ಇನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಬಳಿಕ ಏಪ್ರಿಲ್ 14ರಿಂದ ಪ್ರಾರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿಯೂ ನ್ಯೂಜಿಲೆಂಡ್ಗ ತಂಡಕ್ಕೆ ಲ್ಯಾಥಮ್ ಅವರೇ ನಾಯಕನಾಗಿರಲಿದ್ದಾರೆ. ಕಿವೀಸ್ ಪಡೆ ಈ ಸರಣಿಗಾಗಿ ರಚಿನ್ ರವೀಂದ್ರ, ಚಾಡ್ ಬೋವ್ಸ್ ಅವರಂತಹ ಯುವ ಪ್ರತಿಭೆಗಳನ್ನು ಒಳಗೊಂಡಿದ್ದು ಹೆನ್ರಿ ಶಿಪ್ಲಿ ಸೇರಿದಂತೆ ಕೆಲ ಯುವ ಪ್ರತಿಭಾವಂತರಿಗೆ ಈ ಸರಣಿಯಲ್ಲಿ ಅವಕಾಶ ದೊರೆತಿದೆ.
ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಕಾರಣ ಈ ಎರಡು ಸರಣಿಗಳು ಕಿವಿಸ್ ತಂಡದ ಕೆಲ ಸ್ಟಾರ್ ಆಟಗಾರರ ಅಲಭ್ಯತೆಯೊಂದಿಗೆ ನಡೆಯಲಿದೆ. ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದ್ದರೆ ಪಾಕಿಸ್ತಾನ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ನಾಯಕ, ವಿಕೆಟ್ ಕೀಪರ್), ಚಾಡ್ ಬೋವ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಬೆನ್ ಲಿಸ್ಟರ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ವಿಲ್ ಯಂಗ್
ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ನಾಯಕ, ವಿಕೆಟ್ ಕೀಪರ್), ಚಾಡ್ ಬೋವ್ಸ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಮ್ಯಾಟ್ ಹೆನ್ರಿ, ಬೆನ್ ಲಿಸ್ಟರ್, ಆಡಮ್ ಮಿಲ್ನೆ, ಕೋಲ್ ಮೆಕಾಂಚಿ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್