For Quick Alerts
ALLOW NOTIFICATIONS  
For Daily Alerts
 

ಈ ವಾರ ಕಿವೀಸ್ ಆಟಗಾರರು ಮಾಲ್ಡೀವ್ಸ್‌ನಿಂದ ಯುಕೆಗೆ ಪ್ರಯಾಣ ಸಾಧ್ಯತೆ

New Zealand players likely to depart for UK from Maldives this weekend: Gary Stead

ಆಕ್ಲೆಂಡ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್ ಆಟಗಾರರು ಭಾರತದಿಂದ ನೇರವಾಗಿ ನ್ಯೂಜಿಲೆಂಡ್‌ಗೆ ಪ್ರಯಾಣಿಸದೆ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿಂದ ಕೀವೀಸ್ ಆಟಗಾರರು ಈ ವಾರ ಯುನೈಟೆಡ್ ಕಿಂಗ್ಡಮ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ಐಪಿಎಲ್ 2021ರಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್ ಆಟಗಾರರು ಟೂರ್ನಿ ಅರ್ಧದಿಂದಲೇ ಭಾರತ ತೊರೆಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕಾರಣ ಭಾರತದಲ್ಲಿ ಹೆಚ್ಚುತ್ತಿದ್ದ ಕೋವಿಡ್-19 ಪ್ರಕರಣಗಳು ಮತ್ತು ಐಪಿಎಲ್ ಬಯೋಬಬಲ್ ಒಳಗೂ ಪ್ರವೇಶಿಸಿದ ಸೋಂಕಿನಿಂದಾಗಿ ಐಪಿಎಲ್ ಟೂರ್ನಿ ಅರ್ಧಕ್ಕೆ ನಿಲುಗಡೆಯಾಗಿತ್ತು.

ಐಪಿಎಲ್ ಬಳಿಕ ಈಗ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸುತ್ತಿದೆ. ಹೀಗಾಗಿಯೇ ಶೀಘ್ರ ಭಾರತ ಮತ್ತು ಕಿವೀಸ್ ಯುಕೆಗೆ ಪ್ರಯಾಣಿಸಲಿದೆ. ಅಲ್ಲಿ ಭಾರತ-ಕಿವೀಸ್ ಮಧ್ಯೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಇಂಗ್ಲೆಂಡ್-ಭಾರತ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

'ನನಗೆ ಎಲ್ಲಾ ಮಾಹಿತಿಗಳು ಗೊತ್ತಿಲ್ಲ. ಆದರೆ ನನಗನ್ನಿಸುವ ಪ್ರಕಾರ ನ್ಯೂಜಿಲೆಂಡ್ ಆಟಗಾರರು ಮೇ 15, 16 ಅಥವಾ 17ಕ್ಕೆ ಮಾಲ್ಡೀವ್ಸ್‌ನಿಂದ ಯುಕೆಗೆ ಪ್ರಯಾಣಿಸಲಿದ್ದಾರೆ,' ಎಂದು ಗ್ಯಾರಿ ಸ್ಟೆಡ್ ಹೇಳಿದ್ದಾರೆ. ಜೂನ್ 18ರಿಂದ 22ರ ವರೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ನಡೆದರೆ ಆಗಸ್ಟ್ 4ರಿಂದ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ.

Story first published: Tuesday, May 11, 2021, 17:04 [IST]
Other articles published on May 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+