For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ಅಲ್ಲ; ಏಷ್ಯಾಕಪ್, ವಿಶ್ವಕಪ್‌ಗೆ ಈ ಸ್ಟಾರ್ ಉಪನಾಯಕನಾಗುವ ಸಾಧ್ಯತೆ; ವರದಿ

ಇದೇ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2023ರ ಏಷ್ಯಾಕಪ್ ಪಂದ್ಯಾವಳಿ ಮತ್ತು ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತ ತಂಡದ ಸಿದ್ಧತೆ ಆರಂಭವಾಗಿದೆ.

ಇದೇ ವೇಳೆ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಉಪನಾಯಕನ ಸ್ಥಾನಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ವೇಗಿ ಜಸ್ಪ್ರೀತ್ ಬುಮ್ರಾ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

Not Hardik Pandya; Jasprit Bumrah Likely To Be Indias Vice-Captain For Asia Cup, World Cup; Report

ಈಗಾಗಲೇ ಹಾರ್ದಿಕ್ ಪಾಂಡ್ಯ ಅವರನ್ನು ನಿಯಮಿತ ಟಿ20 ನಾಯಕನನ್ನಾಗಿ ನೇಮಿಸಲಾಗಿದೆ. ಸದ್ಯ ಶುಕ್ರವಾರದಿಂದ ಆರಂಭವಾದ ಟಿ20 ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿರುವ ಜಸ್ಪ್ರೀತ್ ಬುಮ್ರಾ, ಏಕದಿನ ಪಂದ್ಯಗಳಿಗೆ ಉಪನಾಯಕನಾಗಲು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಕಠಿಣ ಸ್ಪರ್ಧೆ ನೀಡಲು ಸಜ್ಜಾಗಿದ್ದಾರೆ.

""ನಾಯಕತ್ವದ ಹಿರಿತನದ ದೃಷ್ಟಿಯಿಂದ ನೋಡಿದರೆ, ಜಸ್ಪ್ರೀತ್ ಬುಮ್ರಾ ಅವರು 2022ರಲ್ಲಿ ಟೆಸ್ಟ್ ತಂಡದ ನಾಯಕರಾಗಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಮುಂದಿದ್ದಾರೆ. ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾದ ಏಕದಿನ ಪ್ರವಾಸದ ಸಮಯದಲ್ಲಿ ಪಾಂಡ್ಯಗಿಂತ ಮೊದಲು ಏಕದಿನ ತಂಡದ ಉಪನಾಯಕರಾಗಿದ್ದರು''.

"ಪ್ರಮುಖ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಳಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ರೋಹಿತ್ ಶರ್ಮಾರಿಗೆ ಏಕದಿನ ಉಪನಾಯಕನನ್ನಾಗಿ ಮಾಡಿದರೆ ಆಶ್ಚರ್ಯಪಡಬೇಡಿ. ರುತುರಾಜ್ ಗಾಯಕ್ವಾಡ್ ಬದಲಿಗೆ ಐರ್ಲೆಂಡ್‌ ವಿರುದ್ಧ ಭಾರತ ತಂಡದ ನಾಯಕತ್ವವನ್ನು ವಹಿಸಲು ಕಾರಣವಿದೆ," ಎಂದು ಬಿಸಿಸಿಐ ಅನಾಮಧೇಯತೆಯ ಮೂಲಗಳು ಪಿಟಿಐಗೆ ತಿಳಿಸಿವೆ.

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಯಶಸ್ವಿ ಪ್ರದರ್ಶನವನ್ನು ಹೊಂದಿದ್ದಾರೆ. 2022ರಲ್ಲಿ ತಮ್ಮ ತಂಡದ ಚೊಚ್ಚಲ ಪಂದ್ಯಾವಳಿಯಲ್ಲಿ ಪ್ರಶಸ್ತಿಗೆ ಮುನ್ನಡೆಸಿದರೆ ಮತ್ತು 2023ರಲ್ಲಿ ರನ್ನರ್-ಅಪ್ ಸ್ಥಾನಕ್ಕೆ ಮುನ್ನಡೆಸಿದರು.

ಆದರೆ, ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ಆಶಿಶ್ ನೆಹ್ರಾ ಅವರಂತಹ ಚಾಣಾಕ್ಷ ಕೋಚ್ ಕೂಡ ಸಾಕಷ್ಟು ಪಾತ್ರ ವಹಿಸಿದ್ದಾರೆ ಎಂಬುದನ್ನು ಬಹಳಷ್ಟು ಜನರು ಒಪ್ಪುತ್ತಾರೆ.

ಇನ್ನು ಭಾರತ ತಂಡಕ್ಕೆ ಸಂಬಂಧಿಸಿದಂತೆ, ಹಾರ್ದಿಕ್ ಪಾಂಡ್ಯ ಅವರು ವೆಸ್ಟ್ ಇಂಡೀಸ್‌ನಲ್ಲಿ ತಮ್ಮ ಮೊದಲ ದ್ವಿಪಕ್ಷೀಯ ಟಿ20 ಸರಣಿಯನ್ನು ಸೋತರು. ಈ ವೇಳೆ ಅಕ್ಷರ್ ಪಟೇಲ್ ಅವರನ್ನು ಬೌಲಿಂಗ್ ಮಾಡಿಸದಿರುವುದು ಮತ್ತು ಮುಖೇಶ್ ಕುಮಾರ್ ಅವರನ್ನು ಡೆತ್ ಓವರ್‌ನಲ್ಲಿ ಬೌಲಿಂಗ್‌ ಮಾಡಿಸದ ಅವರ ಕೆಲವು ನಿರ್ಧಾರಗಳು ಟೀಕೆಗೆ ಕಾರಣವಾಗಿವೆ.

ಐರ್ಲೆಂಡ್ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿ ಜಸ್ಪ್ರೀತ್ ಬುಮ್ರಾ ಪಡೆ

ಭಾನುವಾರ, ಆಗಸ್ಟ್ 20ರಂದು ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆತಿಥೇಯ ಐರ್ಲೆಂಡ್ ಮತ್ತು ಪ್ರವಾಸಿ ಭಾರತ ತಂಡಗಳು ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮಳೆ-ಬಾಧಿತ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 2 ರನ್‌ಗಳಿಂದ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Story first published: Sunday, August 20, 2023, 10:38 [IST]
Other articles published on Aug 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+