ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!

ವಿರಾಟ್ ಕೊಹ್ಲಿ ಸಾಲು ಸಾಲು ಶತಕ ಮತ್ತು ಅಬ್ಬರದ ರನ್ ಬಾರಿಸುವುದರ ಮೂಲಕ ದ ಕಿಂಗ್ ಆಫ್ ಕ್ರಿಕೆಟ್ ಎಂದೇ ಖ್ಯಾತಿಯನ್ನು ಪಡೆದ ಆಟಗಾರ. ಕೇವಲ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಸರಿಗಟ್ಟಿ ತಾನೊಬ್ಬ ಶ್ರೇಷ್ಠ ಆಟಗಾರ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ.
ಆದರೆ ಪ್ರತಿಯೊಬ್ಬ ಕ್ರಿಕೆಟಿಗನ ವೃತ್ತಿಜೀವನದಂತೆ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿಯೂ ಕೂಡ ಕಳಪೆ ಫಾರ್ಮ್ ಎಂಬ ಭೂತ ವಕ್ಕರಿಸಿದೆ ಎಂದೇ ಹೇಳಬಹುದು. ಹೌದು, ರನ್ ಮೆಷಿನ್ ಎಂದೇ ಹೆಸರನ್ನು ಸಂಪಾದಿಸಿದ್ದ ವಿರಾಟ್ ಕೊಹ್ಲಿ ಶತಕ ಬಾರಿಸಿ 900ಕ್ಕೂ ಹೆಚ್ಚಿನ ದಿನಗಳೇ ಕಳೆದು ಹೋಗಿವೆ ಹಾಗೂ ಇತ್ತೀಚಿನ ದಿನಗಳಲ್ಲಂತೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಲು ಕೂಡಾ ಪರದಾಡುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಪ್ರವಾಸದ ಸರಣಿಗಳಲ್ಲಿಯೂ ಸಹ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕೊಹ್ಲಿ ಯಾವುದೇ ಪಂದ್ಯದಲ್ಲಿಯೂ ಕೂಡ 20 ರನ್ ಗಡಿ ದಾಟಲಾಗದೇ ಅಕ್ಷರಶಃ ಮಂಕಾಗಿದ್ದಾರೆ. ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ಪದೇಪದೆ ವಿಫಲವಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಟೀಕಾತ್ಮಕ ಕೂಗು ಸಹ ಕೇಳಿ ಬಂದಿದೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ರೀತಿಯ ಹಿರಿಯ ಲೆಜೆಂಡರಿ ಕ್ರಿಕೆಟಿಗರು ಸಹ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ 23 ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶ ವಂಚಿತರಾಗಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದಿದೆ ಓದಿ.

ಕೊಹ್ಲಿ ಮಿಸ್ ಮಾಡಿಕೊಂಡದ್ದು 23 ಪಂದ್ಯಗಳು
ವಿರಾಟ್ ಕೊಹ್ಲಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಮುಕ್ತಾಯವಾದ ನಂತರ ಕೆಲವೊಂದಿಷ್ಟು ಸರಣಿಗಳಿಂದ ಹೊರಗುಳಿದಿದ್ದರು. ಈಗಲೂ ಸಹ ವಿರಾಟ್ ಕೊಹ್ಲಿ ವಿಶ್ರಾಂತಿ ಎಂದು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ ಟ್ವೆಂಟಿ ಸರಣಿ ಹಾಗೂ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸವನ್ನು ಸಹ ಕೈ ತಪ್ಪಿಸಿಕೊಂಡಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಇಲ್ಲಿಯವರೆಗೂ ಕೈ ತಪ್ಪಿಸಿಕೊಂಡಿರುವ 23 ಪಂದ್ಯಗಳ ಪಟ್ಟಿ ಕೆಳಕಂಡಂತಿದೆ.
• ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ - 3 ಪಂದ್ಯಗಳು ( ವಿಶ್ರಾಂತಿ )
• ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ - ಪ್ರಥಮ ಪಂದ್ಯ ( ವಿಶ್ರಾಂತಿ )
• ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ( ಗಾಯದ ಸಮಸ್ಯೆ )
• ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿ - ತೃತೀಯ ಪಂದ್ಯ ( ವಿಶ್ರಾಂತಿ )
• ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿ - 3 ಪಂದ್ಯಗಳು ( ವಿಶ್ರಾಂತಿ )
• ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ - 5 ಪಂದ್ಯಗಳು ( ವಿಶ್ರಾಂತಿ )
• ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ - ಪ್ರಥಮ ಪಂದ್ಯ ( ಗಾಯದ ಸಮಸ್ಯೆ )
• ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ - 3 ಪಂದ್ಯಗಳು ( ವಿಶ್ರಾಂತಿ )
• ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿ - 5 ಪಂದ್ಯಗಳು ( ವಿಶ್ರಾಂತಿ )
ಹೀಗೆ ಇಷ್ಟು ಸರಣಿಗಳ ಪಂದ್ಯಗಳನ್ನು ವಿಶ್ರಾಂತಿ ಹಾಗೂ ಗಾಯದ ಸಮಸ್ಯೆ ಕಾರಣದಿಂದಾಗಿ ಮಿಸ್ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಒಟ್ಟಾರೆ ಕೈ ತಪ್ಪಿಸಿಕೊಂಡಿರುವುದು 23 ಪಂದ್ಯಗಳನ್ನು.

ಕಳಪೆ ಫಾರ್ಮ್ ಮುಳುವಾಯಿತಾ?
ಈ ಹಿಂದೆ ವಿರಾಟ್ ಕೊಹ್ಲಿ ವರ್ಷವೊಂದರಲ್ಲಿ ಇಷ್ಟು ಪಂದ್ಯಗಳನ್ನು ವಿಶ್ರಾಂತಿಯ ಕಾರಣದಿಂದಾಗಿ ಕೈ ತಪ್ಪಿಸಿಕೊಂಡಿದ್ದ ಉದಾಹರಣೆಗಳೇ ಇರಲಿಲ್ಲ. ಆದರೆ ಕಳಪೆ ಫಾರ್ಮ್ ಆರಂಭವಾದ ನಂತರ ಬಿಸಿಸಿಐ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೆಪದಲ್ಲಿ ಸಾಲು ಸಾಲು ಪಂದ್ಯಗಳಿಂದ ಹೊರಗಿಡುತ್ತಿದೆ ಎಂಬ ಅಭಿಪ್ರಾಯವೂ ಸಹ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

ತೃತೀಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸದಿದ್ದರೆ ಕೆಟ್ಟ ಮೈಲಿಗಲ್ಲು ಮುಟ್ಟಲಿದ್ದಾರೆ ಕೊಹ್ಲಿ
ಇನ್ನು 2019ರ ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಿಮವಾಗಿ ತಮ್ಮ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿದ್ದರು. ಇದಾದ ನಂತರ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಕೊಹ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗೆ ಕೊಹ್ಲಿ ಶತಕ ಬಾರಿಸದೇ 900ಕ್ಕೂ ಹೆಚ್ಚಿನ ದಿನಗಳು ಕಳೆದಿದ್ದು, ಮುಂಬರುವ ಆಗಸ್ಟ್ 19ಕ್ಕೆ 1000 ದಿನಗಳು ಕಳೆಯಲಿವೆ. ಹೀಗಾಗಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ತೃತೀಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸದೇ ಹೋದರೆ ಶತಕ ರಹಿತ 1000 ದಿನಗಳನ್ನು ಪೂರೈಸಿ ಕೆಟ್ಟ ಮೈಲಿಗಲ್ಲನ್ನು ನಿರ್ಮಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications