Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಚುನಾವಣೆಯಲ್ಲಿ ಗಂಭೀರ್ ಸ್ಪರ್ಧಿಸಬಹುದು, ನನಗೆ ರಾಜಕೀಯ ಬೇಡ' : ಸೆಹ್ವಾಗ್

 ‘Not interested’! Cricketer Virender Sehwag declines BJP’s offer to contest Lok Sabha polls

ನವದೆಹಲಿ, ಮಾರ್ಚ್ 15: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ, ಗೌತಂ ಗಂಭೀರ್, ದೆಹಲಿಯ ಯಾವುದಾದರೂ ಒಂದು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎನ್ನುವ ಸುದ್ದಿಯಿದೆ, ರಾಜಕೀಯದ ಬಗ್ಗೆ ಗೌತಮ್ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಗಂಭೀರ್ ಸ್ಪರ್ಧೆ?

ಆದರೆ, ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ಸೆಹ್ವಾಗ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, 'ಕೆಲವು ವಿಷಯಗಳು ಬದಲಾಗುವುದೇ ಇಲ್ಲ, ಇದೇ ಊಹಾಪೋಹ 2014ರಲ್ಲೂ ಹರಡಿತ್ತು, ಈಗ 2019ಕ್ಕೂ ಹರಡುತ್ತಿದೆ, ಆದರೆ ನನಗೆ ಆಗಲೂ ಆಸಕ್ತಿ ಇರಲಿಲ್ಲ, ಈಗಲೂ ಇಲ್ಲ' ಎಂದಿದ್ದಾರೆ.



ಮೋದಿ ಸರ್ಕಾರದ ಪರ ಆಗಾಗ ಟ್ವೀಟ್ ಮಾಡಿ ಬ್ಯಾಟಿಂಗ್ ಮಾಡುವ ಸೆಹ್ವಾಗ್ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಸೆಹ್ವಾಗ್ ಗೆ ಟ್ಯಾಗ್ ಮಾಡಿದ್ದ ಟ್ವೀಟ್ ಗೆ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.

Story first published: Friday, March 15, 2019, 16:00 [IST]
Other articles published on Mar 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+