ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್: ಹೆನ್ರಿ ನಿಕೋಲ್ಸ್ ಶತಕದಾಟ

ವೆಲ್ಲಿಂಗ್ಟನ್: ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹೆನ್ರಿ ನಿಕೋಲ್ಸ್ ಶತಕ ಬಾರಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿರುವ ನ್ಯೂಜಿಲೆಂಡ್ ಶುಕ್ರವಾರ ಮೊದಲ ದಿನದಾಟದ ಅಂತ್ಯಕ್ಕೆ 294 ರನ್ ಬಾರಿಸಿದೆ.
ಇನ್ನಿಂಗ್ಸ್‌ಗೆ ಇಳಿದ ನ್ಯೂಜಿಲೆಂಡ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲ್ಯಾಥಮ್ 27, ಟಾಮ್ ಬ್ಲಂಡಲ್ 14, ವಿಲ್ ಯಂಗ್ 43, ರಾಸ್ ಟೇಲರ್ 9, ಬಿಜೆ ವ್ಯಾಟ್ಲಿಂಗ್ 30, ಡೇರ್ಲಿ ಮಿಚೆಲ್ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.
ಹೆನ್ರಿ ನಿಕೋಲ್ಸ್ 117, ಕೈಲ್ ಜೇಮಿಸನ್ 1 ರನ್ ಬಾರಿಸಿ ಆಡುತ್ತಿದ್ದಾರೆ. ಶುಕ್ರವಾರ ಮೊದಲನೇ ದಿನದಾಟದ ಅಂತ್ಯಕ್ಕೆ 84ನೇ ಓವರ್‌ಗೆ ಮುಕ್ತಾಯಕ್ಕೆ 294 ರನ್ ಬಾರಿಸಿದೆ. ವೆಸ್ಟ್ ಇಂಡೀಸ್‌ನ ಶ್ಯಾನನ್ ಗೇಬ್ರಿಯಲ್ 3, ಅಲ್ಝಾರಿ ಜೋಸೆಫ್ 1, ಕೆಮರ್ ಹೋಲ್ಡರ್ 2 ವಿಕೆಟ್ ಪಡೆದಿದ್ದಾರೆ.
ನ್ಯೂಜಿಲೆಂಡ್‌ಗೆ ಪ್ರವಾಸ ಬಂದಿರುವ ವೆಸ್ಟ್ ಇಂಡೀಸ್ ತಂಡ, ಮೂರು ಪಂದ್ಯಗಳ ಟಿ20ಐ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ 2-0ಯಿಂದ ಗೆದ್ದಿತ್ತು. ಮೊದಲ ಟೆಸ್ಟ್‌ನಲ್ಲೂ ಕಿವೀಸ್ ಇನ್ನಿಂಗ್ಸ್ ಸಹಿತ 134 ರನ್ ಜಯ ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications