ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಕೆಎಲ್ ರಾಹುಲ್ ಗೆ ಅವಕಾಶ?

ಕೊಲಂಬೋ, ಮಾರ್ಚ್ 12: ನಿದಹಾಸ್ ಮೂರು ರಾಷ್ಟ್ರಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿದ ಭಾರತ ಪಡೆ ಈಗ ಅತಿಥೇಯ ಶ್ರೀಲಂಕಾದ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ ಬೌಲರ್ ಗಳು, ಬಾಂಗ್ಲಾ ವಿರುದ್ಧ ಮಿಂಚಿದ್ದರು. ಹೀಗಾಗಿ, ಅದೇ ಪಡೆಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು ಬೇಕಾದ 139ರನ್ ಚೇಸ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಅರ್ಧ ಶತಕ ನೆರವಿಗೆ ಬಂದಿತು. 18.4 ಓವರ್ ಗಳಲ್ಲಿ 140/4 ಸ್ಕೋರ್ ಮಾಡಿ ಸುಲಭ ಜಯ ದಾಖಲಿಸಿತು. ನಾಯಕ ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ 17ರನ್ ಮಾತ್ರ ಗಳಿಸಿದರು. ರೋಹಿತ್ ಶರ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವ ನಿರೀಕ್ಷೆಯಿದೆ.
ಸುರೇಶ್ ರೈನಾ ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್, ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರೈದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಅವರು ತಮ್ಮ ಬ್ಯಾಟಿಂಗ್ ನಲ್ಲಿ ತಕ್ಕಮಟ್ಟಿಗೆ ಸ್ಥಿರತೆ ಕಾಯ್ದುಕೊಂಡಿದ್ದಾರೆ..
ಮುಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಬ್ ಪಂತ್ 7 ರನ್ ಮಾತ್ರ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಭಾರಿ ನಿರೀಕ್ಷೆ ಹುಟ್ಟಿಸಿದ ಪಂತ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಮಾರ್ಚ್ 12ರ ಪಂದ್ಯದಲ್ಲಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ.
ಶ್ರೀಲಂಕಾ ವಿರುದ್ಧದ 2ನೇ ಟಿ20ಗೆ ಸಂಭಾವ್ಯ ಭಾರತ ತಂಡ
ಈ ಪಂದ್ಯಕೆ ಸಂಭಾವ್ಯ ಆಡುವ ಹನ್ನೊಂದು:
1. ರೋಹಿತ್ ಶರ್ಮ
2. ಶಿಖರ್ ಧವನ್.
3. ಕೆಎಲ್ ರಾಹುಲ್
4. ಮನೀಶ್ ಪಾಂಡೆ
5. ಸುರೇಶ್ ರೈನಾ
6. ದಿನೇಶ್ ಕಾರ್ತಿಕ್
7. ವಾಷಿಂಗ್ಟನ್ ಸುಂದರ್
8. ವಿಜಯ್ ಶಂಕರ್
9. ಯಜುವೇಂದ್ರ ಚಾಹಲ್
10. ಶಾರ್ದೂಲ್ ಠಾಕೂರ್
11 ಜಯದೇವ್ ಉನದ್ಕತ್
ಸರಣಿಗೆ ಭಾರತ ತಂಡ:
ರೋಹಿತ್ ಶರ್ಮ (ನಾಯಕ), ಶಿಖರ್ ಧವನ್ (ಉಪನಾಯಕ), ಕೆ.ಎಲ್.ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್),ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications