Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್

New Zealand, West Indies players pass final COVID-19 tests

ವೆಲ್ಲಿಂಗ್ಟನ್: ಕ್ರೈಸ್ಟ್‌ಚರ್ಚ್‌ನಲ್ಲಿ ಐಸೊಲೇಶನ್‌ನಲ್ಲಿದ್ದ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಎಲ್ಲಾ ಆಟಗಾರರು ಮೂರನೇ ಮತ್ತು ಕೊನೇಯ ಕೋವಿಡ್ 19 ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ನವೆಂಬರ್ 27ರ ಶುಕ್ರವಾರದಿಂದ ವೆಸ್ಟ್ ಇಂಡೀಸ್-ನ್ಯೂಜಿಲೆಂಡ್ ಸರಣಿಗಳು ಆರಂಭಗೊಳ್ಳಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡ ಬಳಿಕ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಬಂದಿತ್ತು. ತಂಡದಲ್ಲಿ ಸುಮಾರು 20 ಆಟಗಾರರು ಮತ್ತು ಬೆಂಬಲ ಸಿಬ್ಬಂದಿಯಿದ್ದರು. ನ್ಯೂಜಿಲೆಂಡ್‌ಗೆ ಬಂದಿಳಿದ ಬಳಿಕ ಕೆರಿಬಿಯನ್ನರು 14 ದಿನಗಳ ಕ್ವಾರಂಟೈನ್ ಪಾಲಿಸಿದ್ದರು.

ವೆಸ್ಟ್ ಇಂಡೀಸ್-ನ್ಯೂಜಿಲೆಂಡ್ ಸರಣಿ 3 ಟಿ20ಐ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಐಸೊಲೇಶನ್‌ನಲ್ಲಿದ್ದ ಆಟಗಾರರಿಗೆ ಗುರುವಾರ ಬಿಡುಗಡೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇತ್ತಂಡಗಳ ಸರಣಿ ಟಿ20ಯಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.

ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಸಣ್ಣ ಬದಲಾವಣೆಯಾಗಲಿದೆ. ಆಲ್ ರೌಂಡರ್ ಕಾಲಿನ್ ಕಾಲಿನ್‌ ಡೇ ಗ್ರ್ಯಾಂಡ್‌ಹೋಮ್ ಮತ್ತು ಎಡಗೈ ಸ್ಪಿನ್ನರ್ ಅಜಝ್ ಪಟೇಲ್ ಗಾಯದಿಂದಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಅಂದ್ಹಾಗೆ ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ಸರಣಿ ವೇಳೆಯೇ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಗೊಳ್ಳುತ್ತಿದೆ.

Story first published: Wednesday, November 25, 2020, 13:30 [IST]
Other articles published on Nov 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+