For Quick Alerts
ALLOW NOTIFICATIONS  
For Daily Alerts
 

PAK vs NZ: ಮೆಗಾ ಟೂರ್ನಿಗೂ ಮುನ್ನ ತವರಿನಲ್ಲಿ ಪಾಕಿಸ್ತಾನಕ್ಕೆ ಮುಖಭಂಗ

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೆ ಕೇವಲ 5 ದಿನಗಳು ಮಾತ್ರ ಉಳಿದಿವೆ. ಈ ಮಹತ್ವದ ಟೂರ್ನಿಗೂ ಮುನ್ನ ತವರಿನಲ್ಲಿ ಪಾಕಿಸ್ತಾನಮುಖಭಂಗ ಅನುಭವಿಸಿದೆ. ಕರಾಚಿಯ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಕಿವೀಸ್ ಪಡೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ತ್ರಿಕೋನ ಸರಣಿ ನಡೆಯಿತು.

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49.3 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ನೀಡಿದ್ದ ಗುರಿಯನ್ನು 45.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿದ ನ್ಯೂಜಿಲೆಂಡ್ 28 ಎಸೆತಗಳು ಮತ್ತು 5 ವಿಕೆಟ್‌ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು.

New Zealand beat Pakistan in final of the tri-series to win trophy

ಬಾಬರ್ ಅಜಮ್ ಮತ್ತು ಫಖರ್ ಜಮಾನ್ ಪಾಕಿಸ್ತಾನ ಪರ ಇನ್ನಿಂಗ್ಸ್ ಆರಂಭಿಸಿದರು. ಆದರೆ ಪಾಕಿಸ್ತಾನ ತಂಡವು ಫಖರ್ (10) ರೂಪದಲ್ಲಿ ಮೊದಲ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ನಂತರ ಸೌದ್ ಶಕೀಲ್ (8) ಪೆವಿಲಿಯನ್‌ಗೆ ಮರಳಿದರು. ಬಾಬರ್ ಕೂಡ ಹೆಚ್ಚು ಹೊತ್ತು ಆಟವಾಡಲಿಲ್ಲ. ಕೇವಲ 29 ರನ್‌ಗಳಿಗೆ ಔಟಾದರು. ಇದಾದ ನಂತರ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ 54 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು.

ಪಾಕಿಸ್ತಾನ ಮಧ್ಯಮ ಕ್ರಮಾಂಕವು ಹೇಗೋ ಪಂದ್ಯಕ್ಕೆ ಜೀವ ತುಂಬಿ ತಂಡವನ್ನು ಹೋರಾಟದ ಸ್ಕೋರ್‌ಗೆ ಕೊಂಡೊಯ್ದಿತು. ರಿಜ್ವಾನ್ 46 ರನ್, ಸಲ್ಮಾನ್ ಅಗಾ 45 ರನ್ ಹಾಗೂ ತಯ್ಯಬ್ ತಾಹಿರ್ 38 ರನ್ ಗಳಿಸಿದರು. ಆದರೆ ಅವರ ವಿಕೆಟ್ ನಂತರ, ಉಳಿದ ಪಾಕಿಸ್ತಾನ ಬ್ಯಾಟರ್‌ಗಳು ತಂಡಕ್ಕೆ ನೆರವಾಗಲಿಲ್ಲ. ಪರಿಣಾಮ ಪಾಕಿಸ್ತಾನ 242 ರನ್‌ಗಳಿಗೆ ಆಲೌಟಾಯಿತು. ನ್ಯೂಜಿಲೆಂಡ್ ಪರ ವಿಲಿಯಂ ಒ'ರೂರ್ಕ್ 4 ವಿಕೆಟ್ ಪಡೆದರೆ, ಮೈಕೆಲ್ ಬ್ರೇಸ್‌ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 2 ವಿಕೆಟ್ ಪಡೆದರು.

ಕಿವೀಸ್ ಪಡೆ ಚೇಸಿಂಗ್

ಪಾಕಿಸ್ತಾನ ನೀಡಿದ್ದ 243 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ವಿಲ್ ಯಂಗ್ ಮತ್ತು ಡೆವೊನ್ ಕಾನ್ವೇ ನ್ಯೂಜಿಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದರು, ಆದರೆ ಯಂಗ್ ಕೇವಲ 5 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಡೆವೊನ್ ಕಾನ್ವೇ ಅವರು ಕೇನ್ ವಿಲಿಯಮ್ಸನ್ ಜೊತೆಗೂಡಿ ತಂಡದ ಸ್ಕೋರ್ ಅನ್ನು
70ರ ದಾಟಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಕೇನ್ ವಿಲಿಯಮ್ಸನ್ 34 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.

ಕಾನ್ವೇ ಕೂಡ 74 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 48 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ ಮತ್ತು ಟಾಮ್ ಲ್ಯಾಥಮ್ ಅರ್ಧಶತಕಗಳನ್ನು ಗಳಿಸಿ ಮಿಂಚಿದರು. ಮಿಚೆಲ್ 58 ಎಸೆತಗಳಲ್ಲಿ 6 ಬೌಂಡರಿಗಳಿಂದ 57 ರನ್ ಗಳಿಸಿದರು. ಲ್ಯಾಥಮ್ 64 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 56 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 20 ಮತ್ತು ಮೈಕೆಲ್ ಬ್ರೇಸ್‌ವೆಲ್ ಅಜೇಯ 2 ರನ್ ಗಳಿಸಿ ನ್ಯೂಜಿಲೆಂಡ್‌ಗೆ ಗೆಲುವು ತಂದುಕೊಟ್ಟರು. ಪಾಕಿಸ್ತಾನ ಪರ ನಸೀಮ್ ಶಾ 2 ವಿಕೆಟ್ ಉರುಳಿಸಿದರೆ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್ ಮತ್ತು ಸಲ್ಮಾನ್ ಆಘಾ ತಲಾ 1 ವಿಕೆಟ್ ಪಡೆದರು.

Story first published: Friday, February 14, 2025, 23:53 [IST]
Other articles published on Feb 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+