ಚೆಂಡು ವಿರೂಪಗೊಳಿಸಿದ ವಿಂಡೀಸ್‌ನ ನಿಕೋಲಸ್ ಪೂರನ್‌ಗೆ ಅಮಾನತು ಶಿಕ್ಷೆ!

ಲಕ್ನೋ, ನವೆಂಬರ್ 13: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತು ಗೊಳಿಸಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಪೂರನ್ ಚೆಂಡು ವಿರೂಪಗೊಳಿಸಿದ್ದು ಕಂಡುಬಂದಿತ್ತು. ಇದಕ್ಕಾಗಿ ಪೂರನ್ ಸಾರ್ವಜನಿಕ ಕ್ಷಮೆಯೂ ಯಾಚಿಸಿದ್ದರು.
ನಿಕೋಲಸ್ ಪೂರನ್ ಇನ್ನು ಮುಂದಿನ ನಾಲ್ಕು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವಂತಿಲ್ಲ. ಅಲ್ಲದೆ ಪೂರನ್‌ಗೆ 5 ನಕಾರಾತ್ಮಕ ಅಂಕಗಳನ್ನೂ ನೀಡಲಾಗಿದೆ. ಲಕ್ನೋದಲ್ಲಿ ಸೋಮವಾರ (ನವೆಂಬರ್ 11) ನಡೆದಿದ್ದ ಪಂದ್ಯದಲ್ಲಿ ಪೂರನ್ ಚೆಂಡು ವಿರೂಪ ಗೊಳಿಸಿದ ಆರೋಪ ಹೊಂದಿದ್ದಾರೆ.
'ಐಸಿಸಿ ಆಟಗಾರರ ಮತ್ತು ಆಟಗಾರರ ಬೆಂಬಲ ಸಿಬ್ಬಂದಿ ವರ್ತನೆ ನಿಯಮ ಹಂತ 3ರನ್ನು ಮೀರಿರುವುದರಿಂದ ನಿಕೋಲಸ್ ಪೂರನ್‌ಗೆ 4 ಅಮಾನತು ಪಾಯಿಂಟ್‌ಗಳನ್ನು ನೀಡಲಾಗಿದೆ,' ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
'ಪೂರನ್ ಐಸಿಸಿ ನಿಯಮ ಉಲ್ಲಂಘನೆ ಆರ್ಟಿಕಲ್ 2.14 ಅನ್ನು ಮೀರಿದ್ದಾರೆ. ಈ ಆರ್ಟಿಕಲ್ 'ಚೆಂಡಿನ ಸ್ಥಿತಿ ಬದಲಾಯಿಸುವ' ನಿಯಮಕ್ಕೆ ಸಂಬಂಧಿಸಿದೆ. ನಮಗೆ ದೊರೆತ ವಿಡಿಯೋ ಸಾಕ್ಷ್ಯದಲ್ಲಿ ಪೂರನ್, ಚೆಂಡಿನ ಹೊರಮೈಯನ್ನು ಸ್ಕ್ರಾಚ್ ಮಾಡಿದ್ದು ಕಂಡುಬಂದಿತ್ತು,' ಎಂದು ಐಸಿಸಿ ಹೇಳಿಕೆಯಲ್ಲಿ ವಿವರಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications