Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

0, 81, 0, 87, 0: ಮೂರು ಬಾರಿ ಗೋಲ್ಡನ್ ಡಕ್ ಔಟ್ ಆದ ನಿತಿಶ್ ರಾಣಾ

Nitish rana

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಕೆಆರ್ ಓಪನರ್ ನಿತಿಶ್ ರಾಣಾ ಟೂರ್ನಿಯಲ್ಲಿ ಮೂರನೇ ಬಾರಿಗೆ ಗೋಲ್ಡನ್ ಡಕ್‌ ಔಟ್ ಆಗಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಇಳಿದ ಕೊಲ್ಕತ್ತಾ ನೈಟ್‌ ರೈಡರ್ಸ್ ಪರ ಶುಭ್ಮನ್ ಗಿಲ್ ಮತ್ತು ನಿತಿಶ್ ರಾಣಾ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ಕೆಕೆಆರ್‌ಗೆ ಮೊದಲ ಓವರ್‌ನಲ್ಲೇ ಆಘಾತ ಕಾದಿತ್ತು. ಜೊಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ತನ್ನ ಮೊದಲ ಎಸೆತದಲ್ಲೇ ಎಡಗೈ ಬ್ಯಾಟ್ಸ್‌ಮನ್ ನಿತಿಶ್ ರಾಣಾ ಶೂನ್ಯಕ್ಕೆ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡ್ರು.

ಐಪಿಎಲ್ 2020ರಲ್ಲಿ ಎರಡು ಅಮೋಘ ಅರ್ಧಶತಕ ದಾಖಲಿಸಿರುವ ನಿತಿಶ್ ರಾಣಾ, ಟೂರ್ನಿಯಲ್ಲಿ ತಾನು ಎದುರಿಸಿದ ಮೊದಲೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದು ಇದು ಮೂರನೇ ಬಾರಿ. ಇದಕ್ಕೂ ಮೊದಲು ಆರ್‌ಸಿಬಿ, ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ರು. ಆದ್ರೆ ಇದರ ನಡುವೆ ಎರಡು ಅರ್ಧಶತಕವನ್ನು ಕೂಡ ದಾಖಲಿಸಿದ್ದಾರೆ.

ನಿತಿಶ್ ರಾಣಾ ಮೂರು ಗೋಲ್ಡನ್ ಡಕ್:
0(1) vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
81(53) vs ಡೆಲ್ಲಿ ಕ್ಯಾಪಿಟಲ್ಸ್
0(1) vs ಕಿಂಗ್ಸ್‌ ಇಲೆವೆನ್ ಪಂಜಾಬ್
87(61) vs ಚೆನ್ನೈ ಸೂಪರ್ ಕಿಂಗ್ಸ್‌
0(1) vs ರಾಜಸ್ಥಾನ್ ರಾಯಲ್ಸ್‌

ಇನ್ನು ಕೆಕೆಆರ್ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೋಲ್ಡನ್ ಡಕ್‌ ಔಟ್ ಆಗಿದ್ದು, ಸತತ ಎರಡನೇ ಬಾರಿಗೆ ಮೊದಲ ಎಸೆತದಲ್ಲೇ ಔಟಾದ್ರು.

Story first published: Monday, November 2, 2020, 10:00 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+