ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ರಾ ಲಲಿತ್ ಮೋದಿ? ಸತ್ಯ ಬಿಚ್ಚಿಟ್ಟ ನಟಿ!

ಐಪಿಎಲ್ ಸೃಷ್ಟಿಕರ್ತ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಲಲಿತ್ ಮೋದಿ ನಿನ್ನೆ ಖ್ಯಾತ ನಟಿ ಸುಶ್ಮಿತಾ ಸೇನ್ ಜತೆಗಿನ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದರು. ತಾನು ಮತ್ತು ಸುಷ್ಮಿತಾ ಸೇನ್ ಜತೆಗಿರುವ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದ ಲಲಿತ್ ಮೋದಿ ಲಂಡನ್‌ನಲ್ಲಿ ನಾವಿಬ್ಬರೂ ಪ್ರವಾಸದಲ್ಲಿದ್ದೇವೆ ಎಂದು ಬರೆದುಕೊಂಡಿದ್ದರು.
ಅಷ್ಟೇ ಅಲ್ಲದೆ ಮತ್ತೊಂದು ಪೋಸ್ಟ್ ಮಾಡಿದ್ದ ಲಲಿತ್ ಮೋದಿ ನಾವಿಬ್ಬರೂ ಮದುವೆಯಾಗಿಲ್ಲ, ಇಬ್ಬರೂ ಪರಸ್ಪರ ಡೇಟ್ ಮಾಡುತ್ತಿದ್ದೇವೆ ಅಷ್ಟೇ, ಆದರೆ ಮುಂದೊಂದು ದಿನ ಮದುವೆಯಾಗಲಿದ್ದೇವೆ ಎಂದು ಬರೆದುಕೊಳ್ಳುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಉಂಟುಮಾಡಿದ್ದರು.
ಲಲಿತ್ ಮೋದಿ ಸುಷ್ಮಿತಾ ಸೇನ್ ಜತೆಗಿನ ಫೋಟೋಗಳನ್ನು ಹಂಚಿಕೊಂಡು ಈ ರೀತಿಯ ಬರಹಗಳನ್ನು ಬರೆದು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ಲಲಿತ್ ಮೋದಿ ಮತ್ತು ಸುಷ್ಮಿತಾ ಸೇನ್ ಮದುವೆ ಆಗುವುದು ಖಚಿತ ಎಂಬ ಸುದ್ದಿಗಳು ಹರಿದಾಡಿದವು. ಇತ್ತ ಲಲಿತ್ ಮೋದಿ ಸುಶ್ಮಿತಾ ಸೇನ್ ಅವರ ಖಾತೆಯನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರೂ ಕೂಡ ಸುಷ್ಮಿತಾ ಸೇನ್ ಈ ವಿಚಾರವಾಗಿ ಯಾವುದೇ ರಿಪ್ಲೆಯನ್ನಾಗಲೀ ಅಥವಾ ಪ್ರತ್ಯೇಕ ಪೋಸ್ಟ್ ಆಗಲಿ ಮಾಡಿರಲಿಲ್ಲ. ಹೀಗಾಗಿ ಕೆಲವರಲ್ಲಿ ಈ ವಿಷಯದ ಕುರಿತಾಗಿ ಗೊಂದಲ ಉಂಟಾಗಿತ್ತು. ಈ ಕುರಿತಾಗಿ ಇದೀಗ ಸ್ವತಃ ನಟಿ ಸುಶ್ಮಿತಾ ಸೇನ್ ಅವರೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕುವುದರ ಮೂಲಕ ಸ್ಪಷ್ಟನೆಯನ್ನು ಈ ಕೆಳಕಂಡಂತೆ ನೀಡಿದ್ದಾರೆ.
ನಾನು ಯಾರನ್ನೂ ಮದುವೆಯಾಗುತ್ತಿಲ್ಲ ಎಂದ ಸೇನ್
ನಟಿ ಸುಶ್ಮಿತಾ ಸೇನ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ತನ್ನ ಕುಟುಂಬದವರ ಜೊತೆಗಿನ ಸೆಲ್ಫಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು 'ನಾನು ಸಂತೋಷದ ಸ್ಥಳದಲ್ಲಿದ್ದೇನೆ. ಯಾವುದೇ ಮದುವೆ ಇಲ್ಲ, ಹಾಗೂ ಯಾವುದೇ ನಿಶ್ಚಿತಾರ್ಥವೂ ಕೂಡ ಇಲ್ಲ. ಕುಟುಂಬದವರ ಪ್ರೀತಿಯಿಂದ ಸುತ್ತುವರೆದಿದ್ದೇನೆ. ಅಗತ್ಯವಿದ್ದಷ್ಟು ಸ್ಪಷ್ಟನೆಯನ್ನು ನೀಡಿದ್ದೇನೆ ಹಾಗೂ ಈಗ ನನ್ನ ಜೀವನ ಮತ್ತು ಕೆಲಸಕ್ಕೆ ಮರಳಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸುಷ್ಮಿತಾ ಸೇನ್ ಲಲಿತ್ ಮೋದಿ ಜತೆಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದ್ದಾರೆ.

ಸುಳ್ಳು ಹೇಳಿದ್ರಾ ಲಲಿತ್ ಮೋದಿ?
ಇನ್ನು ಸುಷ್ಮಿತಾ ಸೇನ್ ಈ ರೀತಿಯ ಪೋಸ್ಟ್ ಮಾಡಿದ ಬೆನ್ನಲ್ಲೇ ನಿನ್ನೆ ಲಲಿತ್ ಮೋದಿ ಪೋಸ್ಟ್ ಮಾಡಿದ್ದ ವಿಷಯಗಳೆಲ್ಲಾ ಸುಳ್ಳಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಲಲಿತ್ ಮೋದಿ ತಾವು ಶೀಘ್ರದಲ್ಲಿಯೇ ಸುಷ್ಮಿತಾ ಸೇನ್ ಅವರನ್ನು ವಿವಾಹವಾಗುವುದಾಗಿ ಬರೆದುಕೊಂಡಿದ್ದರು ಹಾಗೂ ಲಂಡನ್‌ನಲ್ಲಿ ಇಬ್ಬರೂ ಸಮಯ ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಸುಷ್ಮಿತಾ ಸೇನ್ ಯಾವುದೇ ಮದುವೆಯಿಲ್ಲ ಹಾಗೂ ನಾನು ಸಂತೋಷದ ಸ್ಥಳದಲ್ಲಿದ್ದೇನೆ ಎಂದು ಬರೆದುಕೊಳ್ಳುವುದರ ಮೂಲಕ ಮದುವೆ ಮತ್ತು ಲಂಡನ್‌ನಲ್ಲಿರುವ ಸುದ್ದಿಯನ್ನು ತಿರಸ್ಕರಿಸಿದ್ದಾರೆ.

ಆದರೂ ಇದೇ ಗೊಂದಲ!
ಇನ್ನು ಸುಶ್ಮಿತಾ ಸೇನ್ ಯಾವುದೇ ಮದುವೆಯಾಗುತ್ತಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆಯನ್ನೇನೋ ನೀಡಿದ್ದಾರೆ. ಆದರೆ ಈ ಪೋಸ್ಟ್ ನಂತರ ನೆಟ್ಟಿಗರಿಗೆ ಸ್ಪಷ್ಟನೆ ಸಿಗುವುದಕ್ಕಿಂತ ಗೊಂದಲ ದುಪ್ಪಟ್ಟಾಗಿದೆ ಎನ್ನಬಹುದು. ಏಕೆಂದರೆ ಸುಷ್ಮಿತಾ ಸೇನ್ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದರೆ ಮತ್ತೊಂದೆಡೆ ಲಲಿತ್ ಮೋದಿ ಪೋಸ್ಟ್ ಮಾಡಿದ್ದ ಚಿತ್ರಗಳಲ್ಲಿ ಸ್ವತಃ ಸುಸ್ಮಿತಾ ಸೇನ್ ಅವರೇ ನಗುಮೊಗದ ಪೋಸ್ ನೀಡಿದ್ದಾರೆ. ಹೀಗಾಗಿ ನೆಟ್ಟಿಗರು ಲಲಿತ್ ಮೋದಿ ಪೋಸ್ಟ್ ಮಾಡಿರುವುದು ನಿಜಾನಾ ಅಥವಾ ಸುಷ್ಮಿತಾ ಸೇನ್ ಪೋಸ್ಟ್ ಮಾಡಿರುವುದು ನಿಜಾನಾ ಎಂಬ ಗೊಂದಲದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications