For Quick Alerts
ALLOW NOTIFICATIONS  
For Daily Alerts
 

NZ vs PAK T20: ಪಾಕಿಸ್ತಾನ ವಿರುದ್ಧ ಕಿವೀಸ್ ಪಡೆಗೆ 115 ರನ್‌ಗಳ ದಾಖಲೆಯ ಗೆಲುವು

ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ 115 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಿವೀಸ್ ಪಡೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಕಿವೀಸ್ ಪಡೆ ದಾಖಲೆ ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್‌ ನ್ಯೂಜಿಲೆಂಡ್ ರನ್‌ಗಳ ವಿಷಯದಲ್ಲಿ ಎರಡನೇ ಅತಿದೊಡ್ಡ ಗೆಲುವು ದಾಖಲಿಸಿದೆ.

ಬೇ ಓವಲ್‌ನಲ್ಲಿ 2018 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 119 ರನ್‌ಗಳಿಂದ ಸೋಲಿಸಿದ್ದು ಕಿವೀಸ್ ಪಡೆಯ ಅತಿದೊಡ್ಡ ಗೆಲುವಾಗಿತ್ತು. ಇದೀಗ ಪಾಕಿಸ್ತಾನ ತಂಡವನ್ನು 115 ರನ್‌ಗಳ ಅಂತರದಲ್ಲಿ ಮಣಿಸಿದೆ.

New Zealand record 115-run win over Pakistan

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ತಂಡದ ಪರ ಬ್ಯಾಟರ್‍‌ಗಳು ಅದ್ಭುತ ಆರಂಭವನ್ನು ನೀಡಿದರು. ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ಜೋಡಿ 4.1 ಓವರ್‌ಗಳಲ್ಲಿ 59 ರನ್ ಗಳಿಸಿತು.

ಸೀಫರ್ಟ್ 22 ಎಸೆತಗಳಲ್ಲಿ 44 ರನ್ ಗಳಿಸಿ ಔಟಾದರೆ, ಬಳಿಕ ಫಿನ್ ಅಲೆನ್ 20 ಎಸೆತಗಳಲ್ಲಿ 50 ರನ್ ಗಳಿಸಿದರು. ಮೈಕೆಲ್ ಬ್ರೇಸ್‌ವೆಲ್ 26 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿದರು. ಪರಿಣಾಮ ಕಿವೀಸ್ ಪಡೆ ನಿಗದಿತ 20 ಓವರ್‍‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 220 ಗಳಿಸಿತು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಮೂರು ವಿಕೆಟ್ ಪಡೆದರು.

ಕಿವೀಸ್ ಪಡೆ ನೀಡಿದ 221 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಇರ್ಫಾನ್ ಖಾನ್ ಮತ್ತು ಅಬ್ದುಲ್ ಸಮದ್ ಮಾತ್ರ ಎರಡಂಕಿಯ ಸ್ಕೋರ್ ಗಳಿಸಿದ್ದಾರೆ. ಉಳಿದ ಯಾವುದೇ ಬ್ಯಾಟರ್ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಬೌಲರ್‍‌ಗಳ ದಾಳಿಗೆ ತತ್ತರಿಸಿದ ಪಾಕಿಸ್ತಾನ 105 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 119 ರನ್‌ಗಳ ಗೆಲುವು ನ್ಯೂಜಿಲೆಂಡ್ ಸರಣಿಯನ್ನು ಗೆಲ್ಲಲು ಸಹಾಯ ಮಾಡಿತು.

ನ್ಯೂಜಿಲೆಂಡ್ ಪರ ಜಾಕೋಬ್ ಡಫ್ಫಿ 4 ವಿಕೆಟ್ ಉರುಳಿಸಿ ಮಿಂಚಿದರೆ, ಜಕಾರಿ ಫೌಲ್ಕ್ಸ್ 3 ವಿಕೆಟ್ ಕಬಳಿಸಿದರು. ವಿಲಿಯಂ ಒರೂರ್ಕ್, ಜೇಮ್ಸ್ ನೀಶಮ್ ಮತ್ತು ಇಶ್ ಸೋಧಿ ತಲಾ ಒಂದೊಂದು ವಿಕೆಟ್ ಪಡೆದರು.

Story first published: Sunday, March 23, 2025, 19:47 [IST]
Other articles published on Mar 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+