Boxing Day Test: ಇತಿಹಾಸ ಬರೆದ ಅಫ್ಘಾನಿಸ್ತಾನ ಬ್ಯಾಟರ್ ರಹಮತ್ ಷಾ
ವಿಶ್ವ ಸದ್ಯ ವರ್ಷಾಂತ್ಯದ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ. ಈ ವೇಳೆ ಹಲವು ದೇಶಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ನಡೆಯುತ್ತಿವೆ. ಮೆಲ್ಬೋರ್ನ್ ಅಂಗಳದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಿದರೆ, ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ತಂಡಗಳ ನಡುವೆ ಟೆಸ್ಟ್ ಪಂದ್ಯ ಸಹ ನಡೆಯುತ್ತಿದೆ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಮೂರನೇ ದಿನ, ನಿತೀಶ್ ಕುಮಾರ್ ರೆಡ್ಡಿ ಅವರು 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕ ಸಂಭ್ರಮಿಸಿದರು. ಇನ್ನು ಮತ್ತೊಂದೆಡೆ ಅಫ್ಘಾನಿಸ್ತಾನದ ಬ್ಯಾಟರ್ ಒಬ್ಬ ಅಮೋಘ ಬ್ಯಾಟಿಂಗ್ ನಡೆಸಿ ದ್ವೀಶತಕ ಬಾರಿಸಿದ್ದಾರೆ.
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಅಫ್ಘಾನಿಸ್ತಾನದ ಬೌಲರ್‌ಗಳ ದಂಡಿಸಿದರು. ಈ ಮೂಲಕ ಜಿಂಬಾಬ್ವೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 586 ರನ್ ಗಳಿಸಿ ಆರ್ಭಟಿಸಿತು. ಜಿಂಬಾಬ್ವೆಯ ಈ ಬೃಹತ್ ಸ್ಕೋರ್‌ಗೆ ಉತ್ತರವಾಗಿ ಅಫ್ಘಾನಿಸ್ತಾನ ತಂಡವು ಅತ್ಯಂತ ಕಳಪೆ ಆರಂಭವನ್ನು ಕಂಡಿತು. ಈ ವೇಳೆ ರಹಮತ್ ಷಾ ಅಮೋಘ ಬ್ಯಾಟಿಂಗ್ ನಡೆಸಿ ಇತಿಹಾಸ ನಿರ್ಮಿಸಿದರು.

ಸೇದಿಕುಲ್ಲಾ ಅಟಲ್, ಅಬ್ದುಲ್ ಮಲಿಕ್ ಅಫ್ಘಾನಿಸ್ತಾನ ತಂಡದ ಪರ ಸೊಸಗಾದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಈ ಜೋಡಿ ಮೊದಲ ವಿಕೆಟ್ ಗೆ 3 ರನ್ ಸೇರಿಸಿತು. ಅಬ್ದುಲ್ ಮಲಿಕ್ 23 ರನ್ ಸಿಡಿಸಿದರು. ತಂಡದ ಮೊತ್ತ 64 ಆಗಿದ್ದಾಗ ಅಫ್ಘಾನಿಸ್ತಾನ ಬ್ಯಾಟರ್ ರಹಮತ್ ಷಾ ಹಾಗೂ ಹಷ್ಮತುಲ್ಲಾ ಶಾಹಿದ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊತೆಯಾಟವನ್ನು ಬೇರ್ಪಡಿಸುವಲ್ಲಿ ಜಿಂಬಾಬ್ವೆ ತಂಡ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಆತಿಥೇಯ ತಂಡದ ಬ್ಯಾಟಿಂಗ್‌ಗೆ ಉತ್ತರವಾಗಿ ಸೊಗಸಾದ ಬ್ಯಾಟಿಂಗ್ ನಡೆಸಿದ ಜೋಡಿ ಅಬ್ಬರಿಸಿತು. ಈ ಜೋಡಿ 618 ಎಸೆತಗಳನ್ನು ಎದುರಿಸಿ ಅಜೇಯ 361 ರನ್‌ಗಳನ್ನು ಕಲೆ ಹಾಕಿದೆ. ನಾಲ್ಕನೇ ದಿನಕ್ಕೂ ಈ ಇಬ್ಬರೂ ಬ್ಯಾಟರ್‌ಗಳು ಕ್ರೀಸ್ ಕಾಯ್ದುಕೊಂಡಿದ್ದಾರೆ.
ರಹಮತ್ ಶಾ ದ್ವೀಶತಕ
ಅಫ್ಘಾನಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್ ರಹಮತ್ ಶಾ ನಿಜಕ್ಕೂ ಮೂರನೇ ಅಬ್ಬರಿಸಿದರು. ಎರಡನೇ ದಿನದ ಅಂತ್ಯಕ್ಕೆ 49 ರನ್‌ಗಳಿ ಅಜೇಯರಾಗುಳಿದಿದ್ದ ರಹಮತ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಮೂರನೇ ದಿನ ವಿಕೆಟ್ ಬೀಳದಂತೆ ಕಾಯ್ದುಕೊಂಡು ಆಡಿದ ಹಷ್ಮತುಲ್ಲಾ ಶಾಹಿದ್ ಹಾಗೂ ರಹಮತ್ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿತು. ರಹಮತ್ ಶಾ 416 ಎಸೆತಗಳಲ್ಲಿ 23 ಬೌಂಡರಿ, 3 ಸಿಕ್ಸರ್ ಸೀಡಿಸಿ ಅಜೇಯ 231 ರನ್ ಸಿಡಿಸಿ ತಂಡಕ್ಕೆ ನೆರವಾದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಹಷ್ಮತುಲ್ಲಾ ಶಾಹಿದ್, ರಹಮತ್‌ಗೆ ಉತ್ತಮ ಸಾಥ್ ನೀಡಿ ಶತಕ ಬಾರಿಸಿದರು. ಇವರು 276 ಎಸೆತಗಳಲ್ಲಿ 16 ಬೌಂಡರಿ ನೆರವಿನಿಂದ ಅಜೇಯ 141 ರನ್ ಸಿಡಿಸಿ ಅಬ್ಬರಿಸಿದರು.
ದೊಡ್ಡ ದಾಖಲೆ
ರಹಮತ್ ಶಾ 200 ರನ್ ಗಡಿ ಮುಟ್ಟಿದ ಕೂಡಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಅಫ್ಘಾನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಏಕೈಕ ದ್ವಿಶತಕ ಬಾರಿಸಿದ ದಾಖಲೆ ನಾಯಕ ಹಶ್ಮತುಲ್ಲಾ ಶಾಹಿದಿ ಹೆಸರಿನಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications