For Quick Alerts
ALLOW NOTIFICATIONS  
For Daily Alerts
 

ಆಯ್ಕೆ ಸಮಿತಿ ಮಾತೇ ಆಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುರಳಿ ವಿಜಯ್

ನವದೆಹಲಿ, ಅಕ್ಟೋಬರ್ 4: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ತಮ್ಮನ್ನು ಕೈಬಿಟ್ಟ ಬಳಿಕ ಮುಖ್ಯ ಆಯ್ಕೆದಾರರಾಗಲೀ ಅಥವಾ ಬಿಸಿಸಿಐನ ಯಾವುದೇ ವ್ಯಕ್ತಿಯಾಗಲೀ ತಮ್ಮೊಂದಿಗೆ ಮಾತನಾಡಿಲ್ಲ ಎಂದು ಆರಂಭಿಕ ಆಟಗಾರ ಮುರಳಿ ವಿಜಯ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಿಂದ ತಮ್ಮನ್ನು ಕೈಬಿಟ್ಟ ಬಳಿಕ ಆಯ್ಕೆದಾರರು ತಮ್ಮೊಂದಿಗೆ ಮಾತನಾಡಿಲ್ಲ ಎಂದು ಕೆಲವು ದಿನಗಳ ಹಿಂದೆ ಕರ್ನಾಟಕದ ಆಟಗಾರ ಕರುಣ್ ನಾಯರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್, ಕರುಣ್ ನಾಯರ್ ಅವರೊಂದಿಗೆ ಸಮಿತಿಯ ಸದಸ್ಯ ದೇವಾಂಗ್ ಗಾಂಧಿ ಸಂವಹನ ನಡೆಸಿದ್ದರು. ಅವರನ್ನು ಏಕೆ ತಂಡದಿಂದ ಕೈಬಿಡಲಾಗಿತ್ತು ಎಂದು ವಿವರಿಸಲಾಗಿತ್ತು ಎಂಬುದಾಗಿ ಹೇಳಿದ್ದರು.

ಈಗ ಮುರಳಿ ವಿಜಯ್ ಕೂಡ ಕರುಣ್ ನಾಯರ್ ಅವರಂತೆಯೇ ಹೇಳಿಕೆ ನೀಡಿದ್ದು, ತಂಡದಿಂದ ಸ್ಥಾನ ಕಳೆದುಕೊಂಡ ಆಟಗಾರರ ಜತೆ ಆಯ್ಕೆ ಸಮಿತಿ ಸೂಕ್ತವಾಗಿ ಸಂವಹನ ನಡೆಸುತ್ತಿಲ್ಲ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಯಾರೂ ಮಾತನಾಡಿಲ್ಲ

ಯಾರೂ ಮಾತನಾಡಿಲ್ಲ

ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಕೈಬಿಟ್ಟ ಬಳಿಕ ಆಯ್ಕೆ ಸಮಿತಿಯವರಾಗಲೀ ಅಥವಾ ಬೇರೆ ಯಾವುದೇ ವ್ಯಕ್ತಿಯಾಗಲೀ ಇದುವರೆಗೂ ನನ್ನೊಂದಿಗೆ ಮಾತನಾಡಿಲ್ಲ. ಇಂಗ್ಲೆಂಡ್‌ನಲ್ಲಿದ್ದಾಗ ತಂಡದ ಮ್ಯಾನೇಜ್ಮೆಂಟ್‌ನ ಸದಸ್ಯರ ಜತೆ ಸಂಭಾಷಿಸಿದ್ದೆ. ಅದರ ಬಳಿಕ ಯಾರ ಜತೆಯೂ ಮಾತನಾಡಿಲ್ಲ ಎಂದು ವಿಜಯ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ವೈಫಲ್ಯ, ಕೌಂಟಿಯಲ್ಲಿ ಶತಕ: ಫಾರ್ಮ್ ಕಂಡುಕೊಂಡ ಮುರಳಿ ವಿಜಯ್

ಕಾರಣ ವಿವರಿಸಬೇಕು

ಕಾರಣ ವಿವರಿಸಬೇಕು

ಆಟಗಾರನೊಬ್ಬನನ್ನು ಕೈಬಿಟ್ಟ ಬಳಿಕ, ಆತನಿಗೆ ಅದಕ್ಕೆ ಸೂಕ್ತ ಕಾರಣ ವಿವರಿಸಬೇಕು. ಇದರಿಂದ ಆತನಿಗೆ ತಂಡದ ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರಲ್ಲಿ ಯಾವ ಸ್ಥಾನ ಹೊಂದಿದ್ದೇನೆ ಎಂಬುದು ಗೊತ್ತಾಗುತ್ತದೆ. ಆಟಗಾರನಾಗಿ ಒಂದು ಅಥವಾ ಎರಡು ಪಂದ್ಯಕ್ಕಿಂತ ಹೆಚ್ಚಿನ ಅವಕಾಶ ಪಡೆದುಕೊಳ್ಳುತ್ತೀರ ಎನ್ನುವುದು ಗೊತ್ತಾಗುವುದು ಬಹಳ ಮುಖ್ಯ. ಇದರಿಂದ ಉತ್ತಮ ಆಟ ಪ್ರದರ್ಶಿಸಬಹುದು. ಸ್ಥಿರತೆ ಅನುಮಾನಗಳನ್ನು ದೂರ ಇರಿಸುತ್ತದೆ. ಅಂತಿಮವಾಗಿ ಆಟಗಾರ ಉತ್ತಮವಾಗಿ ಆಡಬೇಕು ಮತ್ತು ತಂಡದ ಗೆಲುವಿಗೆ ಕಾಣಿಕೆ ನೀಡಬೇಕು ಎನ್ನುವುದೇ ಮುಖ್ಯವಾಗುತ್ತದೆ ಎಂದಿದ್ದಾರೆ.

ಮುರಳಿ ವಿಜಯ್ ಕ್ರಿಕೆಟ್ ಟೆಸ್ಟ್ ಜೀವನ ಮುಗಿಯಿತೇ?: ಅಭಿಮಾನಿಗಳ ಆಕ್ರೋಶ

ಆಸ್ಟ್ರೇಲಿಯಾ ಸರಣಿ ಗಮನದಲ್ಲಿ

ಆಸ್ಟ್ರೇಲಿಯಾ ಸರಣಿ ಗಮನದಲ್ಲಿ

ಆಸ್ಟ್ರೇಲಿಯಾ ಸರಣಿಯನ್ನು ಗಮನದಲ್ಲಿಟ್ಟುಕೊಂಡು ನನ್ನದೇ ರೀತಿಯಲ್ಲಿ ತಯಾರಿ ನಡೆಸುತ್ತೇನೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. 2014-15ರ ಸರಣಿಯಲ್ಲಿ 500ರ ಸಮೀಪ ರನ್ ಕಲೆಹಾಕಿದ್ದೆ. ಅವಕಾಶಗಳು ಬಂದರೆ ಸಿದ್ಧನಾಗಲು ಬಯಸುತ್ತೇನೆ. ಅಂತಿಮವಾಗಿ ತಂಡಕ್ಕೆ ಮರಳುವ ಪ್ರಯತ್ನದಲ್ಲಿ ನಾವು ಗಳಿಸುವ ರನ್‌ಗಳೇ ಪ್ರಧಾನವಾಗುತ್ತದೆ.

ಕರುಣ್ ನಾಯರ್ ಭಾರತ ತಂಡದಿಂದ ಹೊರಗೆ: ಪ್ರತಿಕ್ರಿಯಿಸಿದ ನಾಯಕ ಕೊಹ್ಲಿ

ಮರಳಿ ಫಾರ್ಮ್‌ಗೆ

ಮರಳಿ ಫಾರ್ಮ್‌ಗೆ

ಮುರಳಿ ವಿಜಯ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಕಾರಣಕ್ಕೆ ಮುರಳಿ ವಿಜಯ್ ಮೂರನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು. ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು ಗಳಿಸಿದ್ದ ಮೊತ್ತ 20, 6, 0, 0.

ಮುರಳಿ ವಿಜಯ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಇಂಗ್ಲೆಂಡ್ ನೆಲದಲ್ಲಿಯೇ ಕೌಂಟಿ ಪಂದ್ಯ ಆಟ ಮುಂದುವರಿಸಿದ್ದ ವಿಜಯ್ ಎಸೆಕ್ಸ್ ತಂಡದ ಆರಂಭಿಕರಾಗಿ ಮಿಂಚಿದ್ದರು. ಅಲ್ಲಿನ ಐದು ಇನ್ನಿಂಗ್ಸ್‌ಗಳಲ್ಲಿ 56, 100, 85, 80 ಮತ್ತು 2 ರನ್ ಹೊಡೆದು ತಮ್ಮಲ್ಲಿ ಆಡುವ ಸಾಮರ್ಥ್ಯ ಕುಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

Story first published: Thursday, October 4, 2018, 20:52 [IST]
Other articles published on Oct 4, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+