ನವದೆಹಲಿ, ಮೇ 03: 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ರೀ ಎಂಟ್ರಿ ಪಡೆಯಲಿವೆ ಎಂಬ ಸುದ್ದಿಯ ಬೆನ್ನಲ್ಲೇ ಮುಂದಿನ ವರ್ಷದಿಂದ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ ತಂಡಗಳು ಆಡುತ್ತಿಲ್ಲ ಎಂಬ ಸತ್ಯ ಹೊರಬಿದ್ದಿದೆ. ಈ ಸುದ್ದಿಯನ್ನು ಗುಜರಾತ್ ತಂಡದ ಮಾಲೀಕ ಕೇಶವ್ ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.
ಗುಜರಾತ್ ಲಯನ್ಸ್ ಮಾಲೀಕ ಕೇಶವ್ ಬನ್ಸಾಲ್ ಅವರು ಕ್ರಿಕ್ ಬಜ್ ಜತೆ ಮಾತನಾಡಿ, ಐಪಿಎಲ್ 2018ರಲ್ಲಿ 8 ತಂಡಗಳನ್ನು ಮಾತ್ರ ಆಡಿಸಲು ಬಿಸಿಸಿಐ ನಿರ್ಧರಿಸಿದೆ. ಅಮಾನತುಗೊಂಡಿದ್ದ ಎರಡು ತಂಡಗಳು ಮುಂದಿನ ವರ್ಷ ಆಡಲು ಲಭ್ಯವಾಗಲಿದ್ದು, ಗುಜರಾತ್ ಹಾಗೂ ಪುಣೆ ತಂಡಗಳು ಹೊರಗುಳಿಯಬೇಕಿದೆ ಎಂದು ಹೇಳಿದರು.
