ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೊಲಾರ್ಡ್ ವಿದಾಯದ ನಂತರ ನೂತನ ನಾಯಕನನ್ನು ಘೋಷಿಸಿದ ವೆಸ್ಟ್ ಇಂಡೀಸ್

Nicholas Pooran named as West Indies T20 and ODI captain after Kieron Pollards retirement

ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಓರ್ವರಾದ ವೆಸ್ಟ್ ಇಂಡೀಸ್ ತಂಡದ ಕೀರನ್ ಪೊಲಾರ್ಡ್ ಏಪ್ರಿಲ್ 20ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಹಾಗೂ ಟಿ ಟ್ವೆಂಟಿ ಮಾದರಿ ಕ್ರಿಕೆಟ್‌ನಲ್ಲಿ ಮುನ್ನಡೆಸುತ್ತಿದ್ದ ಕೀರನ್ ಪೊಲಾರ್ಡ್ ವಿದಾಯದ ನಂತರ ಆ ಸ್ಥಾನಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ 13 ದಿನಗಳು ಕಳೆದ ಬಳಿಕ ನೂತನ ನಾಯಕನನ್ನು ಘೋಷಿಸಿದೆ. ತಂಡದ ಪ್ರಮುಖ ಆಟಗಾರನಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಕೀರನ್ ಪೊಲಾರ್ಡ್ ಉತ್ತರಾಧಿಕಾರಿ ಎಂದು ಘೋಷಿಸಿದೆ.

ಈ ಮೂಲಕ ನಿಕೋಲಸ್ ಪೂರನ್ ಏಕದಿನ ಹಾಗೂ ಟಿ ಟ್ವೆಂಟಿ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದು, ಪೂರನ್ ಮುಂಬರುವ 2022ರ ಟಿ ಟ್ವೆಂಟಿ ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್‌ಗಳಲ್ಲಿಯೂ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಕೀರನ್ ಪೊಲಾರ್ಡ್ ಅನುಪಸ್ಥಿತಿಯಲ್ಲಿ ಸಿಜಿ ಇನ್ಶುರೆನ್ಸ್ ಟಿ ಟ್ವೆಂಟಿ ಸರಣಿಯಲ್ಲಿ ನಾಯಕನಾಗಿ ತವರಿನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದ ನಿಕೋಲಸ್ ಪೂರನ್ 8 ಏಕದಿನ ಅರ್ಧಶತಕ ಹಾಗೂ ಒಂದು ಶತಕವನ್ನು ಬಾರಿಸಿದ್ದಾರೆ. ಹಾಗೂ 8 ಟಿ ಟ್ವೆಂಟಿ ಅರ್ಧಶತಕಗಳನ್ನೂ ಸಹ ನಿಕೋಲಸ್ ಪೂರನ್ ಬಾರಿಸಿದ್ದಾರೆ.

ಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರ

ಹೀಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊತ್ತಿರುವ ನಿಕೋಲಸ್ ಪೂರನ್ ಮೊದಲ ಬಾರಿಗೆ ಕ್ರಿಕೆಟ್ ಪ್ರೇಮಿಗಳ ಗಮನವನ್ನು ದೊಡ್ಡ ಮಟ್ಟದಲ್ಲಿ ಸೆಳೆದದ್ದು 2014ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ. ಹೌದು, 2014ರ ಅಂಡರ್ 19 ಕ್ರಿಕೆಟ್ ವಿಶ್ವಕಪ್‌ನಲ್ಲಿ 6 ಪಂದ್ಯಗಳನ್ನಾಡಿದ್ದ ನಿಕೋಲಸ್ ಪೂರನ್ ಬರೋಬ್ಬರಿ 303 ರನ್ ಚಚ್ಚಿ ಅಬ್ಬರಿಸಿದ್ದರು.

ಇನ್ನು ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ಬಡ್ತಿ ಪಡೆದಿರುವುದರ ಕುರಿತು ಮಾತನಾಡಿರುವ ನಿಕೋಲಸ್ ಪೂರನ್ "ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ನೇಮಕಗೊಂಡಿರುವುದು ನನಗೆ ನಿಜಕ್ಕೂ ಗೌರವವಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಅದ್ಭುತ ಪರಂಪರೆಯನ್ನು ಸೃಷ್ಟಿಸಿದ ಹಲವಾರು ದಿಗ್ಗಜರ ಹೆಜ್ಜೆಗಳನ್ನು ನಾನು ಅನುಸರಿಸುತ್ತಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಪೂರನ್ "ಇದು ನಿಜಕ್ಕೂ ಪ್ರತಿಷ್ಠಿತ ಪಾತ್ರವಾಗಿದೆ, ವೆಸ್ಟ್ ಇಂಡೀಸ್‌ನಲ್ಲಿ ಪ್ರಮುಖ ಸ್ಥಾನವಾಗಿದೆ, ಏಕೆಂದರೆ ಕ್ರಿಕೆಟ್ ವೆಸ್ಟ್ ಇಂಡೀಸ್ ಜನತೆಯನ್ನು ಒಟ್ಟಿಗೆ ಸೇರಿಸುವ ಶಕ್ತಿಯಾಗಿದೆ. ನಾಯಕನಾಗಿ ಆಯ್ಕೆಯಾಗಿರುವುದು ಇದುವರೆಗಿನ ನನ್ನ ವೃತ್ತಿಜೀವನದ ಪ್ರಮುಖ ಅಂಶವಾಗಿದೆ, ನನ್ನ ಅಭಿಮಾನಿಗಳು ಮತ್ತು ನಿಷ್ಠಾವಂತ ಬೆಂಬಲಿಗರಿಗಾಗಿ ಮೈದಾನದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಹಾಗೂ ತಂಡವನ್ನು ಮುನ್ನಡೆಸಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.

Livingstone ಆಟಕ್ಕೆ ಗಾಬರಿಯಾದ ಗುಜರಾತ್ | Oneindia Kannada

ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷರಾದ ರಿಕ್ಕಿ ಸ್ಕೆರ್ರಿಟ್ ನಿಕೋಲಸ್ ಪೂರನ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವುದರ ಕುರಿತು ಮಾತನಾಡಿದ್ದು, ನಿಕೋಲಸ್ ಪೂರನ್ ನಿಜಕ್ಕೂ ನಮ್ಮ ತಂಡಕ್ಕೆ ಸಿಕ್ಕ ಉಡುಗೊರೆ ಹಾಗೂ ತಂಡವನ್ನು ಸೀಮಿತ ಓವರ್ ಪಂದ್ಯಗಳಲ್ಲಿ ಮುನ್ನಡೆಸಲು ಸರಿಯಾದ ವ್ಯಕ್ತಿ ಎಂದಿದ್ದಾರೆ. ಹಾಗೂ ನಿಕೋಲಸ್ ಪೂರನ್ ನಾಯಕನಾಗಿ ಯಶಸ್ಸು ಸಾಧಿಸಲಿದ್ದಾರ ಎಂಬ ನಂಬಿಕೆಯಿದ್ದು, ಎಲ್ಲರೂ ನಿಕೋಲಸ್ ಪೂರನ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಡು ನಿಕೋಲಸ್ ಪೂರನ್ ನಾಯಕನಾಗಿ ಆಯ್ಕೆಯಾದದ್ದಕ್ಕೆ ಶುಭಾಶಯ ತಿಳಿಸಿದ್ದಾರೆ.

Story first published: Wednesday, May 4, 2022, 10:14 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X