LSG vs GT IPL 2025: ತವರಿನಲ್ಲಿ ಅಬ್ಬರಿಸಿದ ಲಕ್ನೋ ಮೂರನೇ ಸ್ಥಾನಕ್ಕೆ ಬಡ್ತಿ, ನಿಕೋಲಸ್‌ಗೆ ಆರೆಂಜ್ ಕ್ಯಾಪ್
ಭರವಸೆಯ ಆಟಗಾರರಾದ ಐಡೆನ್ ಮಾರ್ಕ್ರಾಮ್ ಹಾಗೂ ನಿಕೋಲಸ್ ಪೂರನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 18ನೇ ಆವೃತ್ತಿಯ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್‌ಗಳನ್ನು ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಲ್‌ಎಸ್‌ಜಿ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ ಆರು ವಿಕೆಟ್ ಜಯ ಸಾಧಿಸಿತು. ಈ ಮೂಲಕ ಎಲ್‌ಎಸ್‌ಜಿ ಆಡಿದ 6 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿದ್ದು, 8 ಅಂಕಗಳನ್ನು ಕಲೆ ಹಾಕಿದ್ದು, ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ಜಿಟಿ ಸಹ ಆಡಿದ 6 ಪಂದ್ಯಗಳಲ್ಲಿ 4 ಜಯ, 2 ಸೋಲು ಕಂಡಿದ್ದು 8 ಅಂಕ ಸೇರಿಸಿದೆ.

ಏಡೇನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 65 ರನ್ ಸೇರಿಸಿತು. ರಿಷಭ್ ಪಂತ್ ಆರಂಭಿಕರಾಗಿ ಕಾಣಿಸಿಕೊಂಡರು ಬಿಗ್ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಇವರ ಆಟ 21 ರನ್‌ಗಳಿಗೆ ಪೂರ್ಣಗೊಂಡಿತು. ಎರಡನೇ ವಿಕೆಟ್‌ಗೆ ಏಡೇನ್ ಜತೆಗೂಡಿದ ನಿಕೋಲಸ್ ಪೂರನ್ ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿ 29 ಎಸೆತಗಳಲ್ಲಿ 58 ರನ್ ಸೇರಿಸಿತು. ಮಾರ್ಕ್ರಮ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 58 ರನ್ ಸಿಡಿಸಿದರು. ಆಯುಷ್ ಬದೋನಿ ಅಜೇಯ 28 ರನ್ ಸೇರಿಸಿತು.
ನಿಕೋಲಸ್‌ಗೆ ಆರೆಂಜ್ ಕ್ಯಾಪ್
ನಿಕೋಲಸ್ ಪೂರನ್ ತಮ್ಮ ಹಾಟ್ ಫಾರ್ಮ್ ಮುಂದುವರೆಸಿದ್ದಾರೆ. ತಮ್ಮ ಅಬ್ಬರದ ಆಟವನ್ನು ಮನೆಯ ಅಂಗಳದಲ್ಲಿ ಮುಂದುವರೆಸಿದರು. ಇವರು ತಮ್ಮ ನೈಜ್ಯ ಆಟವನ್ನು ಮುಂದುವರೆಸಿ, 1 ಬೌಂಡರಿ, 7 ಸಿಕ್ಸರ್ ನೆರವಿನಿಂದ, 61 ರನ್ ಸಿಡಿಸಿದರು. ಈ ಮೂಲಕ ಮತ್ತೆ ಆರೆಂಜ್ ಕ್ಯಾಪ್ ತಮ್ಮ ಬಳಿ ಇಟ್ಟುಕೊಂಡರು.
ಶತಕದ ಜೊತೆಯಾಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಶುಭಮನ್ ಗಿಲ್ ಹಾಗೂ ಬಿ ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನ ನೀಡಿತು. ಈ ಜೋಡಿ 73 ಎಸೆತಗಳಲ್ಲಿ 120 ರನ್‌ಗಳ ಕಾಣಿಕೆ ನೀಡಿತು.

ಸಾಯಿ ಸುದರ್ಶನ್ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿ ಔಟ್ ಆದರು. ಶುಭಮನ್ ಗಿಲ್ 38 ಎಸೆತಗಳಲ್ಲಿ 60 ರನ್ ಸೇರಿಸಿ ಪೆವಿಲಿಯನ್ ಸೇರಿದರು. ಉಳಿದಂತೆ ಜೋಸ್ ಬಟ್ಲರ್ (16), ಶೆರ್ಫೇನ್ ರುದರ್ಫೋರ್ಡ್ (22), ಶಾರುಖ್ ಖಾನ್ (11) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫರಾದರು. ಗುಜರಾತ್ ತಂಡದ ಆರಂಭಿಕರನ್ನು ಬಿಟ್ಟರೇ ಉಳಿದಂತೆ ಜೊತೆಯಾಟಗಳು ಬಾರಲಿಲ್ಲ. ಲಕ್ನೋ ಪರ ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications