Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್‌ ಗೆಲುವಿನ ಆರಂಭ

ಚೆನ್ನೈ: ಭರವಸೆಯ ಬ್ಯಾಟರ್‌ ಟೀಮ್ ಸಿಫರ್ಟ್‌ ಅವರು ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್‌ 5 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು "ಡಿ" ಗುಂಪಿನ ಪಂದ್ಯದಲ್ಲಿ ಮಣಿಸಿ ಶುಭಾರಂಭ ಮಾಡಿದೆ.

ಟಾಸ್‌ ಗೆದ್ದ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ರಹಮತುಲ್ಲಾ ಗುರ್ಬಾಜ್‌ (27) ಹಾಗೂ ಇಬ್ರಾಹಿಂ ಜರ್ದಾನ್‌ (10) ಮೊದಲ ವಿಕೆಟ್‌ಗೆ 35 ರನ್‌ಗಳ ಜೊತೆಯಾದ ಕಾಣಿಕೆ ನೀಡಿದರು. ಮೂರನೇ ವಿಕೆಟ್‌ಗೆ ಗುಲ್ಬುದೀನ್ ನಯಿಬ್ ಹಾಗೂ ಸೆಡಿಕುಲ್ಲಾ ಅಟಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೂರನೇ ವಿಕೆಟ್‌ಗೆ 51 ಎಸೆತಗಳಲ್ಲಿ 79 ರನ್‌ ಬಾರಿಸಿತು.

New Zealand

ಗುಲ್ಬುದೀನ್ ಅರ್ಧಶತಕ

ಸೆಡಿಕುಲ್ಲಾ ಅಟಲ್ 2 ಬೌಂಡರಿ ಸೇರಿದಂತೆ 29 ರನ್‌ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಗುಲ್ಬುದೀನ್ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 35 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 63 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದಂತೆ ದರ್ವಿಶ್ ರಸೂಲಿ (20), ಅಜ್ಮತುಲ್ಲಾ ಒಮರ್ಜಾಯ್ (14), ಮೊಹಮ್ಮದ್ ನಬಿ (10) ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ ಸೇರಿಸಿತು.

ಸಿಫರ್ಟ್‌ ಭರ್ಜರಿ ಬ್ಯಾಟಿಂಗ್

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಫಿನ್ ಅಲೆನ್ (1), ರಚಿನ್ ರವಿಂದ್ರ (0) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಟಿಮ್ ಸಿಫರ್ಟ್‌ ಹಾಗೂ ಗ್ಲೆನ್ ಫಿಲಿಪ್ಸ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರಾವಾಯಿತು. ಈ ಜೋಡಿ ಪವರ್‌ ಪ್ಲೇನಲ್ಲಿ ಮತ್ತೆ ವಿಕೆಟ್‌ಗಳು ಬೀಳದಂತೆ ನೊಡಿಕೊಂಡು ಬ್ಯಾಟ್ ಮಾಡಿತು. ಮೂರನೇ ವಿಕೆಟ್‌ಗೆ ಟಿಮ್‌ ಸಿಫರ್ಟ್‌ ಹಾಗೂ ಫಿಲಿಪ್ಸ್‌ ಜೋಡಿ 47 ಎಸೆತಗಳಲ್ಲಿ 74 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.

New Zealand

ಗ್ಲೆನ್ ಫಿಲಿಪ್ಸ್‌ 7 ಬೌಂಡರಿ 1 ಸಿಕ್ಸರ್ ಸಹಾಯದಿಂದ 42 ರನ್‌ ಬಾರಿಸಿದ್ದಾಗ ಔಟ್ ಆದರು. ಟಿಮ್‌ ಸಿಫರ್ಟ್‌ 7 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 65 ರನ್‌ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಮಾರ್ಕ್‌ ಚಾಪ್ಮೆನ್‌ 28, ಡೆರಿಲ್ ಮಿಚಲ್‌ ಅಜೇಯ 25 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್‌ 5 ವಿಕೆಟ್‌ಗೆ 183 ರನ್‌ ಸೇರಿಸಿ ಜಯ ಸಾಧಿಸಿತು.

ನ್ಯೂಜಿಲೆಂಡ್ ತಂಡ ಮುಂದಿನ ಪಂದ್ಯವನ್ನು ಯುಎಇ ವಿರುದ್ಧ ಚೆನ್ನೈನಲ್ಲಿ ಫೆ.10 ರಂದು ಅಡಲಿದೆ. ಅಫ್ಘಾನಿಸ್ತಾನ ತಂಡ ಲೀಗ್‌ ಹಂತದ ಮುಂದಿನ ಪಂದ್ಯವನ್ನು ಫೆಬ್ರವರಿ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

Story first published: Sunday, February 8, 2026, 17:01 [IST]
Other articles published on Feb 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+