For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್

New Zealand Batter Martin Guptill Overtakes Rohit Sharma in Highest Run-Scorer In T20 Cricket

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಬುಧವಾರ ಸ್ಕಾಟ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 40 ರನ್ ಗಳಿಸುವ ಮೂಲಕ ಪುರುಷರ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.

ಈ ಇನ್ನಿಂಗ್ಸ್‌ನ ಅವಧಿಯಲ್ಲಿ ಮಾರ್ಟಿನ್ ಗಪ್ಟಿಲ್ ಅವರು 3379 ರನ್‌ಗಳನ್ನು ಗಳಿಸಿರುವ ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಅತಿ ಕಡಿಮೆ ಆಟದ ಸ್ವರೂಪದಲ್ಲಿ ಹಿಂದಿಕ್ಕಿ ದೊಡ್ಡ ಮೈಲಿಗಲ್ಲು ಸಾಧಿಸಿದರು. ಬಲಗೈ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ ಈಗ ಟಿ20 ಪಂದ್ಯಗಳಲ್ಲಿ 3,399 ರನ್ ಗಳಿಸಿದ್ದಾರೆ, ಇದು ಭಾರತ ತಂಡದ ನಾಯಕ ರೋಹಿತ್ ಶರ್ಮಾಗಿಂತ 20 ರನ್ ಹೆಚ್ಚು.

ಮಾರ್ಟಿನ್ ಗುಪ್ಟಿಲ್ 116 ಟಿ20 ಪಂದ್ಯಗಳನ್ನು ಆಡಿದ್ದಾರೆ

ಮಾರ್ಟಿನ್ ಗುಪ್ಟಿಲ್ 116 ಟಿ20 ಪಂದ್ಯಗಳನ್ನು ಆಡಿದ್ದಾರೆ

ನ್ಯೂಜಿಲೆಂಡ್ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ 116 ಟಿ20 ಪಂದ್ಯಗಳನ್ನು ಆಡಿದ್ದರೆ, ರೋಹಿತ್ ಶರ್ಮಾ 128 ಪಂದ್ಯ ಆಡಿದ್ದಾರೆ. ಭಾರತ ತಂಡ ನಾಯಕ ಮುಂದಿನ ಶುಕ್ರವಾರದಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದ್ದು, ಮತ್ತೆ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿರುವ ಮೈಲಿಗಲ್ಲನ್ನು ವಾಪಸ್ ಪಡೆಯಲಿದ್ದಾರೆ.

ಕಡಿಮೆ ಸ್ವರೂಪದಲ್ಲಿ ಮಾರ್ಟಿನ್ ಗಪ್ಟಿಲ್ ಅವರ ಸರಾಸರಿ 32.37 ಆಗಿದ್ದರೆ, ರೋಹಿತ್ ಶರ್ಮಾ ಸರಾಸರಿ 32.18 ಆಗಿದೆ. ಇದೇ ವೇಳೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 50.12 ಸರಾಸರಿಯಲ್ಲಿ 3,308 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 50.12 ಸರಾಸರಿ

ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 50.12 ಸರಾಸರಿ

ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಟಿ20 ಮಾದರಿಯಲ್ಲಿ 2,894 ರನ್‌ಗಳೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ 2,855 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ನಡೆಯುತ್ತಿರುವ ಟಿ20 ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 225/5 ಮೊತ್ತ ದಾಖಲಿಸಿದರು. ನ್ಯೂಜಿಲೆಂಡ್ ಪರ ಫಿನ್ ಅಲೆನ್ ಕೇವಲ 56 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 101 ರನ್ ಗಳಿಸಿದರೆ, ಮಾರ್ಟಿನ್ ಗಪ್ಟಿಲ್ 31 ಎಸೆತಗಳಲ್ಲಿ 40 ರನ್ ಬಾರಿಸಿದರು. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ 3-0 ಅಂತರದಲ್ಲಿ ಜಯ ಸಾಧಿಸಿತ್ತು.

ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ಸಹ ಆಟಗಾರ

ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ಸಹ ಆಟಗಾರ

ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಅವರು ಬುಧವಾರ (ಜುಲೈ 27) ಎಡಿನ್‌ಬರ್ಗ್‌ನ ಗ್ರೇಂಜ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕ್ವಿಕ್‌ಫೈರ್ ಶತಕ ಬಾರಿಸಿ, ಉತ್ತಮ ಫಾರ್ಮ್ ಕಂಡುಕೊಂಡರು. ಫಿನ್ ಅಲೆನ್ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 101 ರನ್ ಗಳಿಸಿದರು.

ಫಿನ್ ಅಲೆನ್ ಶತಕ 180.36ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ ಬಂದಿತು. ಬ್ರೆಂಡನ್ ಮೆಕಲಮ್, ಕಾಲಿನ್ ಮುನ್ರೊ, ಮಾರ್ಟಿನ್ ಗಪ್ಟಿಲ್ ಮತ್ತು ಗ್ಲೆನ್ ಫಿಲಿಪ್ಸ್ ನಂತರ ಟಿ20 ಶತಕ ಬಾರಿಸಿದ ಐದನೇ ನ್ಯೂಜಿಲೆಂಡ್ ಆಟಗಾರ ಎನ್ನಿಸಿಕೊಂಡರು.

ಆರ್‌ಸಿಬಿ ವಿರುದ್ಧ ನೆಟ್ಟಿಗರ ಆಕ್ರೋಶ

ಆರ್‌ಸಿಬಿ ವಿರುದ್ಧ ನೆಟ್ಟಿಗರ ಆಕ್ರೋಶ

ಐಪಿಎಲ್ 2022ರಲ್ಲಿ ಅಲೆನ್‌ಗೆ ತಂಡದಲ್ಲಿ ಸ್ಥಾನ ನೀಡದಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಅವರ ಶತಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಸೃಷ್ಟಿಸಿತು.

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಫಿನ್ ಅಲೆನ್ ಅವರನ್ನು ಆರ್‌ಸಿಬಿ 80 ಲಕ್ಷ ರೂಪಾಯಿಗೆ ಖರೀದಿಸಿತು. ಆದರೆ ಐಪಿಎಲ್ 2022ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಾಗಲಿಲ್ಲ. ಇದರಿಂದಾಗಿ ಅಭಿಮಾನಿಗಳು ಅವರನ್ನು ಏಕೆ ಆಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Story first published: Wednesday, July 27, 2022, 23:21 [IST]
Other articles published on Jul 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+