ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ-ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿಸುದ್ದಿ!

ಚೆನ್ನೈ, ನವೆಂಬರ್ 27: ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ, ಮಾಜಿ ನಾಯಕ ಎಂಎಸ್ ಧೋನಿಯ ವೃತ್ತಿ ಬದುಕು ಕೊನೆಗೊಳ್ಳುತ್ತೆ ಅನ್ನೋದು ದೂರದ ಮಾತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆ ಎಂಬುದಕ್ಕೆ ಅವಲಂಬಿಸಿ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕು ನಿರ್ಧಾರವಾಗಲಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಧೋನಿ ಭವಿಷ್ಯದ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ, 'ಐಪಿಎಲ್ ವೇಳೆ ಆತ ಹೇಗೆ ಆಟ ಆರಂಭಿಸುತ್ತಾನೆ, ಹೇಗೆ ಆಡುತ್ತಾನೆ ಎಂಬುದರ ಮೇಲೆ ಆತನ ಅಂತಾರಾಷ್ಟ್ರೀಯ ವೃತ್ತಿ ಬದುಕು ಅವಲಂಬಿಸಿದೆ. ಟಿ20 ವಿಶ್ವಕಪ್‌ಗೆ ನಿಮ್ಮ 15 ಜನರ ತಂಡ ನಿರ್ಧರಿಸಲು ಕಡೆಯದಾಗಿ ಉಳಿಯುವ ದೊಡ್ಡ ಟೂರ್ನಿ ಐಪಿಎಲ್ ಆಗಿರಲಿದೆ,' ಎಂದು ನುಡಿದಿದ್ದಾರೆ.
ಏಕದಿನ ವಿಶ್ವಕಪ್ 2019ರ ಬಳಿಕ ಎಂಎಸ್ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಹೀಗಾಗಿ ಧೋನಿ ನಿವೃತ್ತಿ ಬಗ್ಗೆ ಕ್ರಿಕೆಟ್ ವಯಲದಲ್ಲಿ ಚರ್ಚೆಗಳಾಗುತ್ತಿವೆ. ಆದರೆ ಸದ್ಯದ ಬೆಳವಣಿಗೆ ಧೋನಿ ನಿವೃತ್ತಿ ವಿಚಾರವನ್ನು ಸದ್ಯಕ್ಕಂತೂ ದೂರವಿಟ್ಟಿದೆ.

ಅಭಿಮಾನಿಗಳ ಪಾಲಿನ ದೊಡ್ಡ ಸಿಹಿಸುದ್ದಿ
ಎಂಎಸ್ ಧೋನಿ ಪಾಲಿಗೆ, ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಇದಕ್ಕೂ ದೊಡ್ಡ ಸಿಹಿ ಸುದ್ದಿ ಮತ್ತೊಂದೇನಂದರೆ, ಧೋನಿ ತಾನು 2021ರ ವರೆಗೂ ಐಪಿಎಲ್‌ನಲ್ಲಿ ಆಡಲಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗೆಂದು ನಂಬಲಾರ್ಹ ಸಿಎಸ್‌ಕೆ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.

ಟಿ20ಗೆ ನಿವೃತ್ತಿಯಿಲ್ಲ
'ಐಪಿಎಲ್ 2021ಕ್ಕೂ ಮೊದಲು ಬಲುದೊಡ್ಡ ಹರಾಜು ನಡೆಯಲಿದೆ. ತಾನು 2021ರ ಐಪಿಎಲ್ ಟೂರ್ನಿಯಲ್ಲಿ ಆಡುವುದಾಗಿ ಧೋನಿ ನಮ್ಮಲ್ಲಿ ಹೇಳಿದ್ದಾರೆ. ಹೀಗಾಗಿ ಧೋನಿ ಟಿ20 ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಪ್ರಶ್ನೆ ಸದ್ಯಕ್ಕಂತೂ ಇಲ್ಲ,' ಎಂದು ಚೆನ್ನೈ ಸೂಪರ್ ಕಿಂಗ್ಸ್ ಮೂಲ ಮಾಹಿತಿ ನೀಡಿದೆ.

ಧೋನಿ ಮೂಲಬೆಲೆಯೆಷ್ಟು ಗೊತ್ತಾ?
ಎಂಎಸ್ ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿ ಸುಮಾರು 15 ಕೋ.ರೂ.ಗೆ ತನ್ನಲ್ಲಿ ಉಳಿಸಿಕೊಂಡಿದೆ. ಆದರೆ ಧೋನಿಗೆ ತಾನು ಫ್ರಾಂಚೈಸಿಗೆ ಹೊರೆಯಾಗೋದು ಇಷ್ಟವಿಲ್ಲ. ಹೀಗಾಗಿ ಅವರು 2020ರ ಬಳಿಕ, ಅಂದರೆ 2021ರ ಐಪಿಎಲ್‌ಗೂ ಮುನ್ನ ಹರಾಜಿನಲ್ಲಿ ಪಾಲ್ಗೊಳ್ಳಲು ಬಯಸಿದ್ದಾರೆ ಎಂದು ಮೂಲ ಹೇಳಿದೆ.

ತ್ಯಾಗಕ್ಕೆ ಮುಂದಾದ ಕೂಲ್ ಕ್ಯಾಪ್ಟನ್
'2021ರ ಐಪಿಎಲ್‌ಗಾಗಿ ನಡೆಯುವ ಆಟಗಾರರ ಹರಾಜಿನಲ್ಲಿ ತಾನು ಪಾಲ್ಗೊಳ್ಳಲು ಧೋನಿ ಬಯಸಿದ್ದಾರೆ. ಆಗ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಧೋನಿಯನ್ನು ಕಡಿಮೆ ಬೆಲೆಗೆ ಆರಿಸಲು ಸಿಎಸ್‌ಕೆಗೆ ಅವಕಾಶವಾಗಲಿದೆ. ಸಿಎಸ್‌ಕೆ ನಾಯಕವಾಗಿದ್ದು ಧೋನಿ, ಫ್ರಾಂಚೈಸಿಗಾಗಿ ತ್ಯಾಗ ಮಾಡಲಿದ್ದಾರೆ. ಆದರೆ ನಾವು ಧೋನಿಯನ್ನು ಹರಾಜು ಕಣಕ್ಕೆ ಇಳಿಸೋ ಸಾಧ್ಯತೆ ಕಡಿಮೆ,' ಎಂದು ಸಿಎಸ್‌ಕೆ ಮೂಲ ವಿವರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications