ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರುಣ್ ನಾಯರ್ ಭಾರತ ತಂಡದಿಂದ ಹೊರಗೆ: ಪ್ರತಿಕ್ರಿಯಿಸಿದ ನಾಯಕ ಕೊಹ್ಲಿ

Team selection isnt in my hands: Virat Kohli on Karun Nairs exclusion

ರಾಜ್ ಕೋಟ್, ಅಕ್ಟೋಬರ್ 3: ಅಕ್ಟೋಬರ್ 4ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಕನ್ನಡಿಗ ಕರುಣ್ ನಾಯರ್ ಅವರಿಗೆ ಅವಕಾಶ ನೀಡದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ತಂಡದ ಆಯ್ಕೆಗೆ ಸಂಬಂಧಿಸಿ ನಾವೇನೂ ಮಾಡುವಂತಿಲ್ಲ ಎಂದಿದ್ದಾರೆ.

ಕ್ರಿಕೆಟ್: ತಂಡಕ್ಕೆ ಆಯ್ಕೆಯಾದರೂ ಮಯಾಂಕ್‌ಗೆ ಆಡುವ ಅವಕಾಶವಿಲ್ಲಕ್ರಿಕೆಟ್: ತಂಡಕ್ಕೆ ಆಯ್ಕೆಯಾದರೂ ಮಯಾಂಕ್‌ಗೆ ಆಡುವ ಅವಕಾಶವಿಲ್ಲ

ರಾಜ್ ಕೋಟ್ ನಲ್ಲಿ ಆರಂಭಗೊಳ್ಳಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ದಿನ (ಅಕ್ಟೋಬರ್ 3) ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಅವರು ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸದಿದ್ದ ಬಗ್ಗೆ ಪ್ರತಿಕ್ರಿಯಿಸಿದರು.

ಪಂದ್ಯ ಸೋತು ಕಂಗೆಟ್ಟು ಕೊಹ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ ಬಾಂಗ್ಲಾ ಖದೀಮರುಪಂದ್ಯ ಸೋತು ಕಂಗೆಟ್ಟು ಕೊಹ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ ಬಾಂಗ್ಲಾ ಖದೀಮರು

'ಆಯ್ಕೆ ಸಮಿತಿಯ ಮೂವರು ಸೇರಿ ತಂಡವನ್ನು ಆರಿಸುತ್ತಾರೆ. ಆಯ್ಕೆ ಸಮಿತಿ ಮುಖ್ಯಸ್ಥರೂ ನಾಯರ್ ಜೊತೆ ಈ ಬಗ್ಗೆ ಮಾತಾಡಿದ್ದಾಗಿದೆ. ಆಯ್ಕೆ ಸಮಿತಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ಸ್ಥಾನದಲ್ಲಿ ನಾನಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಅಸಲಿಗೆ ತಂಡದ ಆಯ್ಕೆಯೇ ನನ್ನ ಕೈಯಲ್ಲಿ ಇಲ್ಲ' ಎಂದು ಕೊಹ್ಲಿ ಹೇಳಿದರು.

29ರ ಹರೆಯದ ಕೊಹ್ಲಿ ಮುಂದುವರೆದು, 'ಒಂದು ತಂಡವಾಗಿ ನಾವೇನು ಮಾಡಬಹುದೊ ಅದಷ್ಟೇ ನನ್ನಿಂದ ಮಾಡಲು ಸಾಧ್ಯ. ತಂಡದ ಆಯ್ಕೆ ಕುರಿತು ಅವರವರ ಪಾತ್ರಕ್ಕನುಗುಣವಾಗಿ ಕೊಡಬೇಕಾದ ಸ್ಪಷ್ಟನೆ ಕೊಟ್ಟಿದ್ದಾರೆ. ತಂಡದ ಆಯ್ಕೆ ವಿಚಾರ ನನಗೂ ಸಂಬಂಧಿಸಿದೆ ಅಂತ ಎಲ್ಲರೂ ಭಾವಿಸಿರಬಹುದು. ಆದರೆ ಹಾಗಿಲ್ಲ' ಎಂದರು.

Story first published: Wednesday, October 3, 2018, 16:41 [IST]
Other articles published on Oct 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X