Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Nicholas Pooran: 29 ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ LSG ಪ್ಲೇಯರ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮತ್ತೊಬ್ಬ ಪ್ಲೇಯರ್‌ ಸುದ್ದಿ ಈಗ ಹೊರ ಬಿದ್ದಿದೆ. ಸ್ಟಾರ್ ಆಟಗಾರರು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಈಗ ವೆಸ್ಟ್‌ ಇಂಡೀಸ್‌ ತಂಡದ ಭರವಸೆಯ ಆಟಗಾರ ನಿಕೋಲಸ್‌ ಪೂರನ್‌ ತಮ್ಮ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ. ನಿಕೋಲಸ್‌ ಮಂಗಳವಾರ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಇವರ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ತರಿಸಿದೆ. ಅದಕ್ಕೆ ಕಾರಣ ನಿಕೋಲಸ್ ಪೂರನ್ ವಯಸ್ಸು. ನಿಕೋಲಸ್‌ ಅವರಿಗೆ ಇನ್ನು 29 ವರ್ಷ.

ನಿಕೋಲಸ್‌ ಪೂರನ್‌ ತಮ್ಮ 29ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಪೂರನ್‌ ಬಹಳ ಚರ್ಚೆ ನಡೆಸಿದ ಬಳಿಕವೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ತುಂಬ ಯೋಚಿಸಿ, ಭಾರವಾದ ಮನಸ್ಸಿನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೂರನ್‌ ತಿಳಿಸಿದ್ದಾರೆ.

Nicholas Pooran Announces Shock Retirement from International Cricket at 29

ನಿಕೋಲಸ್‌ ಪೂರನ್‌ ತಮ್ಮ ವಿದಾಯವನ್ನು ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ಬರೆದಿರುವ ಅವರು, ಕ್ರಿಕೆಟ್‌ ಆಟ ನನಗೆ ಬಹಳಷ್ಟು ಸಂತೋಷವನ್ನು ನೀಡಿದೆ. ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ನೀಡಿದೆ. ದೇಶದ ಜೆರ್ಸಿ ತೊಟ್ಟು, ರಾಷ್ಟ್ರಗೀತೆಗಾಗಿ ನಿಂತು, ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ನನ್ನ ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇನೆ. ಈ ಸಂತೋಷವನ್ನು ನಾನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ಗೌರವದ ಸಂಗತಿ ಎಂದು ಪೂರನ್ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?

ವಿದಾಯ ಪತ್ರದಲ್ಲಿ ಪೂರನ್‌ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಅಚಲ ಪ್ರೀತಿ ಹಾಗೂ ವಿಶ್ವಾಸಕ್ಕೆ ಧನ್ಯವಾದ. ಕಷ್ಟದ ಕ್ಷಣದಲ್ಲಿ ಬೆಂಬಲಿಸಿದ್ದೀರಿ ಎಂದು ತಿಳಿಸಿದ್ದಾರೆ. ಇನ್ನು ನನ್ನ ಈ ಪಯಣದಲ್ಲಿ ನನ್ನೊಂದಿಗೆ ನಡೆದಿದ್ದಕ್ಕಾಗಿ ಕುಟುಂಬ, ಸ್ನೇಹಿತರು ತಂಡದ ಆಟಗಾರರಿಗೆ ಧನ್ಯವಾದಗಳು. ನನ್ನ ಕ್ರಿಕೆಟ್‌ ವೃತ್ತಿ ಬದುಕು ಮುಗಿದಿದ್ದರೂ ಸಹ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮೇಲಿನ ತಮ್ಮ ಪ್ರೀತಿ ಕಡಿಮೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ನಿಕೋಲಸ್ ಸಾಧನೆ

ನಿಕೋಲಸ್ ಪೂರನ್ ಅವರು ಪಾಕಿಸ್ತಾನ ವಿರುದ್ಧ 2016ರಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರು ದೇಶದ ಪರ 106 ಟಿ20 ಪಂದ್ಯಗಳನ್ನು ಆಡಿದ್ದು, 26ರ ಸರಾಸರಿಯಲ್ಲಿ 2275 ರನ್‌ ಸಿಡಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸಹ ಸೇರಿವೆ. ಪೂರನ್‌ 61 ಏಕದಿನ ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 1983 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ 11 ಅರ್ಧಶತಕಗಳು ಸೇರಿವೆ.

ಐಪಿಎಲ್‌ನಲ್ಲಿ ಕಮಾಲ್‌

ಪ್ರಸಕ್ತ ಐಪಿಎಲ್‌ನಲ್ಲಿ ನಿಕೋಲಸ್ ಪೂರನ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದ್ದರು. ಇವರು 2025ರ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ 524 ರನ್‌ ಸಿಡಿಸಿದ್ದಾರೆ. ಈ ವೇಳೆ 5 ಅರ್ಧಶತಕಗಳು ಸೇರಿವೆ. ಇವರು 45 ಬೌಂಡರಿ, 40 ಸಿಕ್ಸರ್‌ ಸಿಡಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಪೂರನ್ ಒಟ್ಟಾರೆ ಐಪಿಎಲ್‌ ವೃತ್ತಿ ಜೀವನದಲ್ಲಿ 90 ಪಂದ್ಯಗಳನ್ನು ಆಡಿದ್ದು, 34ರ ಸರಾಸರಿಯಲ್ಲಿ 2293 ರನ್‌ ಬಾರಿಸಿದ್ದಾರೆ. ಈ ವೇಳೆ 14 ಅರ್ಧಶತಕಗಳು ಸೇರಿವೆ.

Story first published: Tuesday, June 10, 2025, 8:45 [IST]
Other articles published on Jun 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+