For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರಿಗೆ 5 ಸ್ಟಾರ್ ಹೋಟೆಲ್ ಇಲ್ಲ

No 5-star hotel for Pakistan in England; players staying in a 3-star hotel
Jofra Archer ,ಬಾಲಿಗೆ ಉಗುಳು ಹಚ್ಚಿದ್ದಕ್ಕೆ ಆಟದಿಂದ ಹೊರಕ್ಕೆ Eng vs WI 2nd test | Oneindia Kannada

ಲಂಡನ್, ಜುಲೈ 16: ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೊರಟಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ ತಲುಪಿತ್ತು. ಆದರೆ ಪಾಕ್ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ತಂಗಲು 5 ಹೋಟೆಲ್ ಸಿಕ್ಕಿಲ್ಲ ಎಂಬ ವಿಚಾರ ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಪ್ರವಾಸದ ವೇಳೆ ವೃತ್ತಿಪರ ಕ್ರಿಕೆಟಿಗರು ಐಶಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಾರೆ ಅನ್ನೋದು ಸಾಮಾನ್ಯರ ನಂಬಿಕೆ. ಅದು ನಿಜ ಕೂಡ. ಆದರೆ ಪಾಕಿಸ್ತಾನ ಕ್ರಿಕೆಟಿಗರ ವಿಚಾರದಲ್ಲಿ ಕೊಂಚ ಬದಲಾಗಿದೆ. ಕೊರೊನಾವೈರಸ್ ಕಾರಣ ಇಂಗ್ಲೆಂಡ್‌ನಲ್ಲಿ ಜೈವಿಕ ಸುರಕ್ಷಾ ಪರಿಸರದಲ್ಲಿರಲು ಪಾಕ್ ಆಟಗಾರರಿಗೆ 5 ಸ್ಟಾರ್ ಹೋಟೆಲ್ ಸಿಕ್ಕಿಲ್ಲ, ಹೀಗಾಗಿ ಕ್ರಿಕೆಟಿಗರು 3 ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾರೆ.

ಕ್ರಿಕೆಟ್ ಪಾಕಿಸ್ತಾನದಿಂದ ವರದಿ ಲಭಿಸಿರುವಂತೆ, 14 ದಿನಗಳ ಕಡ್ಡಾಯ ಐಸೊಲೇಶನ್ ಪಾಲಿಸುವುದಕ್ಕಾಗಿ ಪಾಕ್ ಆಟಗಾರರು ವೋರ್ಸೆಸ್ಟರ್‌ನಲ್ಲಿ 3 ಸ್ಟಾರ್ ಹೋಟೆಲ್‌ನಲ್ಲಿ ತಂಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಆಟಗಾರರಿಗೆ ಹೊರಗೆ ಹೋಗಲು ಅವಕಾಶ ಇಲ್ಲದ್ದರಿಂದ ಪ್ರತ್ಯೇಕವಿರುವ ಆಟಗಾರರ ಫ್ಲೋರ್‌ಗಳಿಗೆ ತೆರಳಿ ಆಹಾರ ನೀಡಲಾಗುತ್ತಿದೆ.

ಇಂಗ್ಲೆಂಡ್ vs ಪಾಕಿಸ್ತಾನ ಕ್ರಿಕೆಟ್ ಸರಣಿಗಳು ಆಗಸ್ಟ್ 5ರಿಂದ ಆರಂಭವಾಗಲಿದೆ. ಆಗಸ್ಟ್ 5ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾದರೆ, ಆಗಸ್ಟ್ 28ರಿಂದ ಮೂರು ಪಂದ್ಯಗಳ ಟಿ20ಐ ಸರಣಿ ಶುರುವಾಗಲಿದೆ. ಇತ್ತಂಡಗಳ ಮೊದಲ ಟೆಸ್ಟ್ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Friday, July 17, 2020, 0:01 [IST]
Other articles published on Jul 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+