ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿ ಆರಂಭವಾಗಿದೆ. 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಕ್ಲೆಂಡ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಶಾಹೀನ್ ಅಫ್ರಿದಿ ನಾಯಕತ್ವದ ಚೊಚ್ಚಲ ಪಂದ್ಯವಾಗಿದೆ.
ವಿಶ್ವಕಪ್ ಬಳಿಕ ಬಾಬರ್ ಅಜಮ್ ನಾಯಕತ್ವ ತೊರೆದರು. ಇದಾದ ನಂತರ ಶಾಹೀನ್ ಅಫ್ರಿದಿಗೆ ತಂಡದ ಚುಕ್ಕಾಣಿಯನ್ನು ನೀಡಲಾಯಿತು. ಈ ಪಂದ್ಯದಲ್ಲಿ ಅಫ್ರಿದಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು ಆದರೆ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬೌಲರ್‌ಗಳು ಎಡವಿದರು.

ವಿಶ್ವದ ಸ್ಟಾರ್ ವೇಗದ ಬೌಲರ್‌ಗಳಲ್ಲಿ ಶಾಹೀದ್ ಅಫ್ರಿದಿಗೂ ಸ್ಥಾನವಿದೆ. ಇವರ ಬೆಂಕಿಯಂತಹ ಚೆಂಡುಗಳನ್ನು ಎದುರಿಸುವುದು ಕಷ್ಟ. ಈ ವೇಳೆ ಇವರ ಆರ್ಭಟವೇ ಜೋರಾಗಿರುತ್ತದೆ. ಆದರೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಿವೀಸ್ ಎಡಗೈ ವೇಗಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ.
ಶಾಹೀನ್ ಅಫ್ರಿದಿ ಅವರ ಒಂದೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಫಿನ್ ಅಲೆನ್ 5 ಬೌಂಡರಿಗಳನ್ನು ಬಾರಿಸಿದರು. ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಶಾಹೀನ್ ಅಫ್ರಿದಿಗೆ ಸಿಕ್ಸರ್ ಪೆಟ್ಟು ಬಿದ್ದಿತು. ಯಾರ್ಕರ್ ಮಾಡಲು ಯತ್ನಿಸಿದ ಶಾಹೀನ್ ಹಾಫ್ ವಾಲಿ ನೀಡಿದರು. ಅಲೆನ್ ಒಂದು ಕೈಯಿಂದ ಸಿಕ್ಸರ್ ಬಾರಿಸಿದರು.
ಸಿಕ್ಸರ್ ಬಳಿಲ ಅಲೆನ್ ಸತತ ಮೂರು ಎಸೆತಗಳಲ್ಲಿ ಮೂರು ಬೌಂಡರಿಗಳನ್ನು ಬಾರಿಸಿದರು. ಎರಡನೇ ಚೆಂಡು ಮಿಡ್-ಆಫ್ ಕಡೆಗೆ, ಮೂರನೆಯದು ಶಾರ್ಟ್ ಫೈನ್ ಲೆಗ್ ಕಡೆಗೆ ಮತ್ತು ನಾಲ್ಕನೇ ಚೆಂಡು ಕವರ್ ಕಡೆಗೆ ಬೌಂಡರಿ ಗೆರೆ ದಾಟಿತು.

ಫಿನ್ ಅಲೆನ್ ಓವರ್ ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಶಾಹೀನ್ ಅಫ್ರಿದಿ ಮತ್ತೊಮ್ಮೆ ಯಾರ್ಕರ್ ಹಾಕಲು ಹೋಗಿ, ಎಡವಿದರು. ಇದರ ಸಂಪೂರ್ಣ ಲಾಭವನ್ನು ಪಡೆದ ಫಿನ್ ಅಲೆನ್ ಲಾಂಗ್ ಆನ್ ಮೇಲಿನಿಂದ ಸಿಕ್ಸರ್ ಬಾರಿಸಿದರು. ಈ ಮೂಲಕ ಶಾಹೀನ್ ಓವರ್‌ನಲ್ಲಿ 24 ರನ್ ಗಳಿಸಿದರು.
ಶಾಹೀನ್ ಅಫ್ರಿದಿ ಅವರ ಎರಡನೇ ಓವರ್‌ನಲ್ಲಿ ರನ್‌ಗಳನ್ನು ದಂಡೀಯಾಗಿ ನೀಡಿ ನಿರಾಸೆ ಅನುಭವಿಸಿದರು. ಆದರೆ ಅವರು ಮೊದಲ ಓವರ್‌ನಲ್ಲಿ ಅದ್ಭುತವಾಗಿ ಬೌಲ್ ಮಾಡಿದರು. ಅವರು ಓವರ್‌ನ ಎರಡನೇ ಎಸೆತದಲ್ಲಿ ಡೆವೊನ್ ಕಾನ್ವೆ ಅವರನ್ನು ಔಟ್ ಮಾಡಿದರು.
ಕಾನ್ವೇ ಚೆಂಡನ್ನು ಬಾರಿಸಲು ಪ್ರಯತ್ನಿಸಿದರು. ಕಾನ್ವೆಗೆ ಚೆಂಡನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಚೆಂಡು ಬ್ಯಾಟ್‌ಗೆ ಬಡೆದ ನಂತರ ಶಾಟ್ ನೇರವಾಗಿ ಕವರ್‌ನ ಕೈಗೆ ಹೋಯಿತು. ಮೊದಲ ಓವರ್‌ನಲ್ಲಿ ಶಾಹೀನ್ ಅಫ್ರಿದಿ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದರು. ಆದರೆ ಎರಡನೇ ಓವರ್‌ನಲ್ಲಿ ಫಿನ್ ಅಲೆನ್ ಅವರನ್ನು ದಂಡಿಸಿದರು.
ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಶಾಹೀನ್ 4 ಓವರ್ ಬೌಲಿಂಗ್ ನಡೆಸಿ 46 ರನ್ ನೀಡಿ ಬಹುಮುಖ್ಯ ಮೂರು ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ಇವರ ಎಕಾನಮಿ 11.50 ಆಗಿತ್ತು.