Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Nicholas Pooran: ಟಿ20 ಕ್ರಿಕೆಟ್‌ನಲ್ಲಿ ಪೂರನ್ ವಿಶ್ವ ದಾಖಲೆ; ರಿಜ್ವಾನ್ ರೆಕಾರ್ಡ್‌ ಬ್ರೇಕ್

ವಿಶ್ವ ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ವಿಕೆಟ್‌ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ ಸಂಚಲನ ಮೂಡಿಸಿದ್ದಾರೆ. 2024ರ ಕ್ಯಾಲೆಂಡರ್ ವರ್ಷದಲ್ಲಿ ಪೂರನ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ಆಟಗಾರರ ದಾಖಲೆಗಳನ್ನು ಮುರಿದ್ದಾರೆ. ಪೂರನ್ ಅವರು ಇತ್ತೀಚೆಗೆ ತಮ್ಮದೇ ದೇಶದ ದಿಗ್ಗಜ ಬ್ಯಾಟರ್ ಕ್ರೀಸ್ ಗೇಲ್ ಅವರನ್ನು ಹಿಂದಿಕ್ಕಿ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದಾರೆ.

ಇದೀಗ ಪೂರನ್ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಶನಿವಾರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2024ರ ಬಾರ್ಬಡೋಸ್ ರಾಯಲ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಪೂರನ್ ಈ ಸಾಧನೆಯ ಶಿಖರವನ್ನೇರಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್‌ ಪರ ಆಡುತ್ತಿರುವ ಅವರು ಟಿ20 ಕ್ರಿಕೆಟ್‌ನ ಯಶ್ವಿಸಿ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

Nicholas Pooran breaks Mohammed Rizwan record in T20 cricket

ಏನಿದು ಪೂರನ್ ದಾಖಲೆ?

ಟಿ20 ಕ್ರಿಕೆಟ್‌ನಲ್ಲಿ ನಿಕೋಲಸ್ ಪೂರನ್ ಅವರು ಪಾಕಿಸ್ತಾನದ ವಿಕೆಟ್‌ಕೀಪರ್- ಬ್ಯಾಟರ್ ಮೊಹಮ್ಮದ್ ರಿಜ್ವಾನ್ ದಾಖಲೆನ್ನು ಮರಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಪೂರನ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಪೂರನ್ 15 ಎಸೆತಗಳಲ್ಲಿ 27 ರನ್‌ಗಳ ಇನ್ನಿಂಗ್ಸ್ ಆಡಿದ್ದು, 2021 ರ ಕ್ಯಾಲೆಂಡರ್ ವರ್ಷದ ಟಿ20 ಕ್ರಿಕೆಟ್‌ನಲ್ಲಿ ರಿಜ್ವಾನ್ ಕಲೆ ಹಾಕಿದ 2036 ಸಾವಿರ ರನ್‌ಗಳನ್ನು ಹಿಂದಿಕ್ಕಿದ್ದಾರೆ. ಈಗ 2024ರ ಕ್ಯಾಲೆಂಡರ್ ವರ್ಷದಲ್ಲಿ ಪೂರನ್ 2059 ಸಾವಿರ ರನ್‌ಗಳನ್ನು ಹೊಂದಿದ್ದಾರೆ.

2021ರಲ್ಲಿ ರಿಜ್ವಾನ್ ಆಡಿದ 45 ಟಿ20 ಇನ್ನಿಂಗ್ಸ್‌ಗಳಲ್ಲಿ 2036 ಸಾವಿರ ರನ್ ಗಳಿಸಿದ್ದು, ಒಂದು ಶತಕ ಮತ್ತು 18 ಅರ್ಧಶತಕಗಳು ಬಾರಿಸಿದ್ದಾರೆ. ಪೂರನ್ 65 ಇನ್ನಿಂಗ್ಸ್‌ಗಳಿಂದ 2059 ಸಾವಿರ ರನ್‌ ಹೊಡೆದಿದ್ದು, 14 ಅರ್ಧಶತಕಗಳನ್ನು ಗಳಿಸಿದ್ದಾರೆ. ಹಲವು ಬಾರಿ ಅವರು 90ಕ್ಕೂ ಹೆಚ್ಚು ರನ್‌ಗಳನ್ನು ಪೇರಿಸಿದ್ದಾರೆ. ಎಲ್ಲರಿಗಿಂತ ಭಿನ್ನವಾಗಿರುವುದು ಪೂರನ್ ಅವರ ಸ್ಫೋಟಕ ಸ್ಟ್ರೈಕ್ ರೇಟ್. ಈ ವರ್ಷ ಅವರು 160.63 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ ರನ್ ಹೊಳೆ ಹರಿಸಿದ್ದಾರೆ. ಅವರು ಟಿ20ಯಲ್ಲಿ 1000 ಸಾವಿರ ರನ್ ದಾಟಿದ ಮೂರನೇ ವರ್ಷ ಇದಾಗಿದೆ. ಇದಕ್ಕೂ ಮೊದಲು 2019 ಮತ್ತು 2023ರಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿಂಡೀಸ್ ಸ್ಪೋಟಕ ಬ್ಯಾಟರ್ ಪೂರನ್ ಸಾಧನೆಯಲ್ಲಿ ಅಂತಾರಾಷ್ಟ್ರೀಯ ಟಿ20, ಫ್ರಾಂಚೈಸ್ ಲೀಗ್ ಮತ್ತು ದೇಶೀಯ ಟಿ20 ಪಂದ್ಯಗಳಲ್ಲಿ ಗಳಿಸಿದ ರನ್‌ಗಳು ಸೇರಿವೆ. ಅವರು ವಿಶ್ವದ ಹಲವು ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಮಿಂಚಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್)ನ ಲಕ್ನೋ ಸೂಪರ್ ಜೈಂಟ್ಸ್, ಎಂಐ ಎಮಿರೇಟ್ಸ್, ಎಂಐ ನ್ಯೂಯಾರ್ಕ್, ನಾರ್ದರ್ನ್ ಸೂಪರ್ ಚಾರ್ಜರ್ಸ್, ರಂಗ್‌ಪುರ್ ರೈಡರ್ಸ್ ಸೇರಿದಂತೆ ವಿವಿಧ ಫ್ರಾಂಚೈಸಿ ತಂಡಗಳಲ್ಲಿ ಆಡಿರುವ ಪೂರನ್ ವಿಶ್ವ ದಾಖಲೆಯನ್ನು ಸೃಷ್ಟಿಸಲು ಸಾಧ್ಯವಾಗಿದೆ.

Story first published: Sunday, September 29, 2024, 7:08 [IST]
Other articles published on Sep 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+