ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟಿ20 ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್

New Zealand crush West Indies by 72 runs to take unassailable series lead

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಮುಕ್ತಾಯವಾಗಿದ್ದು ನ್ಯೂಜಿಲೆಂಡ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸಿದ್ದ ಕೀವಿಸ್ ಪಡೆ 3 ಪಂದ್ಯಗಳ ಚುಟುಕು ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಇದರ ಲಾಭವನ್ನು ನ್ಯೂಜಿಲೆಂಡ್ ಪಡೆ ಭರ್ಜರಿಯಾಗಿ ಪಡೆದುಕೊಂಡಿತು. ಉತ್ತಮ ಆರಂಭವನ್ನು ಪಡೆದುಕೊಂಡ ಕೀವಿಸ್ ಪಡೆ ಆರಂಭಿಕರನ್ನು ಕಳೆದುಕೊಂಡ ಬಳಿಕ ಭರ್ಜರಿ ಆಟವನ್ನು ಕಂಡಿತು.

 ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್ ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾನ್ವೇ ಹಾಗೂ ಗ್ಲೆನ್ ಫಿಲಿಪ್ಸ್ 184ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದರು. ಗ್ಲೆನ್ ಫಿಲಿಪ್ಸ್ 51 ಎಸೆತಗಳಲ್ಲಿ 108 ರನ್ ಚಚ್ಚಿದರು ಇದರಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳು ಇದ್ದವು. ಕಾನ್ವೇ 37 ಎಸೆತಗಳಲ್ಲಿ 65 ರನ್ ಬಾರಿಸಿ ಮಿಂಚಿದರು. ಈ ಬೃ್ಜರಿ ಆಟದ ಪರಿಣಾಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 238 ರನ್ ಗಳಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ನಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಂಡುಬರಲಿಲ್ಲ. ಯಾವುದೇ ದೊಡ್ಡ ಜೊತೆಯಾಟ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಂದ ಬಾರದಂತೆ ನೋಡಿಕೊಳ್ಳುವಲ್ಲಿ ಕೀವಿಸ್ ಬೌಲರ್‌ಗಳು ಯಶಸ್ವಿಯಾದರು.

ಆಯ್ಕೆಗಾರರ ಅಂತಿಮ ಕ್ಷಣದ ನಿರ್ಧಾರದತ್ತ ಬೊಟ್ಟು ಮಾಡಿದ ಮೊಹಮ್ಮದ್ ಕೈಫ್ಆಯ್ಕೆಗಾರರ ಅಂತಿಮ ಕ್ಷಣದ ನಿರ್ಧಾರದತ್ತ ಬೊಟ್ಟು ಮಾಡಿದ ಮೊಹಮ್ಮದ್ ಕೈಫ್

ವೆಸ್ಟ್ ಇಂಡೀಸ್ ತಂಡದ ನಾಯಕ ಕಿತಾನ್ ಪೊಲಾರ್ಡ್ ಗಳಿಸಿದ 28 ರನ್ ತಂಡದ ಪರ ಅತ್ಯಧಿಕ ಮೊತ್ತವಾಗಿದೆ. ನಿಗದಿತ 20ಓವರ್‌ಗಳಲ್ಲಿ ವೆಸ್ಟ್ ಇಂಡೀ್ ತಂಡ ತನ್ನ 9 ವಿಕೆಟ್ ಕಳೆದುಕೊಂಡು 166 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು. ಈ ಮೂಲಕ ಕೀವಿಸ್ ಪಡೆ 72 ರನ್‌ಗಳ ಅಂತರದ ಬೃಹತ್ ಗೆಲುವನ್ನು ಸಾಧಿಸಿತು.

Story first published: Sunday, November 29, 2020, 12:27 [IST]
Other articles published on Nov 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X