
ಆಕ್ಲೆಂಡ್: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್, ನಿಯಮಿತ ಓವರ್‌ಗಳ ತಂಡದ ನಾಯಕ ತಮೀಮ್ ಇಕ್ಬಾಲ್ ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿರುವ ಇಕ್ಬಾಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿಲ್ಲ.
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಮಾರ್ಚ್ 20ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಅದಾದ ಬಳಿಕ ಇತ್ತಂಡಗಳ ಮಧ್ಯೆ ಮೂರು ಪಂದ್ಯಗಳ ಟಿ20ಐ ಸರಣಿ ಮಾರ್ಚ್ 28ರಿಂದ ಆರಂಭಗೊಳ್ಳಲಿದೆ.
ಬಾಂಗ್ಲಾದೇಶ ಏಕದಿನ ತಂಡದ ನಾಯಕರಾಗಿರುವ ತಮೀಮ್ ಇಕ್ಬಾಲ್, ಟಿ20ಐ ಸರಣಿಯಿಂದ ಹೊರಗುಳಿಯುವ ತನ್ನ ನಿರ್ಧಾರವನ್ನು ತಂಡದ ಮುಖ್ಯ ಕೋಚ್ ರಸ್ಸೆಲ್ ಡೊಮಿಂಗೊ ಮತ್ತು ಆಯ್ಕೆ ಸಮಿತಿಯ ಮಿನ್ಹಾಜುಲ್ ಅಬೆದಿನ್ ಗೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.
'ನ್ಯೂಜಿಲೆಂಡ್‌ಗೆ ಪ್ರವಾಸ ಬರುವುದಕ್ಕೂ ಮುನ್ನವೇ ನಾನು ಟಿ20ಐ ಸರಣಿಗೆ ಲಭ್ಯನಿರುವುದಿಲ್ಲ ಅನ್ನೋದನ್ನು ಕೋಚ್ ರಸ್ಸೆಲ್ ಡೊಮಿಂಗೊ ಮತ್ತು ಆಯ್ಕೆ ಸಮಿತಿಯ ಮಿನ್ಹಾಜುಲ್ ಅಬೆದಿನ್ ಗೆ ಹೇಳಿದ್ದೇನೆ,' ಎಂದು ಇಕ್ಬಾಲ್ ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಇಕ್ಬಾಲ್ ಹೇಳಿದ್ದಾರೆ.