'ಆತನಷ್ಟು ಪರಿಪೂರ್ಣ ಕ್ರಿಕೆಟಿಗನನ್ನು ನಾನು ಕಂಡಿಲ್ಲ' ಎಂದು ಗವಾಸ್ಕರ್ ಹೇಳಿದ್ದು ಯಾರ ಬಗ್ಗೆ?

ಕ್ರಿಕೆಟ್‌ನ ಬಗ್ಗೆ ಅದರಲ್ಲೂ ಬ್ಯಾಟಿಂಗ್ ಕುರಿತಾಗಿ ಚರ್ಚೆ ನಡೆದಾಗ ಅದು ಬ್ಯಾಟಿಂಗ್‌ನ ತಾಂತ್ರಿಕ ವಿಚಾರವಾಗಿ, ಅಥವಾ ರನ್ ಗಳಿಕೆಯ ಬಗ್ಗೆ, ಒತ್ತಡದಲ್ಲಿ ಆಡುವ ಕುರಿತಾಗಿ ಅಥವಾ ಶತಕಗಳನ್ನು ಬಾರಿಸುವ ಕಾರಣದಿಂದಾಗಿ ಆ ಮಾತು ಓರ್ವ ಕ್ರಿಕೆಟಿಗನ ಹೆಸರನ್ನು ಉಲ್ಲೇಖಿಸದೆ ಸಂಪೂರ್ಣವಾಗಲಾರದು. ಅದು ಬೇರೆ ಯಾರೂ ಅಲ್ಲ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್.
ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಮಾತನಾಡುತ್ತಾ ಸಚಿನ್ ತೆಂಡೂಲ್ಕರ್ ಕುರಿತಾಗಿ ಇದೇ ಸಂಗತಿಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. ಬ್ಯಾಟಿಂಗ್‌ನ ಪರಿಪೂರ್ಣತೆಗೆ ಸಚಿನ್ ತೆಂಡೂಲ್ಕರ್ ಅತ್ಯಂತ ಸಾಮೀಪ್ಯವನ್ನು ಹೊಂದಿದ ಆಟಗಾರ ಎಂದು ಬಣ್ಣಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಸುನಿಲ್ ಗವಾಸ್ಕರ್ ಯಾವ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಮುಂದೆ ಓದಿ..

ಆತ ಪರಿಪೂರ್ಣ ಆಟಗಾರ
ಸುನಿಲ್ ಗವಾಸ್ಕರ್ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಆಟಗಾರ. ಸ್ವತಃ ತಾವೂ ಕ್ರಿಕೆಟ್ ದಿಗ್ಗಜರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಸುನಿಲ್ ಗವಾಸ್ಕರ್ ಸಚಿನ್ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮುಕ್ತವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಹೊಂದಿದಷ್ಟು ಪರಿಪೂರ್ಣತೆಯನ್ನು ಮತ್ಯಾವ ಆಟಗಾರನಲ್ಲೂ ತಾನು ಈವರೆಗೆ ಕಂಡಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ಸಚಿನ್ ರೀತಿಯ ಆಟಗಾರನನ್ನು ಕಂಡಿಲ್ಲ
ನನ್ನ ಅನುಭವದಲ್ಲಿ ಹೇಳುವುದಾದರೆ ಬ್ಯಾಟಿಂಗ್‌ನಲ್ಲಿ ಪರಿಪೂರ್ಣತೆಗೆ ಹತ್ತಿರವಾದವರು ಸಚಿನ್ ತೆಂಡೂಲ್ಕರ್. ಆತನಂತಾ ಇನ್ನೋರ್ವ ಬ್ಯಾಟ್ಸ್‌ಮನ್‌ಅನ್ನು ನಾನು ಈವರೆಗೆ ಕಂಡಿಲ್ಲ ಎಂದು ಸುನಿಲ್ ಗವಾಸ್ಕರ್ ಸಚಿನ್ ತೆಂಡೂಲ್ಕರ್ ಬಗ್ಗೆ ಇಂಡಿಯಾ ಟುಡೆ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಸಚಿನ್ ಸಮೀಪಕ್ಕೂ ಯಾರೂ ಇಲ್ಲ
"ಕ್ರಿಕೆಟ್‌ನಲ್ಲಿ ಬೆಳೆಯುತ್ತಿದ್ದ ಕಾಲದಿಂದ ನಾನು ಸಾಕಷ್ಟು ಬ್ಯಾಟ್ಸ್‌ಮನ್‌ಗಳನ್ನು ಕಂಡಿದ್ದೇನೆ, ನಾನು ಕ್ರಿಕೆಟ್ ಆಡುತ್ತಿದ್ದ ಕಾಲದಿಂದ ಹಿಡಿದು ಈಗ ಕ್ರಿಕೆಟ್ ವೀಕ್ಷಿಸುತ್ತಿರುವವರೆಗೆ ನಾನು ಸಾಕಷ್ಟು ಭಯಾನಕ ಆಟಗಾರರನ್ನು ಕಂಡಿದ್ದೇನೆ. ಆದರೆ ಬ್ಯಾಟಿಂಗ್‌ನಲ್ಲಿ ಪರಿಪೂರ್ಣತೆಯ ವಿಚಾರಕ್ಕೆ ಬಂದಾಗ ಯಾರೊಬ್ಬರೂ ಕೂಡ ಸಚಿನ್ ತೆಂಡೂಲ್ಕರ್ ಅವರ ಸಮೀಪಕ್ಕೂ ಬರುವುದಿಲ್ಲ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಎಲ್ಲಾ ಹೊಡೆತಗಳನ್ನು ಹೊಂದಿದ್ದಾರೆ.
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲಿಗೆ 10000 ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆಯುವುದಕ್ಕೂ ಮುನ್ನ ಸುನಿಲ್ ಗವಾಸ್ಕರ್ ತಮ್ಮ ಹೆಸರಿನಲ್ಲಿ ಈ ದಾಖಲೆಯನ್ನು ಬರೆದುಕೊಂಡಿದ್ದರು. ಈಗ ಸುನಿಲ್ ಗವಾಸ್ಕರ್ ಕುರಿತಾಗಿ ಮಾತನಾಡುತ್ತಾ "ಸಚಿನ್ ತಮ್ಮ ಪುಸ್ತದಲ್ಲಿ ಎಲ್ಲಾ ವಿಧದ ಹೊಡೆತಗಳನ್ನೂ ಹೊಂದಿದ್ದರು" ಎಂದು ಬಣ್ಣಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications