Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ದಾಖಲೆ ಅಳಿಸಿ ದಾಖಲೆಯ ರನ್‌ ಚೇಸ್‌ ಮಾಡಿದ ನ್ಯೂಜಿಲೆಂಡ್ ವನಿತೆಯರು

ಕ್ರಿಕೆಟ್ ಅಂಗಳದಲ್ಲಿ ದಿನಕ್ಕೊಂದು ದಾಖಲೆಗಳು ನಿರ್ಮಾಣವಾಗುತ್ತವೆ. ಬುಧವಾರ ನ್ಯೂಜಿಲೆಂಡ್ ವನಿತೆಯರು ಸಹ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ಜಯ ಸಾಧಿಸಿದ ನ್ಯೂಜಿಲೆಂಡ್ ವನಿತೆಯರು ಅಬ್ಬರಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ದಾಖಲೆ ಅಳಿಸಿ ಹಾಕಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ್ತಿ ತಾಜ್ಮಿನ್ ಬ್ರಿಟ್ಸ್ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ನಾಯಕಿ ಲಾರಾ ವೊಲ್ವಾರ್ಡ್ (69), ಆನೆಕೆ ಬಾಷ್ ಅಮೋಘ ಬ್ಯಾಟಿಂಗ್‌ ನಡೆಸಿ ಶತಕದ ಜೊತೆಯಾಟವನ್ನು ನಡೆಸಿ ತಂಡಕ್ಕೆ ಆಧಾರವಾದರು. ಆನೆಕೆ ಬಾಷ್ 12 ಬೌಂಡರಿ ಸಹಾಯದಿಂದ 91 ರನ್ ಬಾರಿಸಿ ಔಟ್ ಆದರು. ಸುನೆ ಲೂಸ್ 40, ಕ್ಲೋಯ್ ಟ್ರಯಾನ್ 52 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 346 ರನ್‌ ಕಲೆ ಹಾಕಿತು.

New Zealand

347 ರನ್‌ಗಳ ದಾಖಲೆಯ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ್ತಿ ಸೂಜಿ ಬೇಟ್ಸ್‌ (8) ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲಿಮ್ಮರ್, ಅಮೆಲಿಯಾ ಕೆರ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾಟಗಳು ಬಾರದೆ ತಂಡ ಸಂಕಷ್ಟಕ್ಕೆ ಸಿಲುಕಿತು. 130 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಮೆಲಿಯಾ ಕೆರ್ ಮತ್ತು ಇಸಾಬೆಲ್ಲಾ ಗೇಜ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು.

ಅಮೆಲಿಯಾ ಕೆರ್ ಶತಕ

ಆರನೇ ವಿಕೆಟ್‌ಗೆ ಅಮೆಲಿಯಾ ಕೆರ್ ಮತ್ತು ಇಸಾಬೆಲ್ಲಾ ಗೇಜ್ ಜೋಡಿ 82 ಎಸೆತಗಳಲ್ಲಿ 120 ರನ್‌ ಸೇರಿಸಿತು. ಈ ಹಂತದಲ್ಲಿ ಇಸಾಬೆಲ್ಲಾ ಗೇಜ್ 11 ಬೌಂಡರಿ ನೆರವಿನಿಂದ 68 ರನ್‌ ಬಾರಿಸಿ ಔಟ್ ಆದರು. ನಂತರದ ಬಂದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಒಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ನಾಯಕಿ ಅಮೆಲಿಯಾ ಕೆರ್‌ ಅವರು ಬಾರಿಸಿದ ಅಬ್ಬರದ ಶತಕದ ನೆರವಿನಿಂದ ನ್ಯೂಜಿಲೆಂಡ್‌ ಭರ್ಜರಿ ಜಯ ದಾಖಲಿಸಿತು.

25 ವರ್ಷದ ಅಮೆಲಿಯಾ ಕೆರ್ 139 ಎಸೆತಗಳಲ್ಲಿ 23 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 179 ರನ್‌ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು. ಕಿವೀಸ್‌ ತಂಡ 49.4 ಓವರ್‌ಗಳಲ್ಲಿ 8 ವಿಕೆಟ್‌ಗೆ 350 ರನ್‌ ಸೇರಿಸಿತು. ಈ ಮೂಲಕ ನ್ಯೂಜಿಲೆಂಡ್‌ ತಂಡ ದಾಖಲೆಯ ರನ್‌ ಚೇಸ್ ಮಾಡಿ ಅಬ್ಬರಿಸಿತು. ಇದಕ್ಕೂ ಮೊದಲು ಅತಿ ಹೆಚ್ಚು ರನ್‌ ಚೇಸ್ ಮಾಡಿದ ದಾಖಲೆ ಭಾರತದ ಹೆಸರಿನಲ್ಲಿತ್ತು. ಈಗ ಈ ದಾಖಲೆಗೆ ಕಿವೀಸ್‌ ಹೆಸರು ನಮೂದಿಸಿದೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಚೇಸ್‌ ಮಾಡಿದ ತಂಡಗಳ ವಿವರ

ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ 347 ರನ್‌, 2026
ಆಸ್ಟ್ರೇಲಿಯಾ ವಿರುದ್ಧ ಭಾರತ 339 ರನ್‌, 2025
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 330 ರನ್‌, 2025
ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 302 ರನ್‌, 2024
ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 288 ರನ್‌, 2012

Story first published: Wednesday, April 1, 2026, 18:00 [IST]
Other articles published on Apr 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+