6 ತಿಂಗಳು ಕ್ರಿಕೆಟ್ ಪಂದ್ಯಗಳ ಭರಾಟೆ: 3 ಹೊಸ ಲೀಗ್‌ಗಳು, ಭಾರತದ ಮುಂದಿನ ಸರಣಿಗಳ ವಿವರ

ಮುಂದಿನ ಆರು ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಸುಗ್ಗಿ. ಹೊಸದಾಗಿ 3 ಲೀಗ್‌ಗಳ ಸೇರ್ಪಡೆಯೊಂದಿದೆ ಪ್ರತಿ ದಿನ ಕನಿಷ್ಠ 2 ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿದೆ. ಟೀಂ ಇಂಡಿಯಾ ಕೂಡ ಸತತವಾಗಿ ಸರಣಿಗಳನ್ನು ಆಡಲಿದ್ದು, ಇನ್ನಾರು ತಿಂಗಳಲ್ಲಿ ನಡೆಯುವ ವಿಶ್ವದ ವಿವಿಧ ಲೀಗ್‌ಗಳು, ಭಾರತದ ಸರಣಿಯ ವಿವರ ಇಲ್ಲಿದೆ.
ಇತ್ತೀಚೆಗಷ್ಟೆ ಟಿ20 ವಿಶ್ವಕಪ್‌ಗೆ ತೆರೆ ಬಿದ್ದಿದೆ, ಒಂದು ತಿಂಗಳ ಕಾಲ ಕ್ರಿಕೆಟ್ ರಸದೌತಣವನ್ನು ಸವಿದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇನ್ನು ಆರು ತಿಂಗಳು ಪ್ರತಿ ದಿನ ಕನಿಷ್ಠ ಎರಡು ಪಂದ್ಯಗಳು ನೋಡಲು ಸಿಗುತ್ತವೆ. ವಿಶ್ವಕಪ್ ಮುಗಿದ ನಂತರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ನಡೆಯುತ್ತಿದೆ. ಭಾರತ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 30 ರವರೆಗೆ 3 ಟಿ20, 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.
ಈಗಾಗಲೇ ಮೂರು ಹೊಸ ಲೀಗ್‌ಗಳು ಆರಂಭವಾಗಲಿದ್ದು, ಐಪಿಎಲ್ ಆರಂಭಕ್ಕೆ ಮುನ್ನ ಹಲವು ಲೀಗ್‌ಗಳು ನಡೆಯಲಿದ್ದು, ಆಸಕ್ತರು ಇವುಗಳನ್ನು ವೀಕ್ಷಿಸಬಹುದಾಗಿದೆ. ಹೊಸದಾಗಿ ಆರಂಭವಾಗುವ ಲೀಗ್‌ಗಳು, ಭಾರತ ತಂಡದ ಮುಂದಿನ ಪಂದ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕಾಗಿದೆ.

ಹೊಸದಾಗಿ 3 ಲೀಗ್‌ಗಳು ಆರಂಭ
ಐಪಿಎಲ್ ಭರ್ಜರಿ ಯಶಸ್ಸಿನ ಬಳಿಕ ಹಲವು ಹೊಸ ಲೀಗ್‌ಗಳು ಶುರುವಾದವು. ಇನ್ನು ಕೆಲವು ತಿಂಗಳಲ್ಲಿ 3 ಹೊಸ ಲೀಗ್‌ಗಳು ಆರಂಭವಾಗಲಿವೆ. ಈ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳೇ ತಂಡಗಳನ್ನು ಹೊಂದಿರುವುದು ವಿಶೇಷ.
ಅಂತಾರಾಷ್ಟ್ರೀಯ ಟಿ20 ಲೀಗ್ ಇದು ಯುಎಇಯಲ್ಲಿ ನಡೆಯಲಿದೆ. 2023ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಈ ಲೀಗ್ ಪಂದ್ಯಗಳು ನಡೆಯಲಿವೆ. ಒಟ್ಟು 34 ಪಂದ್ಯಗಳನ್ನು ಈ ಲೀಗ್ ಒಳಗೊಂಡಿದೆ. 6 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಲಿವೆ.
ಎಸ್‌ಎ20 ಇದು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗುತ್ತಿರುವ ಮತ್ತೊಂದು ಲೀಗ್ ಇಲ್ಲಿಯೂ 6 ತಂಡಗಳು ಇದ್ದು, 34 ಪಂದ್ಯಗಳು ನಡೆಯಲಿವೆ. 2023ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಜ್ವರ ಈಗ ಅಮೆರಿಕ ದೇಶಕ್ಕೂ ಹಬ್ಬಿದೆ. ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಎನ್ನುವ ಹೊಸ ಲೀಗ್ ಆರಂಭವಾಗಲಿದೆ. ಜುಲೈ ತಿಂಗಳಲ್ಲಿ ಪಂದ್ಯಾವಳಿ ನಡೆಯಲಿದೆ.
IND vs NZ : ಸರಣಿಯ ಮೊದಲನೇ ಟಿ20 ಪಂದ್ಯಕ್ಕೆ ಅಡ್ಡಿಯಾದ ಮಳೆ, ಟಾಸ್ ವಿಳಂಬ

ಆರು ತಿಂಗಳಿನಲ್ಲಿ ನಡೆಯಲಿವೆ ಪ್ರಮುಖ ಲೀಗ್‌ಗಳು
ಡಿಸೆಂಬರ್ 6ರಿಂದ ಲಂಕಾ ಪ್ರೀಮಿಯರ್ ಲೀಗ್‌ಗೆ ಚಾಲನೆ ದೊರೆಯಲಿದ್ದು ಡಿಸೆಂಬರ್ 23ಕ್ಕೆ ಕೊನೆಯಾಗಲಿದೆ, ಒಟ್ಟು 24 ಪಂದ್ಯಗಳು ಈ ಲೀಗ್‌ನಲ್ಲಿ ಆಡಲಿವೆ. ಅದಾದ ನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ ಡಿಸೆಂಬರ್ 13ರಿಂದ ಆರಂಭವಾಗಲಿದೆ. ಫೆಬ್ರವರಿ 4ರಂದು ಈ ಲೀಗ್‌ಗೆ ತೆರೆ ಬೀಳಲಿದ್ದು, ಒಟ್ಟು 61 ಪಂದ್ಯಗಳು ನಡೆಯಲಿವೆ.
ನ್ಯೂಜಿಲೆಂಡ್‌ನಲ್ಲಿ ನಡೆಯುವ ಸೂಪರ್ ಸ್ಮ್ಯಾಶ್ ಡಿಸೆಂಬರ್ 23 ರಿಂದ 11 ಫೆಬ್ರವರಿವರೆಗೆ ನಡೆಯಲಿದ್ದು, ಒಟ್ಟು 32 ಪಂದ್ಯಗಳನ್ನು ಆಡಲಾಗುತ್ತದೆ. ಪಾಕಿಸ್ತಾನ ಸೂಪರ್ ಲೀಗ್ ಫೆಬ್ರವರಿ ಮಾರ್ಚ್‌ನಲ್ಲಿ ನಡೆಯಲಿದ್ದು, 34 ಪಂದ್ಯಗಳನ್ನು ನೋಡಬಹುದು.
ಇವುಗಳಷ್ಟೇ ಅಲ್ಲದೆ ಜನವರಿ ಫೆಬ್ರವರಿ ತಿಂಗಳಿನಲ್ಲಿ, ಯುಎಇ ಅಂತಾರಾಷ್ಟ್ರೀಯ ಟಿ20 ಲೀಗ್ (34 ಪಂದ್ಯ), ದಕ್ಷಿಣ ಆಫ್ರಿಕಾದ ಎಸ್‌ಎ20 (33 ಪಂದ್ಯ), ಬಾಂಗ್ಲಾ ಪ್ರೀಮಿಯರ್ ಲೀಗ್ (46 ಪಂದ್ಯ) ನಡೆಯಲಿವೆ. ಮುಂದಿನ 180 ದಿನಗಳಲ್ಲಿ ಒಟ್ಟು 338 ಟಿ20 ಪಂದ್ಯಗಳು ನಡೆಯಲಿವೆ. ಇವೆಲ್ಲ ಮುಗಿದ ನಂತರ ಮಾರ್ಚ್ ಅಂತ್ಯಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ.

ಟೀಂ ಇಂಡಿಯಾದ ಮುಂದಿನ ಕ್ರಿಕೆಟ್ ವೇಳಾಪಟ್ಟಿ
ಕಳೆದ ಎರಡು ವರ್ಷಗಳಲ್ಲಿ ಭಾರತ ಕೇವಲ 24 ಏಕದಿನ ಪಂದ್ಯಗಳನ್ನಾಡಿದೆ. ಆದರೆ, 2023ರ ಏಕದಿನ ವಿಶ್ವಕಪ್‌ಗೆ ಮುನ್ನ ಒಂದೇ ವರ್ಷದಲ್ಲಿ ದಾಖಲೆಯ 25 ಏಕದಿನ ಪಂದ್ಯಗಳನ್ನಾಡಲಿದೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್ ಮತ್ತು 3 ಏಕದಿನ ಪಂದ್ಯ ಆಡಲಿದೆ. ಜನವರಿಯಲ್ಲಿ ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. 2023ರ ಜನವರಿ ಫೆಬ್ರವರಿ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಯೋಜಿಸಿದೆ.
ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಜುಲೈ ಆಗಸ್ಟ್‌ನಲ್ಲಿ 3 ಟೆಸ್ಟ್, 3 ಏಕದಿನ, 3 ಟಿ20 ಪಂದ್ಯಗಳನ್ನು ಆಡಲಿದೆ.ಸೆಪ್ಟೆಂಬರ್ 2023ರಲ್ಲಿ ಏಷ್ಯಾಕಪ್ ನಡೆಯಲಿದ್ದು, ನಂತರ ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಭಾರತ ಆತಿಥ್ಯ ವಹಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications