ಪಾಕಿಸ್ತಾನ vs ನ್ಯೂಜಿಲೆಂಡ್, ಟಿ20 ಮೊದಲ ಪಂದ್ಯ, Live ಸ್ಕೋರ್

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಟಿ20 ಸರಣಿಯಲ್ಲಿ ಹೋರಾಟವನ್ನು ನಡೆಸಲಿದೆ. ಇಂದು ಮೊದಲ ಪಂದ್ಯವಾಗಿದ್ದು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಾಕಿಸ್ತಾನ ತಂಡವನ್ನು ಮೊಹಮ್ಮದ್ ರಿಜ್ವಾನ್ ಮುನ್ನಡೆಸುತ್ತಿದ್ದರೆ ನ್ಯೂಜಿಲೆಂಡ್ ತಂಡದ ನಾಯಕತ್ವ ಮಿಚೆಲ್ ಸ್ಯಾಂಟ್ನರ್ ಹೆಗಲೇರಿದೆ.
ಪಾಕಿಸ್ತಾನದ ಪಾಳಯದಲ್ಲಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಹೆಚ್ಚಿನ ಕಾಲವನ್ನು ಪಾಕ್ ತಂಡ ಕ್ವಾರಂಟೈನ್‌ನಲ್ಲೇ ಕಳೆದಿದೆ. ಪಾಕ್ ಪಾಳಯದಲ್ಲಿ ಸಾಕಷ್ಟು ಗೊಂದಲಗಳ ಬಳಿಕ ಇದೀಗ ಸರಣಿಗೆ ಚಾಲನೆ ದೊರೆತಿದೆ. ಯುವ ಆಟಗಾರರನ್ನು ಹೊಂದಿರುವ ಪಾಕ್ ಕೀವಿಸ್ ನೆಲದಲ್ಲಿ ಚುಟುಕು ಕ್ರಿಕೆಟ್ ಸರಣಿಯನ್ನು ವಶಪಡಿಸಿಕೊಳ್ಳುವ ಉತ್ಸಾಹದಲ್ಲಿ ಇದೆ.
Live ಸ್ಕೋರ್ ಪಟ್ಟಿ ಈ ಕೆಳಗಿನಂತಿದೆ:
ಮತ್ತೊಂದೆಡೆ ತವರಿನಲ್ಲಿ ನ್ಯೂಜಿಲೆಂಡ್ ಯಾವಾಗಲೂ ಬಲಿಷ್ಠವಾಗಿದ್ದು ಪಾಕಿಸ್ತಾನ ತಂಡವನ್ನು ಮಣಿಸುವ ಬಲ ಹೊಂದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸಾಕಷ್ಟು ಸಮತೋಲಿತವಾಗಿದ್ದು ಪಂದ್ಯ ಗೆಲ್ಲುವ ಫೇವರೀಟ್ ತಂಡ ಎನಿಸಿಕೊಮಡಿದೆ.
ಆಡುವ ಬಳಗ ಹೀಗಿದೆ
ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗುಪ್ಟಿಲ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜೇಮ್ಸ್ ನೀಶಮ್, ಮಾರ್ಕ್ ಚಾಪ್ಮನ್, ಸ್ಕಾಟ್ ಕುಗ್ಗೆಲೀಜ್ನ್, ಇಶ್ ಸೋಧಿ, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫಿಕ್, ಹೈದರ್ ಅಲಿ, ಮೊಹಮ್ಮದ್ ಹಫೀಜ್, ಶಾದಾಬ್ ಖಾನ್ (ನಾಯಕ), ಖುಷ್ದಿಲ್ ಷಾ, ಇಮದ್ ವಾಸಿಮ್, ಫಹೀಮ್ ಅಶ್ರಫ್, ವಹಾಬ್ ರಿಯಾಜ್, ಶಾಹೀನ್ ಅಫ್ರಿದಿ, ಹರಿಸ್ ರವೂಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications